ಆದಿತ್ಯ-ಎಲ್ 1 ಸೌರ ಮಿಷನ್ ಉಡಾವಣೆಗೆ ಕೌಂಟ್‌ಡೌನ್‌ ಶುರು

Advertisement

ಶ್ರೀಹರಿಕೋಟ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಚಂದ್ರಯಾನ – 3 ಯಶಸ್ಸಿನ ನಂತರ, ಬಾಹ್ಯಾಕಾಶದಲ್ಲಿ ಸೂರ್ಯನ ಅಧ್ಯಯನ ನಡೆಸಲು ಭಾರತ ಕೈಗೊಂಡಿರುವ ಮೊಟ್ಟ ಮೊದಲ ಯೋಜನೆ ಆದಿತ್ಯ L1. ಇದರ ಭಾಗವಾಗಿ, ಆಂಧ್ರ ಪ್ರದೇಶದ ಶ್ರೀಹರಿಕೋಟಾ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಆದಿತ್ಯ – ಎಲ್‌1 ಉಪಗ್ರಹವನ್ನು PSLV-C57 ರಾಕೆಟ್‌ನಲ್ಲಿ ಉಡಾವಣೆ ಮಾಡಲು ಇಂದು ಮದ್ಯಾಹ್ನ 11.50ರ ಸಮಯ ನಿಗದಿಯಾಗಿದೆ. ‘ಆದಿತ್ಯ ಎಲ್-1’ ಉಡಾವಣೆ ಮೂಲಕ ‘ಸೂರ್ಯಯಾನ’ ಕೈಗೊಳ್ಳಲು ಸಜ್ಜಾಗಿರುವ ಇಸ್ರೋ ಸಂಸ್ಥೆಗೆ ಮತ್ತೊಂದು ಯಶಸ್ಸು ಲಭಿಸಲಿ. ಸೂರ್ಯ ಸರ್ವೇಕ್ಷಣೆ, ಸೌರ ಮಾರುತಗಳ ಅಧ್ಯಯನ ಕೈಗೊಳ್ಳುವ ಮೂಲಕ ಭಾರತ ಮತ್ತೊಂದು ಐತಿಹಾಸಿಕ ಸಾಧನೆ ದಾಖಲಿಸಲಿ.

ಅತಿಹೆಚ್ಚು ದೂರ ಪ್ರಯಾಣ ಮಾಡಲಿರುವ ಭಾರತದ ಮೊಟ್ಟ ಮೊದಲ ನೌಕೆ : ಬಾಹ್ಯಾಕಾಶದಲ್ಲಿ ಸೂರ್ಯನ ಅಧ್ಯಯನ ನಡೆಸಲು ಭಾರತ ಕೈಗೊಂಡಿರುವ ಮೊಟ್ಟ ಮೊದಲ ಯೋಜನೆ ಆದಿತ್ಯ ಎಲ್‌-1. ಅತಿಹೆಚ್ಚು ದೂರ ಕ್ರಮಿಸಲಿರುವ ಮೊಟ್ಟ ಮೊದಲ ಗಗನ ನೌಕೆ. ಈ ನೌಕೆ ಭೂಮಿಯಿಂದ 1.5 ಮಿಲಿಯನ್ ಕಿಲೋಮೀಟರ್ ಅಂದರೆ 15 ಲಕ್ಷ ಕಿಲೋ ಮೀಟರ್‌ ಅಂತರದ ಪಯಣ ಮಾಡಲಿದೆ.