ʼಮಾಡೆಲಿಂಗ್ ರೂಪದರ್ಶಿಯರಿಗೆ ಮಾತ್ರ ಸೀಮಿತವಾದುದಲ್ಲʼ

Advertisement

ಬೆಂಗಳೂರು: ಮಾಡೆಲಿಂಗ್ ಎಂಬುದು ಬರೀ ರೂಪದರ್ಶಿಯರಿಗೆ ಮಾತ್ರ ಸೀಮಿತವಾದುದಲ್ಲ. ಅವಕಾಶಗಳನ್ನು ಉಪಯೋಗಿಸಿಕೊಂಡು ಸ್ಪರ್ಧೆಯಲ್ಲಿ ಭಗವಹಿಸುವ ಆಸಕ್ತಿಯೊಂದು ಇದ್ದರೆ ಗೃಹಿಣಿಯರೂ ಸಾರ್ವಜನಿಕರ ಎದುರಲ್ಲಿ ಸುಂದರಿ ಪಟ್ಟವನ್ನು ಅಲಂಕರಿಸಬಹುದು. ಈ ಮಾತಿಗೆ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನ ೫-೬ ಗೃಹಿಣಿಯರು ಸೇರಿದಂತೆ ಏಳು ಮಂದಿ ಪ್ರಮಿಳೆಯರು ಶ್ರೀಮತಿ ಇಂಡಿಯಾ ಗ್ಯಾಲಕ್ಸಿ-೨೦೨೨ ಟ್ರೋಫಿ ಗೆದ್ದುಕೊಳ್ಳುವ ಮೂಲಕ ಸಾಧನೆ ಮರೆದು ಸಾಕ್ಷಿಯಾಗಿದ್ದಾರೆ.
ಆಗಸ್ಟ್ ೨೯ ರಂದು ದೆಹಲಿಯಲ್ಲಿ ಗಗನ್ ಕಪೂರ್ ಸಂಸ್ಥೆಯು ಗ್ರಹಿಣಿಯರಿಗಾಗಿ ಏರ್ಪಡಿಸಿದ್ದ ರಾಷ್ಟ್ರ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಬಂದು ಭಾಗವಹಿಸಿದ್ದ ಸುಮಾರು ಮೂವತ್ತು ಸಾವಿರ ಸ್ಫರ್ಧಾಳುಗಳಲ್ಲಿ ಕೊನೆಯ ಸುತ್ತಿಗೆ ಆಯ್ಕೆಯಾದ ಕೇವಲ ಅರವತ್ತು ಮಹಿಳೆಯರಲ್ಲಿ ಎಲ್ಲರನ್ನು ಹಿಂದಿಕ್ಕಿದ ನಮ್ಮ ‘ಬೆಂಗಳೂರಿನ ಬ್ಯೂಟಿ ಕ್ವೀನ್ಸ್’ ಬಹುತೇಕ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡು ಬೀಗಿದರು. ಈ ಹಿನ್ನೆಲೆಯಲ್ಲಿ ಶನಿವಾರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಂದರಿ ಗೃಹಿಣಿಯರಾದ ಗಾಯತ್ರಿ ನಿತಿನ್, ಬನಶ್ರೀ ಸೇನ್, ಕವಿತಾ ಪೋಪ್ಲಿ, ಇಂದು ವೆಂಕಟೇಶ್ವರನ್, ದೀಪಿಕಾ ಬಟ್ಟೆಪಟಿ, ದೀಪ್ತಿ ದೇಸಿರೆಡ್ಡಿ, ಶಾರದಾ ಸುಬ್ರಮಣ್ಯ ತಮ್ಮ ಅನುಭವ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡರು.