ಇಂದು ಮೋದಿ-ಜಿನ್​ಪಿಂಗ್​ ಮುಖಾಮುಖಿ…!

Advertisement

ದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದು ಚೀನಾ ಅಧ್ಯಕ್ಷ ಕ್ಸಿ ಜಿನ್​​ ಪಿಂಗ್​​​​ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​​​​​​ ಭೇಟಿಯಾಗಲಿದ್ದಾರೆ.

ಉಜ್ಬೇಕಿಸ್ತಾನದ ಸಮರ್​ಖಂಡ್​ನಲ್ಲಿ ಎಸ್​ಸಿಓ ಸಮ್ಮೇಳನ ನಡೆಯುತ್ತಿದೆ. ಈ ಸಮ್ಮೇಳನದಲ್ಲಿ ಮೋದಿ ಭಾಗಿಯಾಗಲಿದ್ದು, ಉಜ್ಬೇಕಿಸ್ತಾನ ಅಧ್ಯಕ್ಷರು ಏರ್ಪಡಿಸಿರುವ ಭೋಜನಕೂಟದಲ್ಲಿ ಭಾಗಿಯಾಗಲಿದ್ದಾರೆ. ಇದೇ ವೇಳೆ ಜಿನ್​ಪಿಂಗ್​​​, ಪುಟಿನ್​ ಮತ್ತು ಮೋದಿ ಮುಖಾಮುಖಿಯಾಗಲಿದ್ದಾರೆ. ಚೀನಾ ಜತೆಗಿನ ಗಡಿ ಘರ್ಷಣೆಯ ಸಂದರ್ಭದಲ್ಲಿ ಈ ಭೇಟಿ ಮಹತ್ವ ಪಡೆದುಕೊಳ್ಳುತ್ತಿದೆ.