ʻನಟ ಚೇತನ್ ಹಿಂದು ಧರ್ಮ ಟಾರ್ಗೆಟ್ ಮಾಡೋದನ್ನ ಬಿಡಲಿʼ

chakravarthi sulibele
Advertisement

ನಟ ಚೇತನ್‌ರಿಗೆ ಸಿನಿಮಾ ಮಾಡಿ ಹಿಟ್ ಮಾಡಿಕೊಳ್ಳೋ ಸಾಮರ್ಥ್ಯವಿಲ್ಲ ಬದಲಾಗಿ ಒಂದಲ್ಲ ಒಂದು ವಿಚಾರದಿಂದ ಸನಾತನ ಹಿಂದು ಧರ್ಮವನ್ನು ಟಾರ್ಗೆಟ್ ಮಾಡ್ತಾ ಸದಾ ಸುದ್ದಿಯಲ್ಲಿರಬೇಕೆಂಬ ಹುಚ್ಚು ಮನಸ್ಸು ಅವರದ್ದಾಗಿದೆ. ಈಗ ರಿಷಬ್ ಶೆಟ್ಟಿಯವರ ಕಾಂತಾರ ಚಿತ್ರದಿಂದ ಮತ್ತೆ ವಿವಾದ ಎಬ್ಬಿಸಿರುವದು ಹೊಸತನವಲ್ಲವೆಂದು ಸೂಲಿಬೆಲೆ ಚಕ್ರವರ್ತಿ ಚೇತನ್ ವಿರುದ್ಧ ಕಿಡಿಕಾರಿದರು.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುವ ಸಂದರ್ಭ `ಸಂಯುಕ್ತ ಕರ್ನಾಟಕ’ದೊಂದಿಗೆ ಮಾತನಾಡಿ, ಬುಡಕಟ್ಟು ಜನಾಂಗ, ಭಾರತೀಯ ಮೂಲ ಭಾರತೀಯ ಸಂಸ್ಕೃತಿಯೇ ಬೇರೆ ಎಂಬುದು ಎಡಪಂಕ್ತಿಯರ ವಾದ ಸಾಮಾನ್ಯವಾಗಿದೆ. ಇಡೀ ಜಗತ್ತು ಇದನ್ನು ತಿರಸ್ಕರಿಸಿದೆ ಆದರೂ ಈ ವಾದದಿಂದಲೇ ನೇತಾಡುವದು ಬಿಟ್ಟರೆ ಹೋರಾಟದ ತಳಪಾಯ ತಪ್ಪುತ್ತದೆ ಎಂಬ ಕಲ್ಪನೆಯಾಗಿದೆ.
ಹಿಂದು ಧರ್ಮ ಎಲ್ಲವನ್ನೂ ಒಳಗೊಳ್ಳುವ ಧರ್ಮ, ಬುಡಕಟ್ಟು ಸೇರಿ ಯಾವುದೇ ಸಂಸ್ಕೃತಿ ಹಿಂದೂ ಧರ್ಮದ ಅಂಗವಾಗಿದೆ. ದೇವರಗಿಂತ ದೈವ ಹೆಚ್ಚು ಎಂಬುದು ಚಿತ್ರದಲ್ಲಿದೆ.
ಆದರೆ ದೈವ ಮತ್ತು ದೇವರ ಪೂಜೆ ದಕ್ಷಿಣ ಕನ್ನಡದ ಜನ ಬೆಳೆಸಿಕೊಂಡು ಬಂದಿದ್ದಾರೆ. ದುರದೃಷ್ಟವೆಂದರೆ ಚೇತನ್‌ರಿಗೆ ಓದುವ ಅಥವಾ ಅರಿತುಕೊಳ್ಳಲು ಸಮಯವಿಲ್ಲ. ಅಲ್ಲಿನ ಜನರ ಸಂಸ್ಕೃತಿ ಸನಾತನ ಧರ್ಮದ ಭಾಗವಾಗಿ ಬದುಕುತ್ತಿರುವುದನ್ನು ನೋಡಲಿ.
ಮೂರ್ಖತನ ಬಿಟ್ಟು ಭಾರತೀಯರ ಹಾಗೂ ಸಂಸ್ಕೃತಿಯೊಂದಿಗೆ ಒಂದಾಗಿ ಚೇತನ್ ಮುಂದುವರೆಯಲಿ. ಇವೆಲ್ಲ ಮಾತುಗಳನ್ನಾಡುವ ಮೊದಲು ಎರಡು ನಾಗರಿಕತೆಯನ್ನು ಬಿಟ್ಟು ಪಕ್ಕಾ ಭಾರತೀಯರಾಗುವುದನ್ನು ಕಲಿಯಲಿ ಎಂದು ಸೂಲಿಬೆಲೆ ತಿಳಿಸಿದರು.