ಏಕಾತ್ಮ ಮಾನವತಾವಾದ ಸಿದ್ದಾಂತ ನೀಡಿದ ತತ್ವಜ್ಞಾನಿ ಪಂಡಿತ್ ದೀನ್ ದಯಾಳ್

Advertisement

ಬೆಂಗಳೂರು: ಏಕಾತ್ಮ ಮಾನವತಾವಾದ ಸಿದ್ದಾಂತ ನೀಡಿದ ತತ್ವಜ್ಞಾನಿ ಪಂಡಿತ್ ದೀನ್ ದಯಾಳ್ ಉಪಾದ್ಯಾಯರಿಗೆ ಕೋಟಿ ಕೋಟಿ ನಮನಗಳು ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿದ್ದಾರೆ, ಅವರು ಸಾಮಾಜಿಕ ಜಾಲತಾಣದಲ್ಲಿ ಪಂಡಿತ್ ದೀನ್ ದಯಾಳ್ ಅವರ ಕುರಿತು ಹಂಚಿಕೊಂಡಿರುವ ಸುದೀರ್ಘ ಪೋಸ್ಟ್‌ನಲ್ಲಿ “ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದ್ವಿತೀಯ ಸರಸಂಘಚಾಲಕರಾದ ಪರಮಪೂಜ್ಯ ಗುರೂಜಿ, ಪಂಡಿತ್ ದೀನದಯಾಳ್ ಉಪಾದ್ಯಾಯರನ್ನು ಜನಸಂಘದ ಕಾರ್ಯದರ್ಶಿಯಾಗಿ ಕಳಿಸಿಕೊಟ್ಟರು. ಜನಸಂಘಕ್ಕೆ ಕಳುಹಿಸಿಕೊಟ್ಟ ಎರಡು ವರ್ಷದ ನಂತರ ಗುರೂಜಿಯವರನ್ನು ಭೇಟಿಯಾದ ದೀನದಯಾಳರು “ದೇಶದಲ್ಲಿ ಈಗಿನ ರಾಜಕೀಯ ಬೆಳವಣಿಗೆಯನ್ನು ನೋಡಿದಾಗ, ಅದೇಕೊ ರಾಜಕೀಯ ಹಿಡಿಸುತ್ತಿಲ್ಲ” ಎಂದು ಹೇಳುತ್ತಾರೆ. ಅದಕ್ಕೆ ಗುರೂಜಿ ಹೇಳುತ್ತಾರೆ; “ರಾಜಕೀಯ ಕ್ಷೇತ್ರ ಯಾವತ್ತು ನಿನಗೆ ಹಿಡಿಸುತ್ತದೆಯೋ ಆಗ ನಿನ್ನನ್ನು ವಾಪಸ್‌ ಕರೆಸಿಕೊಳ್ಳುತ್ತೇನೆ. ನಿನಗೆ ಎಲ್ಲಿಯವರೆಗೆ ಅದು ಹಿಡಿಸುವುದಿಲ್ಲವೋ ಅಲ್ಲಿಯವರೆಗೆ ಅದನ್ನು ಶುದ್ಧೀಕರಿಸಲು ಪ್ರಯತ್ನ ಮಾಡಬೇಕು” ಎಂದರು.
ದೀನದಯಾಳರ ಆದರ್ಶ, ದೀನದಯಾಳರ ಪ್ರೇರಣೆ ಇಂದಿಗೂ ನಮ್ಮೆಲ್ಲರಿಗೆ ಸ್ಫೂರ್ತಿಯಾಗಿದೆ. ಜನಸಂಘ ಈಗ ಭಾರತೀಯ ಜನತಾ ಪಕ್ಷವಾಗಿ ಬದಲಾವಣೆ ಆಗಿದೆ. ಜನಸಂಘ ಹುಟ್ಟಿದಾಗ ಇದ್ದ ವಿಚಾರಧಾರೆಗಳನ್ನೇ ಇಟ್ಟುಕೊಂಡು
ಬಿಜೆಪಿ ಸಾಗುತ್ತಿರುವುದಕ್ಕೆ ದೀನದಯಾಳರು ಹಾಕಿಕೊಟ್ಟ ಮಾರ್ಗದರ್ಶಕ ಸೂತ್ರಗಳು ಕಾರಣ. ಏಕಾತ್ಮ ಮಾನವತಾವಾದ ಹಾಗೂ ಅಂತ್ಯೋದಯ ಪರಿಕಲ್ಪನೆಗಳು ಬಿಜೆಪಿಯ ಪ್ರಮುಖ ವಿಚಾರಧಾರೆ ಆಗಿವೆ. ಅಂತ್ಯೋದಯ ಸಿದ್ಧಾಂತವನ್ನು ಜಾರಿಗೆ ತರುವ ಅವಕಾಶ ಸಿಕ್ಕಾಗೆಲ್ಲ ಅವುಗಳ ಅನುಷ್ಠಾನ ಮಾಡುವ ಬದ್ಧತೆಯನ್ನು ಬಿಜೆಪಿ ಮಾಡಿದೆ. ಅಟಲ್ ಜಿ , ನರೇಂದ್ರ ಮೋದಿ ತಮ್ಮ ಸರಕಾರದ ಕಾರ್ಯಕ್ರಮಗಳಲ್ಲಿ “ಸಬ್ಕಾ ಸಾಥ್ ಸಬ್ಕಾ ವಿಕಾಸ್” ಎಂಬ ಮೂಲಮಂತ್ರದೊಂದಿಗೆ ಅಂತ್ಯೋದಯ ಕಾರ್ಯಾನುಷ್ಠಾನ ಮಾಡುತ್ತಿದೆ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡು, ಅಂತ್ಯೋದಯದ ಕಲ್ಪನೆ, ಏಕಾತ್ಮ ಮಾನವತಾವಾದ ಸಿದ್ದಾಂತ ನೀಡಿದ ತತ್ವಜ್ಞಾನಿ ಪಂಡಿತ್ ದೀನ್ ದಯಾಳ್ ಉಪಾದ್ಯಾಯರಿಗೆ ಕೋಟಿ ಕೋಟಿ ನಮನಗಳು ಎಂದಿದ್ದಾರೆ.