ಅಡುಗೆ ಎಣ್ಣೆ ಕಳ್ಳರ ಬಂಧನ

ಎಣ್ಣೆ
Advertisement

ಬೆಳಗಾವಿ: ಮಂಗಳೂರಿನಿಂದ ನಿಪ್ಪಾಣಿಗೆ ಅಡುಗೆ ಎಣ್ಣೆ ಬಾಕ್ಸ್‌ಗಳನ್ನು ಸಾಗಿಸುತ್ತಿದ್ದ ಟ್ರಕ್ಕಿನ ಚಾಲಕ ಹಾಗೂ ಕ್ಲೀನರ್ ೩೦,೩೮,೨೭೬/-ರೂ ಕಿಮ್ಮತ್ತಿನ ೧,೪೬೫ ಅಡುಗೆ ಎಣ್ಣಿಯ ಟಿನ್ ಮತ್ತು ೮೦ ಪೌಚ್ ಬಾಕ್ಸ್ಗಳನ್ನು ಕಳ್ಳತನ ಮಾಡಿ, ಪರಾರಿಯಾಗಿದ್ದ ಪ್ರಕರಣವನ್ನು ಭೇದಿಸಿದ ಹಿರೇಬಾಗೇವಾಡಿ ಪೊಲೀಸರು ಇಬ್ಬರನ್ನು ಹೆಡೆಮುರಿಕಟ್ಟಿ ಮಾಲು ವಶಪಡಿಸಿದ ಘಟನೆ ನಡೆದಿದೆ.
ಫೆ. ೧೮ರಂದು ಪಡುಬಿದ್ರಿಯ ಇಸ್ಮಾಯಿಲ್ ನವಾಸ ಎಂಬ ವ್ಯಾಪಾರಿ ಟ್ರಕ್ಕಿನಲ್ಲಿ ನಿಪ್ಪಾಣಿಗೆ ಅಡುಗೆ ಎಣ್ಣೆಯನ್ನು ನಿಪ್ಪಾಣಿಗೆ ಕಳುಹಿಸಿದ್ದರು. ಹಿರೇಬಾಗೇವಾಡಿ ಗ್ರಾಮದ ಬಡೇಕೊಳ್ಳೆಮಠ ಘಾಟ್‌ನಲ್ಲಿ ಎನ್‌ಎಚ್೪ ರಸ್ತೆಯ ಪಕ್ಕದಲ್ಲಿ ಟ್ರಕ್ ನಿಲ್ಲಿಸಿ ಅದರಿಂದ ಸುಮಾರು ೩೦,೩೮,೨೭೬/-ರೂ ಕಿಮ್ಮತ್ತಿನ ೧,೪೬೫ ಅಡುಗೆ ಎಣ್ಣಿಯ ಟಿನ್ ಮತ್ತು ೮೦ ಪೌಚ್ ಬಾಕ್ಸ್‌ಗಳನ್ನು ಕಳ್ಳತನ ಮಾಡಿಕೊಂಡು ಚಾಲಕ ಮತ್ತು ಕ್ಲೀನರ್ ಪರಾರಿಯಾಗಿದ್ದರು.
ಘಟನೆಯ ಬಗ್ಗೆ ಮಾಲೀಕರ ಹಿರೇಬಾಗೇವಾಡಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ಬೇಧಿಸಿದ ಪೊಲೀಸರು, ಅಸ್ಸಾಂ ಮೂಲದ ಚಾಲಕ ಇಬ್ರಾಹಿಮ್ ತಂದೆ ಅಬ್ದುಲ್‌ಜಿದ್ ಹಾಗೂ ಸಾಹೇಬ ಹುಸೇನ್ ಎಂಬಿಬ್ಬರನ್ನು ಬಂಧಿಸಿ ಅವರಿಂದ ೨೩,೯೩,೫೬೦/- ರೂಪಾಯಿ ಮೌಲ್ಯದ ೮೭೮ ಅಡುಗೆ ಎಣ್ಣೆ ಟಿನ್‌ಗಳು ಹಾಗೂ ೧೪ ಬಾಕ್ಸ್‌ ಎಣ್ಣೆ ಪೌಚ್‌ಗಳು ಹಾಗೂ ಡಿಯೋ ಮೋಟಾರ ಅಕಿ ೩೦,೦೦೦/- ಹೀಗೆ ಒಟ್ಟು ೨೪,೨೩,೫೬೦/- ಮೌಲ್ಯದ ಮಾಲನ್ನು ವಶ ಪಡಿಸಿಕೊಂಡಿದ್ದಾರೆ.