ಆಭರಣ ಅಂಗಡಿ ಕಳ್ಳತನ ಪ್ರಕರಣ: ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗೆ ಗುಂಡು

Advertisement

ಹುಬ್ಬಳ್ಳಿ : ನಗರದ ಕೇಶ್ವಾಪುರದಲ್ಲಿ ನಡೆದ ಆಭರಣ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ ಮುಂಬೈ ಮೂಲದ ಆರೋಪಿ ಫರ್ಹಾನ್ ಶೇಖ್ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲಿಸರು ಗುಂಡು ಹಾರಿಸಿದ ಘಟನೆ ಬೆಳ್ಳಂ ಬೆಳಿಗ್ಗೆ 6.30. ರ ವೇಳೆ ನಗರದ ಹೊರ ವಲಯದ ತಾರೀಹಾಳ ಕ್ರಾಸ್ ಬಳಿ ನಡೆದಿದೆ.
ಆರೋಪಿ ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಕರೆ ತರುವಾಗ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕೇಶ್ವಾಪುರ ಪೊಲೀಸ್ ಠಾಣೆಯ ಮಹಿಳಾ ಸಬ್ ಇನ್ ಸ್ಪೆಕ್ಡರ್ ಕವಿತಾ ಮಾಡಗ್ಯಾಳ ಹಾಗೂ ಪಿಐ ಕೆ.ಎಸ್ ಹತ್ತಿ ಅವರು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಆರೋಪಿ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಮುಂದಾದಾಗ ಮಹಿಳಾ ಸಬ್ ಇನ್ ಸ್ಪೆಕ್ಟರ್ ಕವಿತಾ ಅವರು ಗಾಳಿಯಲ್ಲಿ ಎರಡು ಗುಂಡು ಹಾರಿಸಿ ಎಚ್ಚರಿಸಿದ್ದಾರೆ
ಆದಾಗ್ಯೂ ಓಡಿ ಹೋಗಲು ಯತ್ನಿಸಿದಾಗ ಕಾಲಿಗೆ ಗುಂಡು ಹಾರಿಸಿದ್ದಾರೆ.ಬಳಿಕ ಬಂಧಸಿ ಕಿಮ್ಸ್ ಗೆ ದಾಖಲು ಮಾಡಿದ್ದಾರೆ.
ಆರೊಪಿ ಹಲ್ಲೆ ನಡೆಸಿದ್ದರಿಂದ ಸಿಬ್ಬಂದಿ ಮಹೇಶ ಮತ್ತು ಸುಜಾತಾ ಅವರ ಕಾಲಿಗೆ ಗಾಯವಾಗಿದ್ದು, ಕಿಮ್ಸ್ ಗೆ ದಾಖಲಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ. ಕಿಮ್ಸ್ ಗೆ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

ಆರೋಪಿ ಹಿನ್ನೆಲೆ : ಬಂಧಿತ ಆರೋಪಿ ನಟೊರಿಯಸ್ ಆಗಿದ್ದು, ಅಂತರಾಜ್ಯ ಕಳ್ಳತನ, ಡಕಾಯಿತಿ ಪ್ರಕರಣ ಆರೋಪಿಯಾಗಿದ್ದಾನೆ. ಮಹಾರಾಷ್ಟ್ರದ ಮುಂಬೈನಗರ ಸೇರಿ ವಿವಿಧ ಕಡೆ 8 , ತೆಲಂಗಾಣ ಮತ್ತು ಕರ್ನಾಟಕದಲ್ಲಿ ತಲಾ 3, ಗುಜರಾತ್ ನಲ್ಲಿ ಒಂದು ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ.