ಉತ್ತರ ವಲಯ ವ್ಯಾಪ್ತಿಯಲ್ಲಿ ಫೋನ್‌ ಇನ್ ಕಾರ್ಯಕ್ರಮ‌ ನಡೆಸಿ

Advertisement

ಬೆಳಗಾವಿ: ಉತ್ತರ ವಲಯ ವ್ಯಾಪ್ತಿಯಲ್ಲಿ ಫೋನ್‌ ಇನ್ ಕಾರ್ಯಕ್ರಮ‌ ನಡೆಸುವಂತೆ ಎಸ್ಪಿಗಳಿಗೆ ಸೂಚನೆ ನೀಡಲಾಗುವುದು ಎಂದು ಐಜಿಪಿ ಸತೀಶಕುಮಾರ ಹೇಳಿದರು.
ಜಿಲ್ಲಾ ಪೊಲೀಸ್ ಮೈದಾನದಲ್ಲಿ ಪ್ರಾಪರ್ಟಿ ಪರೇಡ್ ಕಾರ್ಯಕ್ರಮ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಬೆಳಗಾವಿ ಎಸ್ಪಿಯವರು ನಡೆಸುವ ಹಾಗೆ ತಿಂಗಳಲ್ಲಿ ಒಂದು ದಿನ ನಾನು‌ ಅಷ್ಟೇ ಅಲ್ಲ ಎಲ್ಲ‌ ಎಸ್ಪಿಗಳಿಗೂ ಫೋನ್‌ ಇನ್ ಕಾರ್ಯಕ್ರಮ ನಡೆಸುವಂತೆ ಸೂಚನೆ ನೀಡುವುದಾಗಿ ಹೇಳಿದರು.
ಕಳೆದ ಒಂದು ವರ್ಷದಲ್ಲಿ ಬೆಳಗಾವಿ ಜಿಲ್ಲಾ ಪೊಲೀಸರು ಅಪರಾಧ ಪತ್ತೆ ಪ್ರಕರಣಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಶೇ. 70 ರಷ್ಟು ಸಾಧನೆ ಇದಾಗಿದೆ ಎಂದು ಐಜಿಪಿ ಹೇಳಿದರು.
ಬೀಟ್ ವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸಿದ ಅವರು, ಈ ಹಿಂದೆ ಶಂಕಿತರು ಸಿಕ್ಕರೆ ಅವರನ್ನು ಠಾಣೆಗೆ ಕರೆದುಕೊಂಡು ಬಂದು ಬೆರಳಚ್ಚು ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ ಈಗ ಹೈಟೆಕ್ ಕಾಲ. ಬೀಟ್ ಪೊಲೀಸರಿಗೆ ಮೊಬೈಲ್‌ನಲ್ಲಿ ಶಂಕಿತರ ಬೆರಳಚ್ಚು ಒತ್ತಿದರೆ ಎಲ್ಲವೂ ಗೊತ್ತಾಗುತ್ತದೆ.‌ ಹೀಗಾಗಿ ಆರೋಪಿಗಳನ್ನು ಬೇಗ ಪತ್ತೆ ಮಾಡಬಹುದಾಗಿದೆ ಎಂದು ಅವರು ಹೇಳಿದರು.
ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಉಭಯ ರಾಜ್ಯಗಳ ಪೊಲೀಸ್‌ ಇಲಾಖೆಯ ಸಂಬಂಧ ಚೆನ್ನಾಗಿದೆ. ಯಾವುದೇ ಸಮಸ್ಯೆಯಿಲ್ಲ ಎಂದರು. ಎಸ್ಪಿ‌ ಡಾ. ಸಂಜೀವ ಪಾಟೀಲ, ಹೆಚ್ಚುವರಿ ಎಸ್ಪಿ ಮಹಾನಿಂಗ ನಂದಗಾವಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.