ಆಟಕ್ಕೂ ಪಾಠಕ್ಕೂ ಸಮಾನ ಆದ್ಯತೆ ನೀಡಿ

Advertisement

ಹುಬ್ಬಳ್ಳಿ: ಪಾಲಕರು ಮಕ್ಕಳ ಆಟಕ್ಕೂ ಹಾಗೂ ಪಾಠಕ್ಕೂ ಸಮಾನ ಆದ್ಯತೆ ನೀಡಬೇಕು ಎಂದು ಭಾರತ ತಂಡದ ಮಾಜಿ ಆಟಗಾರ ದೊಡ್ಡ ಗಣೇಶ ಹೇಳಿದರು.

ಅವರು ಇಲ್ಲಿಯ ನೂತನ ಕೋರ್ಟ್ ಹಿಂಭಾದಲ್ಲಿರುವ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ (ಟಿಎಸ್‌ಸಿಎ) ವಾರ್ಷಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಯಕ್ಕೆ ಹೆಚ್ಚು ಮಹತ್ವ ನೀಡಿ. ನೀವು ಕಳೆದುಕೊಂಡದ್ದನ್ನು ಹುಡಕಬಹುದು ಆದರೆ ಸಮಯ ಮತ್ತಿ ಬರಲ್ಲ. ನಮಗೆ ಈ ಕ್ರಿಕೆಟ್ ಮೈದಾನವೇ ಒಂದು ಗುಡಿ ಇದ್ದ ಹಾಗೆ. ಇಲ್ಲಿ ನೀವು ಶಿಸ್ತು ಪಾಲನೆ ಹಾಗೂ ತರಬೇತುದಾರರು ಕಲಿಸಿದ್ದನ್ನು ಶ್ರದ್ಧೆಯಿಂದ ಕಲಿಯಿರಿ ಎಂದು ಕಿವಿಮಾತು ಹೇಳಿದರು.

ಮಕ್ಕಳಿಗೆ ಯಾವುದೇ ತರಹದ ಒತ್ತಡ ನೀಡಬೇಡಿ. ಮತ್ತೊಬ್ಬ ಆಟಗಾರನೊಂದಿಗೆ ಎಂದು ನಿಮ್ಮ ಮಕ್ಕಳನ್ನು ಹೊಲಿಕೆ ಮಾಡಬೇಡಿ. ಬೇರೆ ಯಾವುದೇ ಕ್ಷೇತ್ರ ಸೋಲನ್ನು ಕಲಿಸಲ್ಲ. ಆದರೆ ಕ್ರಿಕೆಟ್ ಆಟ ಮಾತ್ರ ನಿಮಗೆ ಸೋಲು ಹಾಗೂ ಗೆಲುವನ್ನು ಕಲಿಸುತ್ತದೆ ಎಂದರು.

ಮೆಂಟರ್ ಸೋಮಶೇಖರ ಶಿರಗುಪ್ಪಿ ಮಾತನಾಡಿ, ತಾವು ಹಾಗೂ ದೊಡ್ಡ ಗಣೇಶ ಆಟವಾಡುವಾಗ 3 ಬಾರಿ ರಣಜಿ, 2 ಬಾರಿ ಇರಾನಿ ಟ್ರೋಫಿ ಗೆದ್ದ ಸಂದರ್ಭವನ್ನು ಎಳೆ ಎಳೆಯಾಗಿ ಹಂಚಿಕೊಂಡರು ಅಲ್ಲದೇ ಟಿಎಸ್‌ಸಿಎ ಅತಿ ಕಡಿಮೆ ಅವಧಿಯಲ್ಲಿ ತಮ್ಮ ಎ ತಂಡ ಮೊದಲ ವಲಯದ ಹಂತಕ್ಕೆ ಆಯ್ಕೆ ಆಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದೊಡ್ಡ ಗಣೇಶ, ಶ್ರೀದತ್ತಾ ಇನ್‌ಫೋ ಟೆಕ್ ಎಂ.ಡಿ ಪ್ರಕಾಶ ಜೋಶಿ, ಬಿಸಿಸಿಐ ಮತ್ತು ಐಪಿಎಲ್ ಅಂಪೈಯರ್ ಅಭಿಜಿತ ಬೆಂಗೇರಿ, ಧಾರವಾಡ ವಲಯ ನಿಮಂತ್ರಕ ನಿಖಿಲ ಭೂಸದ ಅವರನ್ನು ಟಿಎಸ್‌ಸಿಎ ವತಿಯಿಂದ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಜಿಲ್ಲಾ, ರಾಜ್ಯಮಟ್ಟಕ್ಕೆ ಆಯ್ಕೆಯಾದ
ಸಾಧನೆ ಮಾಡಿದ ಆಟಗಾರರಿಗೆ ದೊಡ್ಡಗಣೇಶ ಬಹುಮಾನ ವಿತರಿಸಿದರು. ಟಿಎಸ್‌ಸಿಎ ಡೈರಕ್ಟರ್‌ರಾದ ವಿ.ಟಿ.ಕರಿಸಕ್ರನ್ನವರ, ಎ.ಆರ್.ಸುರೇಶ, ವೆಮ್ ರೆಡ್ಡಿ ಪಾಟೀಲ, ಡಾ.ಪ್ರಶಾಂತ, ಪ್ರಮೋದ ಜಂಬಗಿ, ಅಮಿತ ಹೊಸೂರ, ಶ್ರೀವತ್ಸ ಪುರಾಣಿಕ, ಸೇರಿದಂತೆ ಹಿರಿಯ ತರಬೇತುದಾರರು ಹಾಗೂ ಕ್ರಿಕೆಟ ಆಟಗಾರರು ಇದ್ದರು.