ಎಆರ್‌ಟಿಓಗೆ 4 ವರ್ಷ ಜೈಲು, 63 ಲಕ್ಷ ರೂ. ದಂಡ

ಎಆರ್‌ಟಿಓ
Advertisement

ಬೆಳಗಾವಿ: ತಮ್ಮ ಸೇವಾ ಅವಧಿಯಲ್ಲಿ ಭ್ರಷ್ಟಾಚಾರದಿಂದ ಅಕ್ರಮ ಆಸ್ತಿಯನ್ನು ಸಂಪಾದಿಸಿದ ಆರೋಪದಲ್ಲಿ ಬೀದರ್ ಜಿಲ್ಲೆ ಹುಮನಾಬಾದ ಆರ್‌ಟಿಓ ಕಚೇರಿಯ ಎಆರ್‌ಟಿಓ ಪಿ. ಶಾಂತಕುಮಾರ ಅವರ ವಿರುದ್ಧದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ 4ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ ಆರೋಪಿಗೆ 4 ವರ್ಷ ಕಠಿಣ ಶಿಕ್ಷೆ ಮತ್ತು ರೂ. 63 ಲಕ್ಷ ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಆರ್.ಕೆ ಪಾಟೀಲ ಅವರು 2010ರ ಮೇ. 3ರಂದು ಆಪಾದಿತನ ಬೆಳಗಾವಿಯ ಆಂಜನೇಯ ನಗರದಲ್ಲಿರುವ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಆಸ್ತಿ ಪತ್ತೆ ಮಾಡಿದ್ದು, ಒಟ್ಟು ಆಸ್ತಿಯಲ್ಲಿ 1,14,62,121 ರೂ. ಮೌಲ್ಯದ ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆಯನ್ನು ನಡೆಸಿದ 4ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ ಪ್ರಭು ಅವರು ಆರೋಪಿತ ಅಧಿಕಾರಿ ಪಿ, ಶಾಂತಕುಮಾರ ರೂ. 63,00,000/- ಮೌಲ್ಯದ ಆಸ್ತಿಯನ್ನು ಭ್ರಷ್ಟಾಚಾರ ಮತ್ತು ಲಂಚಗುಳಿತನದಿಂದ ಸಂಪಾದಿಸಿರುತ್ತಾರೆಂದು ಪರಿಗಣಿಸಿ ಅವರನ್ನು ತಪ್ಪಿತಸ್ಥನೆಂದು ತೀರ್ಪು ನೀಡಿದರು. ಆರೋಪಿಗೆ 4 ವರ್ಷ ಕಠಿಣ ಶಿಕ್ಷೆ ಮತ್ತು ರೂ. 63,00,000/- ದಂಡ ವಿಧಿಸಿದೆ. ದಂಡದ ಹಣವನ್ನು ತುಂಬದೇ ಇದ್ದ ಪಕ್ಷದಲ್ಲಿ ಆರೋಪಿತನ ಹಾಗೂ ಆತನ ಪತ್ನಿ ಹೆಸರಿನಲ್ಲಿರುವ ಚರ ಮತ್ತು ಚಿರಾಸ್ಥಿಗಳನ್ನು ಮುಟ್ಟುಗೋಲು ಹಾಕಲು ಆದೇಶ ಹೊರಡಿಸಲಾಗಿದೆ.