ಉನ್ನತ ಜನರ ಆಯ್ಕೆಯಲ್ಲೂ ನಕಲಿ

Advertisement

ಬಾಗಲಕೋಟೆ: ನಕಲಿ ಆರ್‌ಎಂಡಿ ಪಾನ್ ಮಸಾಲಾ ಹಾಗೂ ತಂಬಾಕು ಪೌಚ್‌ಗಳನ್ನು ತಯಾರಿಸುವ ಜಾಲವೊಂದನ್ನು ಇಲ್ಲಿನ ಪೊಲೀಸರು ಭೇದಿಸಿದ್ದು, ಕೋಟ್ಯಂತರ ರೂ. ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ.
ಎವರ್‌ಕ್ರೆಸ್ಟ್ ಇಂಡಸ್ಟ್ರಿ ದಾರಿವಾಲ ಕಂಪನಿಯ ಸೀನಿಯರ್ ಸೇಲ್ಸ್ ಸೂಪರ್‌ವೈಸರ್ ಮಹಾಂತೇಶ ಮಲ್ಲಪ್ಪ ಮೂಲಿಮನಿ ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ನಗರದ ಪಾನ್‌ಅಂಗಡಿಯೊಂದರಲ್ಲಿ ಸಿಕ್ಕ ಸುಳಿವನ್ನು ಹಿಡಿದು ಪ್ರಕರಣ ಭೇದಿಸಿದ್ದಾರೆ. ನಕಲಿ ಆರ್.ಎಂ.ಡಿ ಪಾನ್ ಮಸಾಲಾ ಹಾಗೂ ತಂಬಾಕು ಪೌಚ್‌ಗಳನ್ನು ತಯಾರು ಮಾಡುತ್ತಿದ್ದ ದೇವದುರ್ಗ, ಹೈದ್ರಾಬಾದ್ ಹಾಗೂ ನವದೆಹಲಿಯಲ್ಲಿರುವ ಘಟಕಗಳ ಮೇಲೆ ದಾಳಿ ಮಾಡಿದ ಪೊಲೀಸರು ಸುಮಾರು ಎರಡು ಕೋಟಿ ರೂ. ಬೆಲೆ ಬಾಳುವ ಆರ್.ಎಂ.ಡಿ ಪಾನ್‌ಮಸಾಲಾ ಹಾಗೂ ತಂಬಾಕು ಪೌಚ್‌ಗಳ ದೊಡ್ಡ ಬಾಕ್ಸ್ಗಳನ್ನು ಜಪ್ತಿ ಮಾಡಿದ್ದಾರೆ. ಜತೆಗೆ ಇವುಗಳನ್ನು ತಯಾರು ಮಾಡುವ ಐದು ಮಷಿನ್‌ಗಳನ್ನು ಹಾಗೂ ಸಂಬಂಧಪಟ್ಟ ಲೇಬಲ್‌ಗಳನ್ನು, ಕಚ್ಚಾ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ದೇವದುರ್ಗದ ಮಹಮ್ಮದ್ ವಸೀಮ್, ಮಹಮ್ಮದ್ ಯುಸೂಫ್(ಮಾನ್ವಿ), ಹೈದರಾಬಾದಿನ ಮುನೀರ್, ಹಿಮಾಯತ ದೆಹಲಿಯ ಮಹ್ಮದ್, ನಿಪ್ಪಾಣಿಯ ವಿಕಾಸ ಚವ್ಹಾಣ ಮತ್ತು ಸಂತೋಷ ಬಳ್ಳೋಳ್ಳೆ, ಬೆಳಗಾವಿಯ ಜಹೀರ್ ಅಬ್ಬಾಸ್, ನದೀಮ್ ಮತ್ತು ಇಕ್ಬಾಲ್ ಅವರನ್ನು ಬಂಧಿಸಿದ್ದಾರೆ.