ಏಷ್ಯನ್ ಗೇಮ್ಸ್ ಟೀಂ ಇಂಡಿಯಾದ ತಂಡದ ಜರ‍್ಸಿ ಅನಾವರಣ

Advertisement

ಬೆಂಗಳೂರು: ಸೆಪ್ಟೆಂಬರ್ ೨೩ರಿಂದ ಅಕ್ಟೋಬರ್ ೮ರ ವರೆಗೆ ೧೯ನೇ ಏಷ್ಯನ್ ಕ್ರೀಡಾಕೂಟ ಚೀನಾದ ಹಾಂಗ್‌ಝೌನಲ್ಲಿ ನಡೆಯಲಿದ್ದು, ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಈ ಬಾರಿಯ ಪಂದ್ಯಾವಳಿಯಲ್ಲಿ ಭಾರತದ ಕ್ರಿಕೆಟ್ ತಂಡ ಮೊದಲ ಬಾರಿ ಆಡುತ್ತಿದೆ.
ಋತುರಾಜ್ ಗಾಯಕ್ವಾಡ್ ನಾಯಕತ್ವದ ಟೀಮ್ ಇಂಡಿಯಾ ಚಿನ್ನದ ಬೇಟೆಗಾಗಿ ಸೆಣಸಾಡಲಿದೆ. ಸದ್ಯ ಈ ಟರ‍್ನಿಗೆ ಭಾರತ ತಂಡ ಜರ‍್ಸಿ ಬಿಡುಗಡೆಗೊಂಡಿದೆ. ‘ಇಂಡಿಯಾ’ ಎಂದು ಬರೆದಿರುವ ಜರ‍್ಸಿಯಲ್ಲಿ ನಾಯಕ ಗಾಯಕ್ವಾಡ್, ಸಿಕ್ಸರ್ ಕಿಂಗ್ ಖ್ಯಾತಿಯ ರಿಂಕು ಸಿಂಗ್, ಯಶಸ್ವಿ ಜೈಸ್ವಾಲ್ ಮಿಂಚಿದ್ದಾರೆ. ಸೋಮವಾರದಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಎಲ್ಲ ಆಟಗಾರರು ಅಭ್ಯಾಸದಲ್ಲಿ ತೊಡಗಿಕೊಳ್ಳಲಿದ್ದಾರೆ.
ಜಾಲತಾಣಗಳಲ್ಲಿ ಪ್ರತಿಕ್ರಿಯೆಗಳು
ಏಷ್ಯನ್ ಗೇಮ್ಸ್ಗೆ ಭಾರತ ಕ್ರಿಕೆಟ್ ತಂಡದ ಜರ‍್ಸಿಯನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ನಮ್ಮ ದೇಶ, ನಮ್ಮ ಬಣ್ಣ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ವಿಶ್ವಕಪ್ ಟೂರ್ನಿಗೂ ಇದೇ ಜರ‍್ಸಿಯಲ್ಲಿ ಭಾರತ ತಂಡ ಕಣಕ್ಕಿಳಿಯಲಿ ಎಂದು ಸಲಹೆ ನೀಡಿದ್ದಾರೆ.
ಏಷ್ಯನ್ ಗೇಮ್ಸ್ ನಲ್ಲಿ ಇಷ್ಟರವರೆಗೆ ಕೇವಲ ಎರಡು ಬಾರಿ ಕ್ರಿಕೆಟ್ ಸ್ಪರ್ಧೆ ನಡೆದಿದೆ. ೨೦೧೦ ರಲ್ಲಿ ಚೀನಾದ ಗ್ವಾಂಗಝೌ ಮತ್ತು ೨೦೧೪ರಲ್ಲಿ ದಕ್ಷಿಣ ಕೋರಿಯಾದ ಇಂಚಿಯಾನ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸ್ರ‍್ಧೆ ನಡೆದಿದ್ದು, ಇಲ್ಲಿ ಕ್ರಮವಾಗಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಚಿನ್ನದ ಪದಕ ಗೆದ್ದಿದ್ದವು. ಮಹಿಳೆಯರ ವಿಭಾಗದಲ್ಲಿ ಪಾಕಿಸ್ತಾನ ಎರಡೂ ಆವೃತ್ತಿಯಲ್ಲಿ ಚಿನ್ನ ಗೆದ್ದುಕೊಂಡತ್ತು.
ಏಷ್ಯನ್ ಗೇಮ್ಸ್ ಗೆ ಟೀಂ ಇಂಡಿಯಾ: ಋತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ರ‍್ಮಾ (ವಿ.ಕೀ), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮದ್, ರವಿ ಬಿಷ್ಣೋಯ್, ಆವೇಶ್ ಖಾನ್, ಅರ್ಷದೀಪ ಸಿಂಗ್, ಮುಖೇಶ್ ಕುಮಾರ್, ಶಿವಂ ಮಾವಿ, ಶಿವಂ ದುಬೆ, ಪ್ರಭಸಿಮ್ರಾನ್ ಸಿಂಗ್ (ವಿ.ಕೀ)