ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆ ಕಕ್ಷೆಗೆ ಏರಿಸುವ ಮೊದಲ ಪ್ರಕ್ರಿಯೆ ಯಶಸ್ವಿ

Advertisement

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮೊದಲ ಸೂರ್ಯ ಯೋಜನೆ ಆದಿತ್ಯಾ ಎಲ್ 1 ಮೊದಲ ಹಂತದ ಕಾರ್ಯಾಚರಣೆ ಯಶಸ್ವಿಯಾಗಿದೆ.
ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯನ್ನು ಕಕ್ಷೆಗೆ ಏರಿಸುವ ಮೊದಲ ಹಂತದ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. 245 ಕಿಮೀ x 22459 ಕಿಮೀ ವ್ಯಾಪ್ತಿಯ ಹೊಸ ಕಕ್ಷೆಗೆ ನೌಕೆ ತಲುಪಿದೆ. ಸೆಪ್ಟೆಂಬರ್ 5 ರಂದು ಮಧ್ಯಾಹ್ನ 3 ಗಂಟೆಗೆ ಮತ್ತೊಂದು ಹಂತದಲ್ಲಿ ಫೈರಿಂಗ್ ನಡೆಸಲಾಗುವುದು ಎಂದು ಇಸ್ರೋ ಟ್ವಿಟರ್‌ನಲ್ಲಿ ತಿಳಿಸಿದೆ.