ಅಹಿತಕರ ಘಟನೆಗಳಿಗೆ ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರವೇ ಕಾರಣ

Advertisement

ಹುಬ್ಬಳ್ಳಿ: ರಾಜ್ಯದ ಎರಡನೇ ರಾಜಧಾನಿಯಾಗಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಮತ್ತೊಂದು ಅಹಿತಕರ ಘಟನೆ ನಡೆದಿದೆ. ಈ ಘಟನೆಗೆ ಪೋಲಿಸ್ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರವೇ ಕಾರಣ ಎಂದು ವಿಧಾನ ಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆರೋಪ
ರವಿವಾರ ಇತ್ತೀಚೆಗೆ ಹತ್ಯೆಗೀಡಾದ ಅಂಜಲಿ ಅಂಬಿಗೇರ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪೊಲೀಸರು ವರ್ಗಾವಣೆಗೆ ದುಡ್ಡು ಕೊಟ್ಟು ಬರುವಂತಾಗಿದೆ. ಇಂಥವರು ದುಡ್ಡು ಎಲ್ಲಿಂದ ತೆಗಿಬೇಕು? ಕ್ರಿಮಿನಲ್‌ಗಳಿಂದ ಹಣ ವಸೂಲಿ ಮಾಡುತ್ತಾರೆ. ಪೊಲೀಸರು ತಾವೇ ಹೋಗಿ ಗಾಂಜಾ ಮಾರೋದಿಲ್ಲ. ಆದರೆ, ಮಧ್ಯವರ್ತಿಗಳ ಮೂಲಕ ಪೊಲೀಸರೇ ಕೆಲಸ ಮಾಡಿಸುತ್ತಾರೆ ಎಂದರು.
ರಾಜಕಾರಣಿಗಳು ಈ ಎಲ್ಲ ಘಟನಾವಳಿಗಳನ್ನು ಗಮನಿಸಬೇಕು. ಆದರೆ, ರಾಜಕಾರಣಿಗಳೇ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ದುಡ್ಡು ಪಡೆದಿರೋದರಿಂದ ಏನೂ ಹೇಳುವುದಿಲ್ಲ. ನೀವು ಹಣ ಪಡೆದು ವರ್ಗಾವಣೆ ಮಾಡಿದರೆ ನಿಮ್ಮ ಮಾತನ್ನು ಪೊಲೀಸರು ಎಲ್ಲಿ ಕೇಳುತ್ತಾರೆ. ಯುವಕರು ಗಾಂಜಾ ದಾಸರಾಗಿದ್ದಾರೆ. ಇದರಿಂದ ಇಲ್ಲಿನ ಪ್ರತಿ ಕುಟುಂಬದ ಹಿರಿಯರು ನೋವು ಅನುಭವಿಸುತ್ತಿದ್ದಾರೆ. ಎಲ್ಲೆಡೆ ಗಾಂಜಾ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ ಅದನ್ನ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.