ಆತ ಗೆದ್ದಿದ್ದರೆ…

ತಲೆಮಾರು
Advertisement


ಲಕ್ಷಾಂತರ ಜನರ ಸಮೃದ್ಧ ಬದುಕು ಹಾಗೂ ನಾಡಿನ ಸ್ವಾತಂತ್ರ‍್ಯಕ್ಕಾಗಿ ಜನತೆ ಕೈಗೊಳ್ಳುವ ಪ್ರತಿಯೊಂದು ನಿರ್ಧಾರಕ್ಕೂ ಗಂಗಾಮಾತೆಯ ಸಾಕ್ಷಿಯಾಗಿ ನಾನು ಬದ್ಧ. ಪ್ರಜೆಗಳ ಹಿತವನ್ನೇ ಬಯಸಿ ಕರ್ತವ್ಯನಿರ್ವಹಿಸಿದ ವೀರಾಧಿವೀರರ ಪರಂಪರೆಯನ್ನು ಮುರಿಯುವುದು ನನಗಿಷ್ಷವಿಲ್ಲ. ನನ್ನ ನೆತ್ತರನ್ನು ಹರಿಸಿ ಅಥವಾ ಅಗತ್ಯಬಿರೆ ಬಲಿಪೀಠವೇರಿದರೂ ಸರಿ. ನನ್ನ ಪ್ರೀತಿಯ ಹಿಂದುಸ್ಥಾನ ವಿದೇಶೀಯರ ಕಪಿಮುಷ್ಟಿಯಿಂದ ಮುಕ್ತವಾಗಬೇಕು. ವ್ಯಾಪಾರಕ್ಕೆಂದು ಬಂದವರು ವಹಿವಾಟು ಮುಗಿಸಿ ತಮ್ಮೂರಿಗೆ ತೆರಳಬೇಕೇ ಹೊರತು ಆಡಳಿತದೊಳಗೆ ಮೂಗು ತೂರಿಸುವುದು ಸರಿಯಲ್ಲ. ಭಾರತದ ಮೇಲೆ ಸವಾರಿಕಿ ನಡೆಸುವ ಅಧಿಕಾರ ಬ್ರಿಟಿಷರಿಗಿಲ್ಲ. ಆಂಗ್ಲರ ವಿರುದ್ಧ ಸಮರ ಸಾರುವ ಪ್ರಜೆಗಳ ಹಾಗೂ ವಿವಿಧ ರಾಜ್ಯಗಳ ಮಹಾರಾಜರ ಸರ್ವಾನುಮತದ ನಿರ್ಣಯವನ್ನು ಕಾರ್ಯರೂಪಕ್ಕೆ ತರೋಣ-ಎಂಬ ವೀರಘೋಷವನ್ನು ಜಾಹ್ನವೀತಟದಲ್ಲಿ ಮೊಳಗಿಸಿ, ದಿಕ್ಕೆಟ್ಟು ಕುಳಿತಿ ಹತೋತ್ಸಾಹಿ ದೇಶಬಾಂಧವರಿಗೆ ಹೊಸ ಹುರುಪನ್ನಿತ್ತು ಹರಸಿದ ನಾನಾಸಾಹೇಬ ಪೇಶ್ವಾ, ೧೮೫೭ರ ಸ್ವಾತಂತ್ರ‍್ಯ ಸಮರದ ನೀಲನಕಾಶೆ ಬರೆದು ಪ್ರಥಮ ವಿಜಯಧ್ವಜ ಹಾರಿಸಿದ ರಣಧೀರ. ಈಸ್ಟ್ ಇಂಡಿಯಾ ಕಂಪನಿಯ ಅನ್ಯಾಯವನ್ನು ಖಂಡಿಸಿ, ಪ್ರತಿ ಹಂತದಲ್ಲೂ ಭಾರತೀಯರಿಗಾಗುತ್ತಿದ್ದ ಮೋಸವನ್ನು ಪ್ರತಿಭಟಿಸಿ ಲಂಡನ್‌ಗೆ ಪ್ರತಿನಿಧಿಯನ್ನು ಕಳುಹಿಸಿ ಕಾನೂನಾತ್ಮಕ ಹೋರಾಟ ನಡೆಸಿದ ಧೀರ ನಾನಾ, ಕ್ರಾಂತಿಯಜ್ಞದ ಅಧ್ವರ್ಯು. ಭಾರತದ ಇತಿಹಾಸದ ಪುಟಗಳಲ್ಲಿ ಮಸುಕಾಗಿರುವ ನಾನಾ ಹೆಸರು ಕೇಳಿದರೆ ಬ್ರಿಟಿಷ್ ಅಧಿಕಾರಿಗಳು ಚಳಿಯಲ್ಲೂ ಬೆಚ್ಚಿ ಬೀಳುತ್ತಿರಂತೆ. ಶತ್ರುಗಳ ಮೇಲೆ ಮಿಂಚಿನ ಕಾರ್ಯಾಚರಣೆ ನಡೆಸಿ ಗೆಲುವು ಸಾಧಿಸುವವರೆಗೆ ವಿರಮಿಸದ ಪೇಶ್ವೆಯ ಯುದ್ಧಕಲೆಗೂ, ಎಲ್ಲ ಎಡರುತೊಡರುಗಳನ್ನು ಮೀರಿ ಸರ್ವರನ್ನೂ ಜೊತೆಯಾಗಿ ಕೊಂಡೊಯ್ಯುವ ನಾಯಕತ್ವ ಗುಣಕ್ಕೂ ತಲೆಬಾಗದವರಿಲ್ಲ. ಹಾಗಿರೂ ನಾನಾಸಾಹೇಬರ ಶೌರ್ಯ, ಸಾಹಸ, ಅಸ್ಖಲಿತ ದೇಶನಿಷ್ಠೆ ಹಾಗೂ ಕೆಚ್ಚಿನ ಹೋರಾಟ ವನಸುಮವಾಗಿರುವುದಂತೂ ಅಚ್ಚರಿಯೇ ಸರಿ. ೧೮೫೭ರ ಸ್ವಾತಂತ್ರ‍್ಯ ಸಮರವನ್ನು ಜನಾಂದೋಲನವಾಗಿ ರೂಪುಗೊಳಿಸಿದ್ದು ಮಾತ್ರವಲ್ಲದೆ, ಸಂಸ್ಥಾನಗಳಾಗಿ ಪರಸ್ಪರ ಮೇಲಾಟ ತಳ್ಳಾಟಗಳಲ್ಲಿ ತೊಡಗಿ ಸಾಹಸಿ ರಾಜರುಗಳಲ್ಲಿ ಭಾರತದ ಅಖಂಡತೆ, ಏಕತೆ ಹಾಗೂ ಸ್ವಾತಂತ್ರ‍್ಯಕ್ಕಾಗಿ ಹೋರಾಡಬೇಕೆಂಬ ಛಲಮೂಡಿಸಿದ ಧೈರ್ಯದಬ್ಧಿಯೇ ಪೇಶ್ವಾ ಎಂಬುವುದು ನಿಸ್ಸಂಶಯ. ವಿದ್ವಾನ್ ಮಾಧವರಾವ್ ನಾರಾಯಣ ಭಟ್ಟ – ಗಂಗಾಬಾಯಿ ದಂಪತಿಗಳ ಮಗನಾಗಿ ೧೮೨೪ರ ಮೇ ಹತ್ತೊಂಬತ್ತರಂದು ಜನಿಸಿದ ನಾನಾ ಗೋವಿಂದನ ಬಾಲ್ಯಜೀವನ ಬಡತನಕ್ಕೆ ಸಮರ್ಪಿತ. ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿಯಿರೂ ಧರ್ಮನಿಷ್ಠೆಯನ್ನು ಬಿಡದ ಅಪ್ಪನ ಹಿರಿತನ ಹಾಗೂ ಕಷ್ಟಗಳ ಪರ್ವತವನ್ನು ಪ್ರೇಮಮಯಿ ಭಗವಂತನ ಕೃಪೆಯಿಂದ ಕುಟ್ಟಿ ಪುಡಿಗೈಯಬಹುದೆಂಬ ಅಮ್ಮನ ಅಭಯವಾಕ್ಯ ಜೀವನದುಕ್ಕೂ ಗಟ್ಟಿತನದ ಪಾಠ ಕಲಿಸಿತು. ವೇದ, ವೇದಾಂತ, ಸಂಸ್ಕೃತ ಶಿಕ್ಷಣದ ಬಳಿಕ ಪೇಶ್ವೆಯ ಆಶ್ರಯ ಬಯಸಿ ಬ್ರಹ್ಮಾವರ್ತಕ್ಕೆ ತೆರಳಿದ ಕುಟುಂಬಕ್ಕೆ ಭಗವಂತನೇ ದಾರಿ ತೋರಿ.
ಯುದ್ಧದಲ್ಲಿ ಸೋತ ಕೊನೆಯ ಬಾಜಿರಾವ್ ಪೇಶ್ವಾ ಸಿಂಹಾಸನವನ್ನು ಬ್ರಿಟಿಷರಿಗೊಪ್ಪಿಸಿ ವಾರ್ಷಿಕ ಎಂಟು ಲಕ್ಷ ರೂಪಾಯಿಯ ಜೀವನಾಂಶ ಪಡೆಯುತ್ತಿದ್ದರು. ಆಂಗ್ಲರ ಆಡಳಿತದಿಂದ ತನ್ನ ಸಂಸ್ಥಾನವನ್ನು ಮುಕ್ತಗೊಳಿಸಬೇಕೆಂಬ ಮಹದಾಕಾಂಕ್ಷೆ ಮನದಲ್ಲಿರೂ ಅದನ್ನು ಕಾರ್ಯರೂಪಕ್ಕೆ ತರಲು ಬೇಕಾದ ಶಕ್ತಿಯಿರದ ಮಹಾರಾಜ ತಮ್ಮ ಕನಸುಗಳನ್ನು ನನಸಾಗಿಸುವ ತರುಣನ ಹುಡುಕಾಟದಲ್ಲಿರು. ತನ್ನ ಆಶ್ರಯದಲ್ಲಿಯೇ ಬೆಳೆದ ಮಾಧವಸುತನ ಗುಣನಡತೆ, ತೇಜಸ್ಸಿನಿಂದ ಪ್ರಭಾವಿತರಾದ ಪುತ್ರಹೀನ ಪೇಶ್ವೆ, ನಾನಾ ಗೋವಿಂದನನ್ನು ದತ್ತು ಸ್ವೀಕರಿಸಿ ನಾನಾಸಾಹೇಬ ಪೇಶ್ವೆ ಎಂಬ ನವನಾಮಧೇಯವಿತ್ತರು. ಶಸ್ತ್ರಶಾಸ್ತ್ರಗಳಲ್ಲಿ ಅತ್ಯಾಸಕ್ತರಾದ ನಾನಾಸಾಹೇಬ, ಬ್ರಹ್ಮವರ್ಚಸ್ಸಿನ ಜೊತೆಜೊತೆಗೆ ಕ್ಷಾತ್ರತೇಜಸ್ಸನ್ನು ರೂಢಿಸಿದರು. ಯಾವುದೇ ರಾಜಕುವರರಿಗೂ ಕಡಿಮೆಯಿಲ್ಲವೆಂಬಂತೆ ಶಸ್ತ್ರವಿದ್ಯೆಯಲ್ಲಿ ನಿಷ್ಣಾತರಾದ ನಾನಾಸಾಹೇಬ, ತಾತ್ಯಾಟೋಪೆ ಹಾಗೂ ಛಬೇಲಿಯ ಜೊತೆ ರಾಷ್ಟ್ರೀಯತೆಯ ಪ್ರಬಲ ವರ್ಚಸ್ಸಿನೊಂದಿಗೆ ಹೆಜ್ಜೆಯಿಟ್ಟರು. ಯುದ್ಧತಂತ್ರ ಹಾಗೂ ರಾಜನೀತಿಯ ಬಗ್ಗೆ ಅತ್ಯಾಸಕ್ತರಾಗಿ ನಾನಾ, ಚಾಣಕ್ಯನೀತಿಯ ಪ್ರಬಲ ಪ್ರತಿಪಾದಕರೂ ಹೌದು. ದೇಸೀ ಆಡಳಿತವೇ ಕಷ್ಟಕಷ್ಟವೆಂದು ಉಳಿದವರು ಕೈಚೆಲ್ಲುತ್ತಿ ಕಾಲದಲ್ಲಿ ವಿದೇಶೀ ರಾಜಕೀಯ ಮಾಹಿತಿಯನ್ನು ಕಾಲಕಾಲಕ್ಕೆ ತರಿಸಿಕೊಳ್ಳುತ್ತಿ ನಾನಾ ಅಪ್ರತಿಮ ಸಂಘಟಕರಾಗಿ ರೂಪುಗೊಂಡರು. ಇಂಗ್ಲೆಂಡ್‌ನಲ್ಲಿ ನಡೆಯುವ ಪ್ರತಿಯೊಂದು ಸಂಗತಿಯನ್ನೂ ಬಹು ಆಸ್ಥೆಯಿಂದ ಗಮನಿಸಿ ದೇಸೀ ಸಂಸ್ಥಾನಗಳು ಹೆಣೆಯಬೇಕಾದ ಬಲೆಯ ರೂಪುರೇಷೆ ರಚಿಸಿದರು. ಸರಿಸುಮಾರಾಗಿ ಇದೇ ಹೊತ್ತಿಗೆ ಬ್ರಿಟಿಷ್ ಆಡಳಿತದ ವಂಚನೆ ಜಗಜ್ಜಾಹೀರಾಯಿತು. ಕೊನೆಯ ಬಾಜಿರಾಯರ ಮರಣಾನಂತರ ಬ್ರಿಟಿಷ್ ಸರಕಾರ ಮಾತಿಗೆ ತಪ್ಪಿದ್ದು ಮಾತ್ರವಲ್ಲದೆ ಹಿಂದೂ ಪರಂಪರೆಯ ನಂಬಿಕೆಯ ಮೇಲೆ ಕುಠಾಪ್ರಹಾರಗೈದಿತು. ನಾನಾಗೆ ಸಹಜವಾಗಿಯೇ ಸಲ್ಲಬೇಕಾದ ರಾಜಮರ್ಯಾದೆ ಹಾಗೂ ವಾರ್ಷಿಕ ಜೀವನಾಂಶಕ್ಕೆ ಡಾಲ್ ಹೌಸಿಯ ‘ದತ್ತುಪುತ್ರರಿಗೆ ಹಕ್ಕಿಲ್ಲ’ವೆಂಬ ಕಾನೂನಿನ ನೆಪವೊಡ್ಡಿ ಸಕಲ ಸೌಲಭ್ಯಗಳನ್ನು ತಡೆಯಾಯಿತು. ಹಿಂದೂ ಶಾಸ್ತ್ರವಿಧಿಯನ್ವಯ ನಡೆಯುವ ದತ್ತಕ ಪ್ರಕ್ರಿಯೆಯನ್ನು ವಿರೋಧಿಸಿ ರಾಜ್ಯಗಳನ್ನು ಕಬಳಿಸುವ ಆಂಗ್ಲರ ದುಷ್ಟಬುದ್ಧಿಯನ್ನು ಅರ್ಥೈಸಿದ ನಾನಾ ಧ್ವನಿಯೆತ್ತಿದರು. ನೋಡನೋಡುತ್ತಿಂತೆ ಸತಾರಾ, ಅವಧ್, ಝಾನ್ಸಿ, ನಾಗ್ಪುರ ಮೊದಲಾದ ಅನೇಕ ಸಂಸ್ಥಾನಗಳು ಕರಾಳಶಾಸನಕ್ಕೆ ಬಲಿಯಾದವು. ಮಕ್ಕಳಿಲ್ಲದ ರಾಜ ಅಸುನೀಗಿದರೆ ರಾಜ್ಯದ ಸಂಪೂರ್ಣ ಹಕ್ಕು ಕಂಪನಿ ಸರಕಾರ್ದೆಂಬ ವಿತಂಡವಾದದ ವಿರುದ್ಧ ತಿರುಗಿಬಿ ನಾನಾಸಾಹೇಬ ಹಿಂದೂ ಆಚಾರ, ಸಂಪ್ರದಾಯ, ಶಾಸ್ತ್ರರೀತ್ಯಾ ದತ್ತು ಸ್ವೀಕರಿಸುವ ಕ್ರಮವನ್ನು ಸಮರ್ಥಿಸಿ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಗಳೊಡನೆ ಪತ್ರವ್ಯವಹಾರ ನಡೆಸಿದರು. ಹಿಂದೂ ಸಿದ್ಧಾಂತ, ಶಾಸ್ತ್ರನಂಬಿಕೆಯನ್ನು ಒಪ್ಪದ ಆಂಗ್ಲರ ನಡೆ ನಾನಾಗೆ ಅಹಿತವೂ, ಅಪಥ್ಯವೂ ಆಗಿ ಪಾಂಚಜನ್ಯ ಮೊಳಗಲು ವೇದಿಕೆ ಸಿದ್ಧಗೊಂಡಿತು.
ಅದೆಷ್ಟೇ ಸಮಸ್ಯೆಗಳಿರಲಿ. ಯುದ್ಧ ಸಾರುವ ಮುನ್ನ ಕೊನೆಯ ಬಾರಿ ಸಂಧಾನ ನಡೆಸುವುದು ವಾಡಿಕೆ. ತಪ್ಪಿನ ಅರಿವಾಗಿ ಅಕಸ್ಮಾತ್ ಮನಸ್ಸು ಬದಲಾಯಿಸಿ ಸ್ನೇಹಹಸ್ತ ಚಾಚಿದರೆ ಸಮರಯೋಚನೆಗೆ ವಿದಾಯ ಹೇಳಬೇಕೆಂಬುದು ಯುದ್ಧ ನಿಯಮ. ಅದರಂತೆ ಆಪ್ತ ಅಜೀಮುಲ್ಲಾ ಖಾನನನ್ನು ಇಂಗ್ಲೆಂಡಿಗೆ ಕಳುಹಿಸಿ ತನಗಾಗಿರುವ ಅನ್ಯಾಯವನ್ನು ಸರಿಪಡಿಸುವ ಕಾರ್ಯಕ್ಕೆ ಕೈಹಾಕಿದ ಪೇಶ್ವಾ ಯೋಚನೆ ಸಾಧುವಾಗಿರೂ ಅಧಿಕಾರದ ಅಮಲಿನಲ್ಲಿ ತೇಲಾಡುತ್ತಿ ಆಂಗ್ಲರಿಗೆ ನ್ಯಾಯನೀತಿಗಳನ್ನು ಪರಾಮರ್ಶಿಸುವ ವ್ಯವಧಾನವಿರಲಿಲ್ಲ. ಸಮರ್ಥವಾದ ವಾದ ಮಂಡಿಸಿದರೂ ಜಗ್ಗದ ಬ್ರಿಟಿಷರನ್ನು ಖಡ್ಗದ ಮೂಲಕ ಎದುರಿಸುವುದೇ ಸರಿಯೆಂಬ ಸರ್ವಸಂಸ್ಥಾನಗಳ ನಿರ್ಣಯವನ್ನೊಪ್ಪಿದ ನಾನಾಸಾಹೇಬ, ದೇಶದ ವಿವಿಧ ನಗರಗಳಿಗೆ ತೆರಳಿ ಕ್ರಾಂತಿಯ ಅಗತ್ಯತೆಯನ್ನು ವಿವರಿಸಿದರು. ಬ್ರಿಟಿಷರು ತಮಗಿಂತ ಬಲಿಷ್ಠರೆಂಬ ಮಿಥ್ಯಾಭಾವನೆ ಹೊಂದಿ ಅಂಜಿ ಅನೇಕರ ದುಗುಡವನ್ನು ದೂರೀಕರಿಸಿದ ಪೇಶ್ವಾ, ಕವಿತಾರೂಪದ ಸಂದೇಶವನ್ನು ಕಳುಹಿಸಿ ದೇಶೀಯರಾಜರ ವಿಶ್ವಾಸವನ್ನುಗಳಿಸಿ ಮಹಾಸಮರಕ್ಕೆ ಮುಹೂರ್ತವನ್ನು ನಿರ್ಧರಿಸಿ, ಹೋರಾಟದ ನಿಖರ ದಾರಿಯನ್ನು ನಿಶ್ಚಯಿಸಿದರು.
ಚಪಾತಿ, ಕೆಂಪುಕಮಲಗಳ ಮೂಲಕ ಮನಮನೆಗಳನ್ನು, ಸೈನಿಕಶಿಬಿರಗಳನ್ನು ತಲುಪಿದ ಹೋರಾಟದ ಸಂದೇಶ ಬೂದಿಮುಚ್ಚಿದ ಕೆಂಡದಂತಿತ್ತು. ‘ಸರ್ವತ್ರ ಏಕದಿನ ಕ್ರಾಂತಿ’ಯೆಂಬ ನಾನಾಸಾಹೇಬರ ಯೋಜನೆಯು ಬ್ರಿಟಿಷ್ ಆಧಿಪತ್ಯದ ಬುಡವನ್ನು ಅಲುಗಾಡಿಸುವುದಷ್ಟೇ ಅಲ್ಲ, ಇಂಗ್ಲೆಂಡ್‌ನ್ನು ಭಾರತಾಂತರ್ಗತಗೊಳಿಸುವ ದೂರದೃಷ್ಟಿಯನ್ನೂ ಹೊಂದಿತ್ತೆಂಬುದು ಅತಿಶಯೋಕ್ತಿಯಲ್ಲ. ಆದರೆ ಮಂಗಲ್ ಪಾಂಡೆ ತುಕಡಿಯಲ್ಲಿ ನಡೆದ ಹೋರಾಟವು ಕ್ರಾಂತಿಯ ಅಂತಿಮ ಗುರಿಯನ್ನು ಕೊಂಚ ವ್ಯತ್ಯಾಸಗೊಳಿಸಿಷ್ಟೇ ಅಲ್ಲದೆ ಭವಿಷ್ಯವನ್ನು ಊಹಿಸಲು ಬ್ರಿಟಿಷರಿಗೆ ಸಮಯಾವಕಾಶವಿತ್ತಿತು. ಅಲ್ಲಲ್ಲಿ ಕೇಳಿಬಂದ ಸಂಗ್ರಾಮದ ಧ್ವನಿಯನ್ನು ಗ್ರಹಿಸಿದ ಸರಕಾರ ಎಚ್ಚರಾಯಿತು. ಹಿನ್ನಡೆಯಿಂದ ಬೇಸರಿಸದ ನಾನಾಸಾಹೇಬ, ಬ್ರಿಟಿಷರ ಆಯಕಟ್ಟಿನ ಸ್ಥಳವಾದ ಕಾನ್ಪುರದ ಮೇಲೆ ದಾಳಿ ನಡೆಸಿ ಇಪ್ಪತ್ತೈದು ದಿನಗಳ ಕಾಲ ಮಿಸುಕಾಡದಂತೆ ಮಾಡಿ ಸ್ವತಂತ್ರ ಭಾರತದ ಧ್ವಜ ನೆಟ್ಟರು. ಸೆರೆಸಿಕ್ಕ ಆಂಗ್ಲರನ್ನು ಸುರಕ್ಷಿತವಾಗಿ ಪ್ರಯಾಗ ತಲುಪಿಸುವ ನಿರ್ಣಯವಾದರೂ ಸತೀ ಚೌರಾದಲ್ಲಿ ರೊಚ್ಚಿಗೆ ಗುಂಪು ಬ್ರಿಟಿಷರ ಮೇಲೆ ಮುಗಿಬಿದ್ದಿತು. ತನ್ನ ತಂದೆ ಕಳೆದುಕೊಂಡಿ ರಾಜತ್ವವನ್ನು ಮರಳಿ ಪಡೆದ ನಾನಾ ಮಹಾರಾಜರಾಗಿ ಪಟ್ಟಾಭಿಷಿಕ್ತರಾಗಿ ಹಾರಿಸಿದ ಸ್ವಾತಂತ್ರ‍್ಯಧ್ವಜ ಬಹುಬೇಗ ಕೆಳಗಿಳಿಯಿತು. ಕೆಲವೇ ದಿನಗಳಲ್ಲಿ ಸಾಕಷ್ಟು ಶಸ್ತ್ರಗಳೊಂದಿಗೆ ಮುತ್ತಿಗೆ ಹಾಕಿದ ಬ್ರಿಟಿಷರ ವಿರುದ್ಧ ವೀರೋಚಿತ ಕಾದಾಡಿದರೂ ಸೊಲನ್ನು ತಪ್ಪಿಸಲಾಗಲಿಲ್ಲ. ಅಲ್ಲಿಂದ ಕಣ್ಮರೆಯಾದ ನಾನಾಸಾಹೇಬರು ನೇಪಾಳ ತಲುಪಿದ ನಂತರದ ಜೀವನ ಘಟನೆಗಳು ಇಂದಿಗೂ ಪ್ರಶ್ನಾರ್ಥಕ. ಕ್ರಾಂತಿಯು ಮುಗಿಲುಮುಟ್ಟಿದ್ದಾಗ ಲಭಿಸಿದ ಗೆಲುವೇನಾದರೂ ಶಾಶ್ವತವಾಗಿರುತ್ತಿರೆ ಅಖಂಡ ಭರತಖಂಡದ ಚಕ್ರವರ್ತಿಯಾಗಿ ನಾನಾಸಾಹೇಬ ಪೇಶ್ವಾ ಮೆರೆಯುತ್ತಿರು. ಧರ್ಮಾಧಿಷ್ಠಿತ ಸರಕಾರದ ಸ್ಥಾಪನೆಯಾಗಿ ರಾಮರಾಜ್ಯ ಅಂದೇ ಸಾಕಾರಗೊಳ್ಳುತ್ತಿತ್ತು. ಆದರೆ ವಿಧಿಯ ಆಟ ಬಲುವಿಚಿತ್ರವಲ್ಲವೇ? ಲಭ್ಯ ದಾಖಲೆಗಳನ್ವಯ ಕಾಡುಪಾಲಾದ ಪೇಶ್ವಾ ತನ್ನ ವೇಷ ಮರೆಸಿ ಚದುರಿ ಸೈನ್ಯವನ್ನು ಒಗ್ಗೂಡಿಸಲು ವಿಫಲ ಯತ್ನ ನಡೆಸಿ ೧೮೫೯ರ ಅಕ್ಟೋಬರ್ ಆರರಂದು ರಾಷ್ಟ್ರದೇವಿಗೆ ತಮ್ಮ ಜೀವನಪುಷ್ಪವನ್ನು ಸಮರ್ಪಿಸಿದರು. ಸಮಗ್ರ ಭಾರತವನ್ನು ಒಗ್ಗೂಡಿಸಿ ಸಶಸ್ತ್ರ ಕ್ರಾಂತಿಗೆ ಪ್ರೇರಣೆಯಿತ್ತ ಮಹಾಮೇಧಾವಿ ನಾನಾಸಾಹೇಬರ ಜನ್ಮ ದ್ವಿಶತಮಾನೋತ್ಸವಕ್ಕೆ ವರ್ಷಗಳೆರಡೇ ಬಾಕಿಯಿದ್ದು ತತ್ಪೂರ್ವದಲ್ಲೇ ಅವರ ಜೀವನ ಚರಿತ್ರೆಯನ್ನು ಚಿಣ್ಣರಿಗೆ ತಿಳಿಸಬೇಕಿರುವುದು ನಮ್ಮ ಕರ್ತವ್ಯವಲ್ಲವೇ?