ಏಕಾಂಗಿಯಾಗಿ ಮೇಲಕ್ಕೆ ಬರೋಕೆ ಆಗಲ್ಲ

Advertisement

ಕೋಲಾರ : ಏಕಾಂಗಿಯಾಗಿ ಮೇಲಕ್ಕೆ ಬರೋಕೆ ಆಗಲ್ಲ ಎಂದು ಬಿಜೆಪಿ ಜೊತೆ ಜೆಡಿಎಸ್ ಸೇರಿದೆ ಎಂದು ಕೋಲಾರದಲ್ಲಿ ಕೃಷಿ ಸಚಿವ ಚಲುವನಾರಾಯಣಸ್ವಾಮಿ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು ಜೆಡಿಎಸ್‌ನವರು ಬಿಜೆಪಿ ಜೊತೆ ಏಕೆ ಹೋದ್ರು. ರಾಜ್ಯದ ಹಿತಕ್ಕಾಗಿ ಮಧ್ಯಪ್ರವೇಶ ಮಾಡಿ ಕಾವೇರಿ ವಿಚಾರವಾಗಿ ಪ್ರಧಾನಿನ ಭೇಟಿ ಮಾಡಿದ್ದಾರ ? ಪಕ್ಷದ ಶಾಸಕರು ಬಿಟ್ಟು ಹೋಗ್ತಿದ್ದಾರೆ ಅನ್ನೋ ಭಯ ಬಂದಿದೆ. ಏಕಾಂಗಿಯಾಗಿ ಮೇಲಕ್ಕೆ ಬರೋಕೆ ಆಗಲ್ಲ ಎಂದು ಬಿಜೆಪಿ ಜೊತೆ ಜೆಡಿಎಸ್ ಸೇರಿದೆ. ಕಾಂಗ್ರೆಸ್ ಜೊತೆ ಫೈಟ್ ಮಾಡೋಕೆ ಆಗಲ್ಲ ಎಂದು ಬಿಜೆಪಿ ಸಹ ಜೆಡಿಎಸ್ ಜೊತೆ ಸೇರಿದೆ ಎಂದರು.
ಕಾಂಗ್ರೆಸ್‌ನವರು ಬೇರೆ ಪಕ್ಷಕ್ಕೆ ಏಕೆ ಹೋಗ್ತಾರೆ ?: ಬಿಜೆಪಿ ಹಾಗೂ ಜೆಡಿಎಸ್‌ನವರೆ ಕಾಂಗ್ರೆಸ್‌ಗೆ ಬರ್ತಾರ ಅನ್ನೋದು ಕಾಲವೇ ತಿಳಿಸುತ್ತೆ. ಕಾಂಗ್ರೆಸ್ ಸರ್ಕಾರ ತೆಗೀತಿವಿ ಅಂದ್ರೆ ಪ್ರಜಾಪ್ರಭುತ್ವದ ಅರ್ಥ ಏನು. ಜೆಡಿಎಸ್ ಹಾಗೂ ಬಿಜೆಪಿಯ ಕೆಲವರು ಮೈತ್ರಿ ಮಾಡಿಕ್ಕೊಳೋಕ್ಕೆ ಇಷ್ಟ ಇಲ್ಲ. ಕಾಂಗ್ರೆಸ್‌ನ ಸಂಪರ್ಕ ಮಾಡ್ತಿದ್ದಾರೆ, ಸಿದ್ದಂತಾ ಒಪ್ಪಿ ಬಂದರೆ ಸೇರ್ಪಡೆ. ನಾವು ಯಾರನ್ನು ಆಪರೇಷನ್ ಮಾಡ್ತಿಲ್ಲ, ನಮಗೆ ಅವಶ್ಯಕತೆಯೂ ಇಲ್ಲ. 136 ಜನ ಇದ್ದಾರೆ, ಒಂದೋ ಎರಡೋ ಇದ್ರೆ ಯೋಚನೆ ಮಾಡಬೇಕಿತ್ತು.
ಸಮ್ಮಿಶ್ರ ಸರ್ಕಾರವನ್ನು ತೆಗಿದಿದ್ದೆ ಕುಮಾರಸ್ವಾಮಿ ಅವರು: 37 ಜನ ಇದ್ದವರನ್ನು 80 ಜನ ಇದ್ದವರು ಸಿಎಂ ಮಾಡಿದ್ರು. ಒಂದು ದಿನ ಆದ್ರೂ ಕುಮಾರಸ್ವಾಮಿ ಅವರು ಕೃತಜ್ಞತೆ ಹೇಳಿದ್ದಾರ ? ಅವರಿಗೆ ಕಾಳಜಿ ಹಾಗೂ ಸಂಸ್ಕಾರ ಇದಿಯಾ ಅನ್ನೋದು ಗೊತ್ತಿಲ್ಲ. ಒಂದು ಲೋಟ ನೀರು ಕೊಟ್ಟರೆ ಸಾಕು ನೆನೆಪು ಮಾಡ್ಕೊಳ್ತಾರೆ. ಅವರು ಸಿಎಂ ಇದ್ದಾಗ ಅವರ ಚಟುವಟಿಕೆ ಹಾಗೂ ಸರ್ಕಾರ ನಡೆಸಿದ ರೀತಿಯಲ್ಲಿ ಹೇಗಿತ್ತು. ಜೆಡಿಎಸ್ ಅಧ್ಯಕ್ಷ ವಿಶ್ವನಾಥ್ ಅವರೇ ಪಕ್ಷ ಬಿಟ್ಟು ಹೋದ್ರು.
ಗೋಪಾಲಣ್ಣ, ನಾರಾಯಣಗೌಡ ಏಕೆ ಜೆಡಿಎಸ್ ಬಿಟ್ರು. ಅವರೇ ಸರ್ಕಾರ ಕಳೆದುಕೊಂಡು ಬೇರೆಯವರ ಮೇಲೆ ಹೇಳಬಾರದು. ಯಡಿಯೂರಪ್ಪ, ಬೊಮ್ಮಾಯಿ ಹಾಗೂ ಕುಮಾರಸ್ವಾಮಿ ಆಡಳಿತಕ್ಕೆ ಬೇಸತ್ತು ಕಾಂಗ್ರೆಸ್‌ಗೆ ಮತ ನೀಡಿದ್ದಾರೆ.
ಮಂಡ್ಯದಲ್ಲಿ ಲೋಕಸಭಾ ಅಭ್ಯರ್ಥಿ ಬಗ್ಗೆ ಚರ್ಚೆ ಆಗಿಲ್ಲ: ಪಕ್ಷದಲ್ಲಿ ಬೇಕಾದಷ್ಟು ಜನ ಆಕಾಂಕ್ಷಿಗಳು ಇದ್ದಾರೆ. ನಾವು ಟಿಕೆಟ್ ಆಕಾಂಕ್ಷಿ ಅಲ್ಲ, ಕುಮಾರಸ್ವಾಮಿ ಟಾರ್ಗೆಟ್ ಮಾಡಿದ್ರೆ ಸಂತೋಷ. ಅವರಿಗೆ ಅಧಿಕಾರ ಕೊಟ್ಟಾಗ ಏನು ಮಾಡೋಕೆ ಆಗ್ತಿಲ್ಲ, ಅಧಿಕಾರ ಇಲ್ಲದೆ ಇರುವಾಗ ಸುಮ್ಮನೆ ಇರೋದಕ್ಕೆ ಆಗಲ್ಲ ಎಂದರು.