ಇಂಜಿನಿಯರ್‌ಗೆ 4 ವರ್ಷ ಜೈಲು ಶಿಕ್ಷೆ

ನ್ಯಾಯ
Advertisement

ಮಂಗಳೂರು: ಆದಾಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಆಸ್ತಿ ಹೊಂದಿದ್ದ ಪ್ರಕರಣದಲ್ಲಿ ಮುಲ್ಕಿ ನಗರ ಪಂಚಾಯತ್‌ನಲ್ಲಿ ಜೂನಿಯರ್ ಎಂಜಿನಿಯರ್ ಆಗಿದ್ದ ಪದ್ಮನಾಭ ಎನ್.ಕೆ. ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆರೋಪಿಗೆ 4 ವರ್ಷಗಳ ಸದಾ ಸಜೆ ಹಾಗೂ 26,50,000 ರೂ. ದಂಡ ವಿಧಿಸಲಾಗಿದೆ. ಮುಲ್ಕಿ ನಗರ ಪಂಚಾಯತ್‌ನಲ್ಲಿ ಜೂನಿಯರ್ ಎಂಜಿನಿಯರ್ ಆಗಿದ್ದ ಪದ್ಮನಾಭ ಎನ್.ಕೆ. ಆದಾಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಆಸ್ತಿ ಹೊಂದಿದ್ದ ಮಾಹಿತಿಯಂತೆ
ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ಮಂಗಳೂರಿನ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 02/2015 ಕಲಂ 13 (1)(ಇ) ಜತೆಗೆ 13(2) ಭ್ರಷ್ಟಾಚಾರ ತಡೆಕಾಯ್ದೆ 1988 ರಂತೆ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆಯನ್ನು ನಡೆಸಿದ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ.ಜಕಾತಿಯವರು ಮಾ.16 ರಂದು ತೀರ್ಪು ನೀಡಿದ್ದು ಆರೋಪಿಗೆ 4 ವರ್ಷಗಳ ಸದಾ ಸಜೆ ಹಾಗೂ 26,50,000 ದಂಡ ವಿಧಿಸಿದ್ದಾರೆ. ಆರೋಪಿಯು ದಂಡ ತೆರಲು ತಪ್ಪಿದಲ್ಲಿ ಮತ್ತೇ 6 ತಿಂಗಳ ಕಾಲ ಸದಾ ಸಜೆಗೆ ತೀರ್ಪಿನಲ್ಲಿ ಆದೇಶಿಸಲಾಗಿದೆ.ಪ್ರಕರಣದ ತನಿಖೆಯನ್ನು ಮಂಗಳೂರು ಲೋಕಾಯುಕ್ತ ಪೊಲೀಸ್ ನಿರೀಕ್ಷರಾಗಿದ್ದ ನವೀನ್‌ಚಂದ್ರ ಜೋಗಿ ಅವರು ಪೂರ್ಣಗೊಳಿಸಿದ್ದು ಪೊಲೀಸ್ ನಿರೀಕ್ಷರಾಗಿದ್ದ ಭಾರತಿ ಜಿ.ಅವರು ಆರೋಪಿಯ ವಿರುದ್ಧ 3ನೇ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲದಲ್ಲಿ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ಪ್ರಕರಣದಲ್ಲಿ ಕರ್ನಾಟಕ ಲೋಕಾಯುಕ್ತದ
ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮನ್ನಿಪ್ಪಾಡಿ ಸರಕಾರದ ಪರವಾಗಿ ವಾದಿಸಿದ್ದರು.