ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು!

Advertisement

ಒಡಿಶಾ : ಇತ್ತಿಚೆಗೆ ನಡೆದ ರೈಲು ದುರಂತದ ಬೆನ್ನಲ್ಲೇ ಇದೀಗ ಮತ್ತೊಂದು ರೈಲು ಹಳಿ ತಪ್ಪಿದೆ. ಈ ತ್ರಿವಳಿ ರೈಲು ದುರಂತದ ನಡುವೆ ಒಡಿಶಾದಲ್ಲಿ ಮತ್ತೊಂದು ಅವಘಡ ನಡೆದಿದೆ. ಒಡಿಶಾದ ಬರ್ಗಢ ಜಿಲ್ಲೆಯಲ್ಲಿ ರೈಲು ಹಳಿ ತಪ್ಪಿದ್ದು. ಗೂಡ್ಸ್‌ ರೈಲಿನ 5 ಬೋಗಿಗಳು ಹಳಿ ತಪ್ಪಿವೆ ಎಂದು ತಿಳಿದುಬಂದಿದೆ. ರೈಲ್ವೆ ಇಲಾಖೆಯ ಮಾಹಿತಿಯ ಪ್ರಕಾರ, ಇದು ಖಾಸಗಿ ರೈಲು ಹಳಿಯಾಗಿದ್ದು, ಇದು ಸಿಮೆಂಟ್‌ ಕಂಪನಿಯ ರೈಲು ಆಗಿದ್ದು, ಅವರದ್ದೇ ಪ್ರತ್ಯೆಕ ಹಳಿಯಾಗಿರುವದರಿಂದ, ಇತರೆ ರೈಲು ಸಂಚಾರಕ್ಕೆ ಯಾವುದೇ ತೊಂದರೆಯಾಗಲ್ಲ ಎಂದು ತಿಳಿದುಬಂದಿದೆ.