ಇಂಚಗೇರಿ ಸಂಪ್ರದಾಯದಂತೆ ಸರ್ಕಾರ ನಡೆಯುತ್ತಿದೆ: ಬೊಮ್ಮಾಯಿ

Advertisement

ಬಾಗಲಕೋಟೆ: ಇಂಚಗೇರಿ ಸಂಪ್ರದಾಯ ಅಪರೂಪವಾಗಿದೆ. ಹುಬ್ಬಳ್ಳಿ ಮಹಾದೇವಪ್ಪನವರ ಒಡನಾಟ, ಇಂಚಗೇರಿ ಸಂಪ್ರದಾಯ ನಮ್ಮ ಮನೆತನಕ್ಕು ಸಂಭಂಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಹಿಪ್ಪರಗಿ ಸಂಗಮೇಶ್ವರ ಮಹಾರಾಜರ ಸನ್ನಿದಿಗೆ ದರ್ಶನ ಪಡೆದು ಮಹಾದೇವರನ್ನು ನಾನು ಕೂಡ ನೋಡಿದ್ದೇನೆ. ಅವರ ಶಕ್ತಿ ಹಾಗು ಇಂಚಗೇರಿ ಸಂಪ್ರದಾಯವನ್ನು ದೇಶದೆಲ್ಲೆಡೆ ಪಸರಿಸಲು ಶ್ರಮ ದೊಡ್ಡದು. ದೀನ ದಲಿತರಿಗೆ, ಧ್ವನಿಯಿಲ್ಲದವರಿಗೆ ನ್ಯಾಯ ಒದಗಿಸುವ ಕಾರ್ಯದೊಂದಿಗೆ ಇಂಚಗೇರಿಯ ಮೂಲ ತತ್ವದಡಿಯಲ್ಲಿಯೇ ನಮ್ಮ ಸರ್ಕಾರವೂ ಕೂಡ ಮುನ್ನಡೆಯುತ್ತಿದೆ. ಇಲ್ಲಿ ಬಂದ ಮೇಲೆ ನನ್ನ ಆತ್ಮ ವಿಶ್ವಾಸ, ಬಲ ಇಮ್ಮಡಿಗೊಂಡಿದ್ದು, ಬರುವ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಸರ್ಕಾರ ನಿಶ್ಚಿತವಾಗಿ ನಡೆಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.