ಆರ್‌ಎಸ್ಎಸ್ ನಿಷೇಧ ಮಾಡಿ ಎನ್ನುವುದು ದುರ್ದೈವ

ಆರ್‌ಎಸ್ಎಸ್
Advertisement

ಹುಬ್ಬಳ್ಳಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರ್‌ಎಸ್ಎಸ್ ನಿಷೇಧ ಮಾಡಿ ಎಂದು ಹೇಳುವುದೇ ದುರ್ದೈವದ ಸಂಗತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶುಕ್ರವಾರ ಇಲ್ಲಿನ ಆದರ್ಶನಗರದ ಅವರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಪಿಎಫ್ಐ ಸಂಘಟನೆಯನ್ನು ಯಾಕೆ ನಿಷೇಧಿಸಿದ್ದೀರಿ ಎಂದು ಕೇಳಲು ಕಾಂಗ್ರೆಸ್‌ಗೆ ಯಾವುದೇ ಆಧಾರಗಳಿಲ್ಲ. ಏಕೆಂದರೆ ಅವರೇ ಪಿಎಫ್ಐ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂದಕ್ಕೆ ಪಡೆದಿದ್ದರು. ಈಗ ಅದನ್ನು ಮರೆಮಾಚಲು ಆರ್‌ಎಸ್ಎಸ್ ನಿಷೇಧಿಸಬೇಕು ಎಂದು ಆಗ್ರಹ ಮಾಡುತ್ತಿದ್ದಾರೆ. ಅದನ್ನು ಯಾಕೆ ನಿಷೇಧಿಸಬೇಕು ಎಂಬ ಪ್ರಶ್ನೆಗೆ ಅವರ ಬಳಿ ಉತ್ತರ ಇಲ್ಲ ಎಂದರು.
ಆರ್‌ಎಸ್ಎಸ್ ಸಮಾಜಮುಖಿ ಕಾರ್ಯಗಳನ್ನು ಹಲವು ದಶಕಗಳಿಂದ ಮಾಡಿಕೊಂಡು ಬಂದಿದೆ. ದೀನ ದಲಿತರು, ಅನಾಥರಿಗೆ ಹಲವಾರು ಸಂಸ್ಥೆಗಳನ್ನು ಕಟ್ಟಿದೆ. ಪ್ರವಾಹ ಮುಂತಾದ ಸಂಕಷ್ಟದ ಸಂದರ್ಭದಲ್ಲಿ ಮುಂದೆ ನಿಂತು ಆರ್‌ಎಸ್ಎಸ್ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ದೇಶಪ್ರೇಮ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿಕೊಂಡು ಬಂದಿದೆ. ಇದ್ಯಾವುದು ಸಿದ್ದರಾಮಯ್ಯ ಅವರ ಕಣ್ಣಿಗೆ ಕಾಣುವುದಿಲ್ಲವೇ? ಈ ಮಟ್ಡಕ್ಕೆ ಇಳಿದು ಸಿದ್ದರಾಮಯ್ಯ ಟೀಕೆ ಮಾಡಬಾರದಿತ್ತು ಎಂದರು.