ʻದಿ ವ್ಯಾಕ್ಸಿನ್ ವಾರ್ʼ ಸಿನಿಮಾಗೆ ಪ್ರಧಾನಿ ಮೆಚ್ಚುಗೆ

Advertisement

ಜೋಧ್​​ಪುರ: ದಿ ವ್ಯಾಕ್ಸಿನ್ ವಾರ್ ಚಿತ್ರದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನದ ಜೋಧ್‌ಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ ಬಿಡುಗಡೆಯಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ‘ದಿ ವ್ಯಾಕ್ಸಿನ್ ವಾರ್’ ಚಲನಚಿತ್ರವನ್ನು ಪ್ರಸ್ತಾಪಿಸಿದರು. ಭಾರತದ ವಿಜ್ಞಾನಿಗಳ ಕೊಡುಗೆಯನ್ನು ಶ್ಲಾಘಿಸಿದರು. ʻದಿ ವ್ಯಾಕ್ಸಿನ್‌ ವಾರ್‌’ ಎಂಬ ಸಿನಿಮಾ ಬಂದಿರುವುದನ್ನು ಕೇಳಿದ್ದೇನೆ ಎಂದ ಪ್ರಧಾನಿ ಮೋದಿ, ನಮ್ಮ ದೇಶದ ವಿಜ್ಞಾನಿಗಳು ಭಾರತದಲ್ಲಿ ಕೋವಿಡ್‌ ವಿರುದ್ಧ ಹೋರಾಡಲು ಹಗಲಿರುಳು ಶ್ರಮಿಸಿದರು ಮತ್ತು ಅವರ ಪ್ರಯೋಗಾಲಯದಲ್ಲಿ ಋಷಿಯಂತೆ ಧ್ಯಾನ ಮಾಡಿದರು. ಹಲವು ಸವಾಲುಗಳನ್ನು ಎದುರಿಸಿದ ದೇಶದ ವಿಜ್ಞಾನಿಗಳು ಈ ಯಶಸ್ಸನ್ನು ಹೇಗೆ ಸಾಧಿಸಿದರು ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಚಲನಚಿತ್ರವನ್ನು ನೋಡಿದ ನಂತರ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುತ್ತಾನೆ. ಈ ಚಿತ್ರವನ್ನು ನಿರ್ಮಿಸಿದ ಈ ಚಿತ್ರದ ನಿರ್ಮಾಪಕರನ್ನು ನಾನು ಅಭಿನಂದಿಸುತ್ತೇನೆ ಎಂದರು.