ಒಂದೇ ದಿನ ಆರು ಟಿಎಂಸಿ ನೀರು

Advertisement

ಹೊಸಪೇಟೆ: ಕಲ್ಯಾಣ ಕರ್ನಾಟಕದ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಮಂಗಳವಾರ ಕೂಡ ಹೆಚ್ಚಳವಾಗಿದ್ದು, ಒಂದೇ ದಿನ ಆರು ಟಿಎಂಸಿ ನೀರು ಸಂಗ್ರಹವಾಗಿದೆ.
ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯ ಪರಿಣಾಮ, ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಜಲಾಶಯದ ಒಳ ಹರಿವು ೭೨,೪೮೯ ಕ್ಯುಸೆಕ್ ಇದ್ದು, ಸದ್ಯ ಜಲಾಶಯದಲ್ಲಿ ೩೧.೬೫೮ ಟಿಎಂಸಿ ನೀರು ಸಂಗ್ರಹವಿದೆ. ಈ ಪ್ರಮಾಣದಲ್ಲಿ ಒಳಹರಿವು ಇದ್ದರೆ, ಆಗಷ್ಟು ೧೫ರ ವೇಳೆಗೆ ಜಲಾಶಯ ಭರ್ತಿಯಾಗಬಹುದು ಎಂದು ಅಂದಾಜಿಸಲಾಗಿದೆ. ತುಂಗಭದ್ರಾ ಜಲಾಶಯದ ಗರಿಷ್ಟ ಮಟ್ಟ: ೧೬೩೩ ಅಡಿಗಳು, ಇಂದಿನ ಮಟ್ಟ ೧೬೦೬.೭೮ ಅಡಿಗಳು, ಸಂಗ್ರಹ ಸಾಮರ್ಥ್ಯ ೩೧.೬೫೮ ಟಿಎಂಸಿ, ಒಳಹರಿವು ೭೨,೪೮೯ ಕ್ಯುಸೆಕ್ಸ್ ಇದೆ. ಹೊರ ಹರಿವು ೨೦೫ ಕ್ಯುಸೆಕ್ಸ್ ಇದೆ.