ಅಕ್ರಮವಾಗಿ ಗೋವಾ ಮದ್ಯ ಸಾಗಾಟ: ಇಬ್ಬರ ಬಂಧನ

ಗೋವಾ ಮದ್ಯ
Advertisement

ಕಾರವಾರ: ಲಾರಿ ಹಾಗೂ ಕಾರಿನಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ಪ್ರತ್ಯೇಕ ಎರಡು ಪ್ರಕರಣದಲ್ಲಿ ಇಬ್ಬರು ಚಾಲಕರ ಸಹಿತ ವಾಹನ ಹಾಗೂ ಅಕ್ರಮ ಮದ್ಯ ವಶಕ್ಕೆ ಪಡೆದ ಘಟನೆ ಭಾನುವಾರ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ನಡೆದಿದೆ.
ಗೋವಾದಿಂದ ಆಗಮಿಸಿದ ಕಾರನ್ನು ತಪಾಸಣೆ ನಡೆಸಿದ ಅಬಕಾರಿ ಸಿಬ್ಬಂದಿಗೆ ೬೦ ಸಾವಿರ ಲೀಟರ್ ಗೋವಾ ಮದ್ಯ ಪತ್ತೆಯಾಗಿದೆ. ಬಳಿಕ ಕಾರು ಸಹಿತ ಗೋವಾ ಕಾಣಕೋಣ ಮೂಲದ ಚಾಲಕ ಪ್ರಸಾದ ಲಿಂಗೂ ನಾಯ್ಕ ಎಂಬತನನ್ನು ವಶಕ್ಕೆ ಪಡೆಯಲಾಗಿದೆ. ಮದ್ಯದ ಮೌಲ್ಯ ೭೮,೪೫೦ ರೂ. ಆಗಿದೆ.
ಇನ್ನು ಟಾಟಾ ಕಂಪನಿಯ ಗೂಡ್ಸ್ ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ೭೧,೦೪೦ ಲೀಟರ್ ಗೋವಾ ಮದ್ಯ, ೫ ಲೀಟರ್ ಬಿಯರ್, ೧೦ ಖಾಲಿ ಇರುವ ಕ್ಲೋರಿಂಗ್ ಸಿಲಿಂಡರ್‌ಗಳನ್ನು ಅಬಕಾರಿ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಅಲ್ಲದೆ ಪ್ರಕರಣದಡಿ ಬೆಳಗಾಂವಿ ಶಿರಗಾಂವನ ನಾಗಪ್ಪ ಕಾಂಬಳೆ ಎಂಬಾತನ್ನು ವಶಕ್ಕೆ ಪಡೆಯಲಾಗಿದೆ. ಮದ್ಯದ ಅಂದಾಜು ಮೌಲ್ಯ ೯೦ ಸಾವಿರ ರೂ. ಆಗಿದೆ.

ಗೋವಾ ಮದ್ಯ