ಏಯ್‌, ಇರ್ರೀ ಮಂತ್ರಿಗಳೆ: ಸುಧಾಕರ್‌ ತರಾಟೆಗೆ ತೆಗೆದುಕೊಂಡ ಡಿ.ಕೆ. ಸುರೇಶ್‌

Advertisement

ರಾಮನಗರ: ಸುಸಜ್ಜಿತ ನೂತನ ಜಿಲ್ಲಾ ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿದ್ದ, ಡಾ.ಕೆ.ಸುಧಾಕರ್‌ ಮತ್ತು ಅಶ್ವಥ್‌ ನಾರಾಯಣ್‌ ಅವರನ್ನು ತಡೆದ ಡಾ.ಕೆ.ಸುರೇಶ್‌ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಪ್ರೋಟೋಕಾಲ್ ಸರಿಯಾಗಿ ಪಾಲಿಸಲು ಆಗುವುದಿಲ್ವ ಎಂದು ಸಚಿವ ಅಶ್ವಥ್ ನಾರಾಯಣ್‍ಗೆ ಸಂಸದ ಡಿ.ಕೆ. ಸುರೇಶ್ ತರಾಟೆ ತೆಗೆದುಕೊಂಡರು.
ಏಕವಚನದಲ್ಲೇ ವಾಗ್ದಾಳಿ ನಡೆಸಿದ ಡಿ.ಕೆ.ಸುರೇಶ್, ಯಾರ್ ರೀ ಅವನು ಡಿಸ್ಟ್ರಿಕ್ಟ್ ಕಮಿಷನರ್ ಏಯ್, ಇರ್ರೀ ಮಂತ್ರಿಗಳೇ. ನಿಂತ್ಕೊಳ್ರಿ.. ನಾನು ಒಬ್ಬ ರೆಪ್ರಸೆಂಟೇಟಿವ್. ನನಗೂ ಪ್ರೋಟೋಕಾಲ್ ಇದೆ. ನಿಮ್ಮೊಬ್ಬರಿಗೆ ಅಲ್ಲ. ನೀವೊಬ್ಬರು ಡಿಸ್ಟ್ರಿಕ್ಟ್ ಮಿನಿಸ್ಟರ್ ಆಗಿ, ಡಿಪ್ಯುಟಿ ಚೀಫ್ ಮಿನಿಸ್ಟರ್ ಆಗಿದ್ದವರಿಗೆ ಗೊತ್ತಾಗಲ್ವಾ? ಎಂದು ಕಿಡಿಕಾರಿದರು.
ಈ ವೇಳೆ ನಿಮ್ಮನ್ನ ಯಾರು ಬರಬೇಡ ಅಂದ್ರು? ಗಲಾಟೆ ಬೇಡ ಮಾತನಾಡೋಣ ಎಂದ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ್ ತಿಳಿಸಿದರು. ಈ ವೇಳೆ ಡಿಕೆ ಸುರೇಶ್ ಹಾಗೂ ಅಶ್ವಥ್ ನಾರಾಯಣ್ ವಾಕ್ಸಮರಕ್ಕೆ ಅಲ್ಲೇ ಇದ್ದ ಸಚಿವ ಸುಧಾಕರ್ ದಂಗಾದರು. 99.63 ಕೋಟಿ ರೂ. ವೆಚ್ಚದಲ್ಲಿ 500 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಇದರ ಕ್ರೇಡಿಟ್‌ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಮಾತಿನ ಚಕಮಕಿ ನಡೆಯಿತು.