ಅಕ್ರಮ ಆಸ್ತಿ ಖರೀದಿ: ಶಾಸಕ ಸವದಿ ವಿರುದ್ಧ ಲೋಕಾಯಕ್ತಕ್ಕೆ ದೂರು

ಸಿದ್ದು ಸವದಿ
Advertisement

ಬಾಗಲಕೋಟೆ(ರಬಕವಿ-ಬನಹಟ್ಟಿ): ತೇರದಾಳ ಶಾಸಕ ಸಿದ್ದು ಸವದಿ ಆದಾಯಕ್ಕೂ ಮೀರಿ ಅಕ್ರಮವಾಗಿ ೧೫೦ ಎಕರೆಗೂ ಅಧಿಕ ಆಸ್ತಿ ಸಂಪಾದಿಸಿದ್ದಾರೆ, ಜೊತೆಗೆ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ. ಮೋಸ ಮಾಡಿದ್ದಾರೆಂದು ಜ. ೧೮ರಂದು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.
ಶಾಸಕ ಸಿದ್ದು ಸವದಿ ಮತ್ತು ಕುಟುಂಬಸ್ಥರ ವಿರುದ್ಧ ಹಳಿಂಗಳಿ ಗ್ರಾಮದ ರಾಜು ದೇಸಾಯಿ ದೂರು ನೀಡಿದ್ದು, ಮೊದಲ ಆರೋಪಿಯನ್ನಾಗಿಸಿ ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ, ಸಹೋದರ ಏಗಪ್ಪ ಸವದಿ, ಮಕ್ಕಳಾದ ವಿದ್ಯಾಧರ ಸವದಿ ಹಾಗೂ ರಾಮಣ್ಣ ಸವದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ತಮ್ಮ ಆಪ್ತ ವಲಯದವರ ಹೆಸರಿನಲ್ಲಿ ಕೃಷಿ ಹಾಗೂ ಕೃಷಿಯೇತರ ಭೂಮಿಗಳನ್ನು ಖರೀದಿ ಮಾಡಿರುವ ಬಗ್ಗೆ ದಾಖಲೆಗಳನ್ನು ಒದಗಿಸಿರುವ ರಾಜು ದೇಸಾಯಿ. ಇದೆಲ್ಲದರ ಕುರಿತು ಸಮಗ್ರ ತನಿಖೆಯೊಂದಿಗೆ ಅಕ್ರಮ ಗಳಿಕೆದಾರರಿಗೆ ಶಿಕ್ಷೆಯಾಗಬೇಕೆಂದು ಕೋರಿದ್ದಾರೆ.