ಅನುದಾನರಹಿತ ರಾಜ್ಯ ಸರ್ಕಾರ

Advertisement

ಬೆಳಗಾವಿ: ರಾಜ್ಯ ಸರ್ಕಾರ ಅನುದಾನರಹಿತ ಮತ್ತು ಅಭಿವೃದ್ಧಿರಹಿತ ಸರ್ಕಾರವಾಗಿದೆ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು 2018ರಲ್ಲಿ ತಾನು ಶಾಸಕನಾಗಿ ಆಯ್ಕೆಯಾದ ಮೇಲೆ 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಆ ಅವಧಿಯಲ್ಲಿ ತಾನು ₹ 300 ಕೋಟಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, 2023 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತನ್ನ ಕ್ಷೇತ್ರಕ್ಕೆ 11ರೂ. ಗಳ ಅನುದಾನ ಸಹ ಸಿಕ್ಕಿಲ್ಲ ಎಂದರು. ಚುನಾವಣೆ ಮಾದರಿ ನೀತಿ ಸಂಹಿತೆ ಹೆಸರಲ್ಲಿ ಕಚೇರಿಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಕಾರು ಸುಪರ್ದಿಗೆ ಪಡೆಯುವುದು ಪದ್ಧತಿ. ಅದರ ಪ್ರಕಾರ ಅಧಿಕಾರಿಗಳು ಕೆಲಸ ಮಾಡಲಿ. ಅದನ್ನು ಬಿಟ್ಟು ನೀತಿ ಸಂಹಿತೆ ಹೆಸರಲ್ಲಿ ಮೇಯರ್, ಉಪಮೇಯರ್ ಕಚೇರಿಗೆ ಬೀಗ ಹಾಕುವುದು ಸರಿಯಲ್ಲ. ಇತಿಹಾಸದಲ್ಲಿಯೇ ಮೊದಲನೇ ಸಲ ಕಾರ್ಯ ನಿರ್ವಹಿಸಲು ಅನಾನುಕೂಲ ಮಾಡಿದೆ, ಇಂಥದೊಂದು ಪದ್ಧತಿಗೆ ಅಧಿಕಾರಿಗಳು ನಾಂದಿ ಹಾಡಿದ್ದಾರೆ, ಸಿಎಂ ಕಚೇರಿಗೂ ಬೀಗ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು ಅಲ್ಲದೆ ನಗರದಲ್ಲಿ ನೀರಿನ ಸಮಸ್ಯೆ, ಮಳೆಯಿಂದ ಅನಾಹುತಗಳು, ಚರಂಡಿ ವ್ಯವಸ್ಥೆ ಸರಿಯಾಗಿಲ್ಲ, ಕಸ ವಿಲೇವಾರಿ ಆಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಬೇಕಿದ್ದ ಮೇಯರ್ ಕಚೇರಿಗೆ ಅಧಿಕಾರಿಗಳು ಬೀಗ ಹಾಕಿದ್ದು, ಆದರೆ ಕೆಲಸ ಮಾಡುವ ಕಚೇರಿಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಕಚೇರಿ ಬೀಗ ತೆಗೆಯದಿದ್ದರೆ ನಿಮ್ಮ ಕಚೇರಿ ಮುಂದೆ ಧರಣಿ ಮಾಡುತ್ತೇವೆ, ಬೀಗ ಹಾಕುತ್ತೇವೆ‌ ಎಂದು ಎಚ್ಚರಿಕೆ ನೀಡಿದ್ದಾರೆ.