ಅಕ್ಷರ ದೇಗುಲಗಳಿನ್ನು `ಸರ್ವಾಂಗಸುಂದರ’

ಸರ್ಕಾರಿ ಶಾಲೆ
Advertisement

ಕುಂದಗೋಳ: ಸರ್ಕಾರಿ ಶಾಲೆಗಳು ಸುಂದರವಾಗಿರಬೇಕು.... ಸ್ವಚ್ಛವಾಗಿರಬೇಕು.... ಅಲ್ಲಿನ ಮಕ್ಕಳಿಗೆ ಮೂಲಸೌಕರ್ಯ ಕೊರತೆ ಕಾಡಬಾರದು... ಶಾಲೆ ಕಂಡರೆ ಮಕ್ಕಳು ಸಂಭ್ರಮಿಸಬೇಕು'. ಇದು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಅವರು ಕನಸು. ಅವರ ಕನಸು ಸಾಕಾರಕ್ಕೆ ಕೈಜೋಡಿಸಿದ್ದು ಕ್ಷಮತಾ ಸೇವಾ ಸಂಸ್ಥೆ. ಅವರ ಕನಸಿಗೆ ಬಣ್ಣ ಹಚ್ಚಿದ್ದು ಜೆಎಸ್‌ಡಬ್ಲ್ಯು ಸಂಸ್ಥೆ ಹಾಗೂ ಇತರ ಸಂಸ್ಥೆಗಳು. ಅಂತೆಯೇ ಈಗ ಅವರ ಧಾರವಾಡ ಲೋಕಸಭಾ ಕ್ಷೇತ್ರದ 1177 ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ ಬಣ್ಣ ಹಚ್ಚುವಬಣ್ಣದರ್ಪಣೆ’ ಅಭಿಯಾನಕ್ಕೆ ಪಟ್ಟಣದ ಹರಭಟ್ಟ ಶಾಲಾ ಮೈದಾನದಲ್ಲಿ ಶನಿವಾರ ರಾತ್ರಿ ಚಾಲನೆ ದೊರಕಿತು. ಒಂದು ವರ್ಷದಲ್ಲಿ ಕ್ಷೇತ್ರ ವ್ಯಾಪ್ತಿಯ ಎಲ್ಲ ಶಾಲೆ, ಕಾಲೇಜುಗಳಿಗೆ ಬಣ್ಣ ಹಚ್ಚುವ ಗುರಿ ಹೊಂದಿದ ಈ ಅಭಿಯಾನದ ಉದ್ಘಾಟನೆಗೆ ಮತ್ತಷ್ಟು ರಂಗು ತುಂಬಿದ್ದು ಬಣ್ಣದ ಲೋಕದ ಚಲನಚಿತ್ರ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು.
ತಾವೇ ಪೇಂಟ್ ರೋಲರ್ ಹಿಡಿದರು… ಪೇಂಟ್ ಡಬ್ಬದಲ್ಲಿ ಎದ್ದಿ ಬಣ್ಣವನ್ನು ಸರ್ಕಾರಿ ಶಾಲೆಗಳಿಗೆ ಹಚ್ಚುವ ಮೂಲಕ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸರ್ಕಾರಿ ಶಾಲೆ ಸುಂದರಗೊಳಿಸುವ ಪರಿಕಲ್ಪನೆ ಸಾಕಾರಕ್ಕೆ ನಾಂದಿ ಹಾಡಿದರು. ಇವರೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೂ ಪೇಂಟ್ ರೋಲರ್ ಹಿಡಿದು ಶಾಲೆಗೆ ಸಾಂಕೇತಿಕ ಬಣ್ಣ ಹಚ್ಚಿದರು. ಇದಕ್ಕೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಅರವಿಂದ ಬೆಲ್ಲದ, ಬಿಜೆಪಿ ಮಾಜಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್. ಪಾಟೀಲ ಹಾಗೂ ಇತರರು ಸಾಕ್ಷಿಯಾದರು.

ಸರ್ಕಾರಿ ಶಾಲೆ