ಒಡನಾಡಿ ಸ್ಟಾನ್ಲಿ ಹೊಸ ಬಾಂಬ್

Advertisement

ಚಿತ್ರದುರ್ಗ: ಮುರುಘಾ ಶರಣರ ಮೇಲಿ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ಹಿಂದಕ್ಕೆ ಪಡೆಯುವಂತೆ ಸಂತ್ರಸ್ತೆಯನ್ನು ದೇವರ ಪೋಟೋ ಮುಂದೆ ನಿಲ್ಲಿಸಿ ಪ್ರಮಾಣ ಮಾಡಲಾಗಿದೆ. ಅಲ್ಲದೆ ಊಟದಲ್ಲಿ ವಿಷ ಹಾಕಿ ಅಥವಾ ನೇಣು ಹಾಕಿ ಸಾಯಿಸುವುದಾಗಿ ಬೆದರಿಕೆ ಹಾಕಲಾಗಿದೆ. ಇದರ ಹಿಂದೆ ಹಣದ ಆಮಿಷ ತೋರಿಸಲಾಗಿದೆ ಎಂದು ಮೈಸೂರಿನ ಒಡನಾಡಿ ಸಂಸ್ಥೆ ಸ್ಟಾನ್ಲಿ ಹೊಸ ಬಾಂಬ್ ಹಾಕಿದ್ದಾರೆ.
ಸಂತ್ರೆಸ್ತೆಯನ್ನು ಚಿತ್ರದುರ್ಗಕ್ಕೆ ಕರೆ ತಂದ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಫೋಕ್ಸೋ ಕೇಸ್‌ನಲ್ಲಿ ಆರೋಪಿ ತಮ್ಮ ಬೆಂಬಲಿಗರ ಮೂಲಕ ಸಂತ್ರಸ್ತ ಬಾಲಕಿಯನ್ನು ಅಸ್ಟಲ್ ಮಾಡುವ ಯತ್ನ ಮಾಡುತ್ತಿದ್ದಾರೆ. ಬಾಲಕಿಯನ್ನ ಕೊಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಮಗುವಿನ ಮೂಲಕ ಇದೆಲ್ಲವು ಬಯಲಿಗೆ ಬಂದಿದೆ. ಮೈಸೂರು ಮಕ್ಕಳ ಕಲ್ಯಾಣ ಸಮಿತಿ ಬಳಿ ಸವಿವರವಾಗಿ ಸಂತ್ರಸ್ತೆ ಎಲ್ಲವನ್ನ ಹೇಳಿದ್ದು. ಇದೊಂದು ಅಕ್ಷಮ್ಯ ಅಪರಾಧ. ಇದರಲ್ಲಿ ಒಂದು ಸಿಂಡಿಕೇಟ್ ಕೆಲಸ ಮಾಡಿದೆ, ಹಣಕಾಸು ಕೆಲಸ ಮಾಡಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಸಂತ್ರಸ್ತೆಯನ್ನು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ. ಅವರ ಚಿಕ್ಕಪ್ಪ ಹೊಡೆಯೋದು, ಬಡೆಯೋದು, ನೇಣು ಹಾಕುತ್ತೇನೆ ಎಂದಿದ್ದಾರೆ.
ಊಟದಲ್ಲಿ ವಿಷ ಕೊಟ್ಟು ಸಾಯಿಸುತ್ತೇನೆ ಎಂದು ಬೆದರಿಸಿದ್ದಾರೆ. ಮಗು ಇದರಿಂದ ರಾತ್ರೋ ರಾತ್ರಿ ಓಡಿ ಬಂದಿದೆ. ಅದೃಷ್ಟವಶಾತ್ ಮಗು ರಕ್ಷಣೆಗೆ ಒಳಪಟ್ಟಿದೆ. ಇದರ ಹಿಂದೆ ಬಹಳ ಪ್ರಬಲ ಕಾರಣ ಇದೆ ಎಂದು ಹೇಳಿದರು.
ಫೋಕ್ಸೋ ಅಪರಾಧ ಮುಚ್ಚಿ ಹಾಕಲು ಸಂಘಟಿತ ಪ್ರಯತ್ನ ಮಾಡಿದೆ. ಇದೊಂದು ಕಾನೂನು ಉಲ್ಲಂಘನೆ ಆಗಿದ್ದು ಇಲ್ಲಿ ನೋಡಬಹುದು. ಸಾಕ್ಷಿ ಹೇಳಬಾರದು. ವಿಮುಖ ಆಗಬೇಕು ಎಂದು ಹೇಳಿದ್ದಾರೆ. ದೇವರ ಮುಂದೆ ನಿಲ್ಲಿಸಿ ಪ್ರಮಾಣ ಮಾಡಿಸಿದ್ದಾರೆ ಎಂದು ಬಾಲಕಿ ಹೇಳಿದ್ದಾಳೆ.
ತಮ್ಮನ ಮೇಲೆ ಆಣೆ ಮಾಡಿಸಿ ಕೂಡಾ ವಿಡಿಯೋ ಮಾಡಿದ್ದಾರೆ. ಒಂದು ತಿಂಗಳ ಕಾಲ ಮೇಲೆ ಪ್ರವಾಸ ಕಳುಹಿಸಿದ್ದಾರೆ. ಖಾಸಗಿ ಅತಿಥಿಗೃಹದಲ್ಲಿ ಮಲಗಿಸಿ, ದೇವಸ್ಥಾನದಲ್ಲಿ ನಿಲ್ಲಿಸಿ ಪ್ರಮಾಣ ಮಾಡಿಸಿದ್ದಾರೆ. ಸರಿಯಾದ ತನಿಖೆ ಮೂಲಕ ಎಲ್ಲವೂ ಬಹಿರಂಗ ಆಗಬೇಕು. ಮುಖ್ಯವಾಗಿ ಪೊಲೀಸ್ ತನಿಖೆಯಿಂದ ಮಾತ್ರ ಸತ್ಯ ಹೊರ ಬರುತ್ತದೆ ಎಂದು ಸ್ಟಾನ್ಲಿ ಹೇಳಿದರು.