ʼಮೈಸೂರು ಹುಲಿʼ ಖ್ಯಾತಿ ಹೋರಿಯ ತಿಥಿ

ಮೈಸೂರು ಹುಲಿ
Advertisement

ಹಾವೇರಿ(ರಾಣೇಬೆನ್ನೂರ): ಕಳೆದ ವಾರದಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದ ಮೈಸೂರು ಹುಲಿ ಎಂಬ ಖ್ಯಾತಿಯ ಹೋರಿಯ ತಿಥಿಯ ಕಾರ್ಯವನ್ನು ನಗರದಲ್ಲಿ ನೆರವೇರಿಸಲಾಯಿತು.
ಹೋರಿ ಹಬ್ಬದಲ್ಲಿ ಮಿಂಚಿನ ಓಟವನ್ನು ಓಡುತ್ತಾ ಅಭಿಮಾನಿಗಳಲ್ಲಿ “ಮೈಸೂರು ಹುಲಿ” ಎಂಬ ಹೆಸರು ಪಡೆದಿದ್ದ ಹೋರಿ ಜ. 29ರಂದು ಮೃತಪಟ್ಟಿದ್ದು, ಹೋರಿಯ ಮಾಲೀಕರು ಹಾಗೂ ಅಭಿಮಾನಿಗಳು ತಿಥಿ ಕಾರ್ಯವನ್ನು ಮಾಡಿದರು.
ಹೋರಿಯ ಅಂತ್ಯಕ್ರಿಯೆ ಮಾಡಿದ ಸ್ಥಳದಲ್ಲಿ ಪೂಜೆ ನೆರವೇರಿಸಿ ನಂತರ ಹೋರಿಯ ಮಾಲೀಕ ಕುರಬಗೇರಿ ಓಣಿಯ ನಾಗಪ್ಪ ಗೊಳಣ್ಣನವರ ಮನೆಯಲ್ಲಿ ಹೋರಿಯ ಭಾವಚಿತ್ರವನ್ನು ಇಟ್ಟು ಮನೆಗೆ ಅರ್ಚಕರನ್ನು ಕರೆಯಿಸಿ ಧಾರ್ಮಿಕ ವಿಧಾನಗಳನ್ನು ನೆರವೇರಿಸಲಾಯಿತು.
ಸುಮಾರು 13 ವರ್ಷಗಳ ಕಾಲ ಹೋರಿಯೂ ಹಬ್ಬದಲ್ಲಿ ಗೆದ್ದಿರುವ ಬಹುಮಾನ, ಬಂಗಾರದ ಆಭರಣಗಳು ಸೇರಿದಂತೆ ವಿವಿಧ ಹೋವುಗಳಿಂದ ಮಂಟಪವನ್ನು ಅಲಂಕರಿಸಿ ಹೋರಿಯ ಫೋಟೋವನ್ನಿಟ್ಟು ಪೂಜೆ ಸಲ್ಲಿಸಲಾಯಿತು.
ಹೋರಿಯ ತಿಥಿ ಕಾರ್ಯದಲ್ಲಿ ಜಿಲ್ಲೆಯ ಪಕ್ಕದಲ್ಲಿರುವ ದಾವಣಗೆರಿ, ಶಿವಮೊಗ್ಗ ಸೇರಿದಂತೆ ವಿವಿಧ ಕಡೆಗಳಲ್ಲಿ ಅಭಿಮಾನಿಗಳು ಭಾಗವಹಿಸಿ ಹೋರಿಯ ಕಾರ್ಯವನ್ನು ಗುಣಗಾನ ಮಾಡಿದರು.