ಎಚ್‌ಡಿಕೆ ಫೋನ್ ಟ್ಯಾಪ್ ಮಾಡ್ತಿಲ್ಲ

Advertisement

ಹುಬ್ಬಳ್ಳಿ: ತಮ್ಮ ಮತ್ತು ತಮ್ಮ ಕುಟುಂಬದ ಫೋನ್ ಟ್ಯಾಪಿಂಗ್ ನಡೆಯುತ್ತಿದೆ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪವನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ ಸೋಮವಾರ ಖಡಾಖಂಡಿತವಾಗಿ ನಿರಕಾರಿಸಿದರು.
ಕೊಲೆಗೀಡಾದ ಅಂಜಲಿ ಅಂಬಿಗೇರ್ ನಿವಾಸಕ್ಕೆ ಭೇಟಿ ನೀಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಮಾಜಿ ಸಿಎಂ ಸೇರಿದಂತೆ ಯಾರೊಬ್ಬರ ಫೋನ್ ಕದ್ದಾಲಿಕೆಯನ್ನೂ ಪೊಲೀಸರು ಮಾಡುತ್ತಿಲ್ಲ ಎಂದು ಒತ್ತಿ ಹೇಳಿದರು.
`ನಮ್ಮ ಸರ್ಕಾರ ಫೋನ್ ಕದ್ದಾಲಿಕೆ ಮಾಡುವುದಿಲ್ಲ. ಈ ಸಂಬಂಧ ಮಾಜಿ ಸಿಎಂ ತಮ್ಮ ಬಳಿ ಇರುವ ಮಾಹಿತಿಗಳನ್ನು ನೀಡಲಿ. ಸುಮ್ಮನೇ ಹೇಳಿಕೆ ನೀಡುವುದು ಸರಿಯಲ್ಲ. ಖಾಸಗಿಯವರು ಟ್ಯಾಪ್ ಮಾಡುತ್ತಿದ್ದರೆ ದೂರು ದಾಖಲಿಸಲಿ. ತನಿಖೆ ನಡೆಸಲಾಗುವುದು’ ಎಂದು ಪರಮೇಶ್ವರ ಹೇಳಿದರು.
ತಮ್ಮದೂ ಸೇರಿ ತಮ್ಮ ಆಪ್ತ ವಲಯದ ೪೫ ಜನರ ಫೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬುದಾಗಿ ಎಚ್‌ಡಿಕೆ ಬೆಂಗಳೂರಿನ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು.
ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದತಿಗೆ ಕೇಂದ್ರಕ್ಕೆ ಬರೆಯಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವರು ಪುನರುಚ್ಚರಿಸಿ ಬ್ಲೂ ಕಾರ್ನರ್ ನೊಟೀಸ್ ಜಾರಿಯಾಗಿದೆ ಎಂದರು.