ಉಚಿತ ಆಧಾರ್‌ ಅಪ್​ಡೇಟ್‌ಗೆ ಮತ್ತೊಂದು ಅವಕಾಶ

Advertisement

ಬೆಂಗಳೂರು: ಉಚಿತವಾಗಿ ಆಧಾರ್ ಕಾರ್ಡ್ ದಾಖಲೆಗಳನ್ನು ಅಪ್​ಡೇಟ್ ಮಾಡುವ ಗಡುವನ್ನು ಡಿಸೆಂಬರ್ 14ರಿಂದ 2024ರ ಮಾರ್ಚ್ 14ರವರೆಗೆ ವಿಸ್ತರಿಸಲಾಗಿದೆ ಎಂದು ಯುಐಡಿಎಐ ಹೇಳಿದೆ.
ಆಧಾರ್ ಅನ್ನು ನವೀಕರಿಸುವ ಮೂಲಕ, ನೀವು ಆಧಾರ್ ಕಾರ್ಡ್‌ನಲ್ಲಿರುವ ಹೆಸರು, ಹುಟ್ಟಿದ ದಿನಾಂಕ, ಕುಟುಂಬದ ಹೆಸರು, ವಿಳಾಸ, ಲಿಂಗ ಇತ್ಯಾದಿಗಳಲ್ಲಿ ಯಾವುದೇ ದೋಷಗಳನ್ನು ಸರಿಪಡಿಸಬಹುದು. ಆದರೆ ಉಚಿತ ಆಧಾರ್ ನವೀಕರಣಕ್ಕೆ ಡಿಸೆಂಬರ್ 14 ಕೊನೆಯ ದಿನಾಂಕ ಎಂದು ಹೇಳಿರುವ ಯುಐಡಿಎಐ ಇದೀಗ ಆ ಗಡುವನ್ನು ವಿಸ್ತರಿಸಿ ಮತ್ತೊಂದು ಅವಕಾಶ ನೀಡಿದೆ. ಮೊದಲಿಗೆ ಸೆಪ್ಟೆಂಬರ್ 14ರವರೆಗೂ ಗಡುವು ಇತ್ತು. ಬಳಿಕ ಡಿಸೆಂಬರ್ 14ಕ್ಕೆ ಅದನ್ನು ಹೆಚ್ಚಿಸಲಾಗಿತ್ತು.
https://myaadhaar.uidai.gov.in ಗೆ ಭೇಟಿ ನೀಡುವ ಮೂಲಕ ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ನವೀಕರಿಸಬಹುದು. ಮೊದಲು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಲಾಗಿನ್ ಆಗಬೇಕು. ಅದರ ನಂತರ ಆನ್‌ಲೈನ್ ನವೀಕರಣ ಸೇವೆಗಳ ಮೇಲೆ ಕ್ಲಿಕ್ ಮಾಡಿ. ನಂತರ ಅಪ್‌ಡೇಟ್ ಆಧಾರ್ ಆನ್‌ಲೈನ್ ಮೇಲೆ ಕ್ಲಿಕ್ ಮಾಡಿ ಮತ್ತು ಆಧಾರ್ ಅಪ್‌ಡೇಟ್ ಮಾಡಲು ಮುಂದುವರಿಯಿರಿ ಕ್ಲಿಕ್ ಮಾಡಿ. ನಿಮ್ಮ ವಿವರಗಳನ್ನು ನವೀಕರಿಸಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಪಾವತಿಯ ಅಗತ್ಯವಿಲ್ಲದೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ನಂತರ SMS ಮೂಲಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನವೀಕರಣ ವಿನಂತಿ ಸಂಖ್ಯೆಯನ್ನು ಕಳುಹಿಸಲಾಗುತ್ತದೆ. URN ಸಂಖ್ಯೆಯೊಂದಿಗೆ ನಿಮ್ಮ ಆಧಾರ್ ನವೀಕರಣ ಸ್ಥಿತಿಯನ್ನು ನೀವು ಪರಿಶೀಲಿಸಬಹುದು. ಹತ್ತಕ್ಕೂ ಹೆಚ್ಚು ವರ್ಷಗಳಿಂದ ಆಧಾರ್ ಅಪ್​ಡೇಟ್ ಮಾಡದೇ ಇರುವ ನಿವಾಸಿಗಳು ತಮ್ಮ ಹೊಸ ಐಡಿ ಪ್ರೂಫ್ ಮತ್ತು ಅಡ್ರೆಸ್ ಪ್ರೂಫ್ ದಾಖಲೆಗಳನ್ನು ಆಧಾರ್​ನಲ್ಲಿ ಅಪ್​ಡೇಟ್ ಮಾಡಬೇಕೆಂದು ಯುಐಡಿಎಐ ಶಿಫಾರಸು ಮಾಡಿದೆ. ಇದರಿಂದ ಆಧಾರ್ ಅಥೆಂಟಿಕೇಶನ್ ಕಾರ್ಯ ಸುಲಭವಾಗುತ್ತದೆ.