ಇಂಗ್ಲೆಂಡಿನ ರಾಣಿ ಎಲಿಜಬೆತ್ ನಿಧನ

Advertisement

ಲಂಡನ್: ಕಳೆದ 70 ವರ್ಷಗಳಲ್ಲಿ ಬ್ರಿಟನ್ನಿನ ರಾಣಿಯಾಗಿ ಮೆರದ ಎರಡನೇ ಎಲಿಜಬೆತ್ ಗುರುವಾರ ನಿಧನರಾಗಿದ್ದಾರೆ.

ಅವರಿಗೆ 96 ವರ್ಷ ವಯಸ್ಸಾಗಿತ್ತು. ರಾಣಿಯ ಪುತ್ರ ಚಾರ್ಲಿ ಅವರು ಮುಂದಿನ ರಾಜನಾಗಿ ನಿಯುಕ್ತರಾಗಿದ್ದಾರೆ‌. ರಾಣಿಯವರು ತಮ್ಮ ಕೊನೆಯ ದಿನಗಳನ್ನು ಸ್ಕಾಟಿಷ್ ಹೈಲ್ಯಾಂಡಿನ ಬಾಲ್ಮೊರ್ ರಿಟ್ರೇಟ್‌ನಲ್ಲಿ ಕಳೆದಿದ್ದರು. ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ಚಾರ್ಲಿ ಮತ್ತು ಮೊಮ್ಮಕ್ಕಳಾದ ವಿಲಿಯಮ್ ಹಾಗೂ ಹ್ಯಾರಿಯವರಲ್ಲದೆ, ಅವರ ಕುಟುಂಬ ಬಾಲ್ಮೊರ್ ರಿಟ್ರೀಟ್‌ಗೆ ಆಗಮಿಸಿದೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಣಿ ಎಲಿಜಬೆತ್ ಅವರನ್ನು ಈ ದಿನ ಬೆಳಗ್ಗೆ ವೈದ್ಯರ ಸಲಹೆಯಂತೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು.
70 ವರ್ಷಗಳ ಕಾಲ ಇಂಗ್ಲೆಂಡಿಗೆ ಸೇವೆ ಸಲ್ಲಿಸಿರುವ ರಾಣಿಯವರ ವಜ್ರಮಹೋತ್ಸವವನ್ನು ಕಳೆದ ಜೂನ್‌ನಲ್ಲಿ ಆಚರಿಸಲಾಗಿತ್ತು. ಇಂಗ್ಲೆಂಡಿನ ರಾಣಿಯಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಶ್ರೇಯಸ್ಸು ರಾಣಿ ಎರಡನೇ ಎಲಿಜಬೆತ್‌ ಅವರದ್ದಾಗಿದೆ. 2015ರಲ್ಲಿ ತಮ್ಮ ಮುತ್ತಜ್ಜಿ ರಾಣಿ ವಿಕ್ಟೋರಿಯಾರ ದಾಖಲೆಯನ್ನೂ ಮುರಿದಿದ್ದರು. ಹಾಲಿ ಅವರು ವಿಶ್ವದಲ್ಲೇ ರಾಣಿಯಾಗಿ ದೀರ್ಘ ಕಾಲ ವಿರಾಜಮಾನರಾಗಿದ್ದವರ ಸಾಲಿನಲ್ಲಿ ಎರಡನೇ ಸ್ಥಾನಕ್ಕೇರಿದ್ದರು.