ಕಂದಾಯ ಸಚಿವನಾಗಿ ಮಾಡಿದ ಕೆಲಸ ಖುಷಿ ತಂದಿದೆ: ಕಂದಾಯ ಸಚಿವ ಆರ್.ಅಶೋಕ್

Advertisement

ಈ ಅವಧಿಯಲ್ಲಿ ಕಂದಾಯ ಸಚಿವನಾಗಿ ಮಾಡಿದ ಸೇವೆ ಖುಷಿ ತಂದಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದ್ದಾರೆ. ಇಂದು ಕಲಾದಗಿ ಗ್ರಾಮದ ಕಲ್ಲೊಳೆಪ್ಪ ಮಾದರ (ಕೆರಿಯಲ್ಲಿ) ರವರ ಮನೆಯಲ್ಲಿ ಬೆಳಗಿನ ಉಪಹಾರ ಸೇವಿಸಿದ ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಕಲಾದಗಿ ಗ್ರಾಮ ವಾಸ್ತವ್ಯ ಹೆಗನ್ನಿಸಿತು ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಇದೊಂದು ಅಪರೂಪದ ಕ್ಷಣ ಹಳ್ಳಿಗಳಲ್ಲಿ ಬಂದು ಜನರೊಂದಿಗೆ ಬೆರೆಯುವುದು ಜನಗಳಿಗೆ ಸರ್ಕಾರದ ಸವಲತ್ತುಗಳನ್ನು ಜನಗಳಿಗೆ ತಲುಪಿಸುವುದು ಬಹಳ ಸಂತೊಷ ನೀಡುವ ಕೆಲಸ. ಬರಿ ಉದ್ಘಟಾನೆ ಮಾಡಿ ಹೊದರೆ ಜನರ ಪ್ರೀತಿ ವಿಶ್ವಾಸ ಸಿಗಲ್ಲ.ಅವರೊಂದಿಗೆ ಇದ್ದಾಗ ಮಾತ್ರ ಸಿಗುತ್ತೆ ಎಂದರು. ಪ್ರತಿಯೊಬ್ಬ ರಾಜಕಾರಣಿ ‌ಕೂಡಾ ಈ ತರಹ ಕಾರ್ಯಕ್ರಮ ಮಾಡಿ ಜನರಿಗೆ ಹತ್ತಿರ ಆಗಬೇಕು.ನಮ್ಮನ್ನ ಆಯ್ಕೆ ಮಾಡಿದವರೊಂದಿಗೆ ನಾವು ಇದ್ದಿವಿ ಅನ್ನೊ ಭಾವನೆಯನ್ನ ಬೆಳೆಸಬೇಕು ಅದೆ ಗ್ರಾಮ ವಾಸ್ತವ್ಯ.
ಗ್ರಾಮ ವಾಸ್ತವ್ಯದ ಸವಿ ನೆನಪು ನನ್ನ ಜೀವನದಲ್ಲಿ ಸದಾ ಇರುತ್ತೆ. ಇದೊಂದು ಅಪರೂಪದ ಕ್ಷಣ ಎಂದು ಸಙತಸವನ್ನು ಹಂಚಿಕೊಂಡ ಅವರು ಯಾರೂಂತ ನನಗೆ ಗೊತ್ತಿಲ್ಲ ಅವರಿಗೆ ನಾನು ಯಾರು ಅಂತ ಅವರಿಗೆ ಗೊತ್ತಿಲ್ಲ. ನಾನು ಅವರ ಮನೆಗೆ ಬಂದಿದ್ದಿನಿ‌ ಅವರ ಮನೆಯಲ್ಲಿ ಊಟ ಮಾಡಿದಿನಿ. ಇವೆಲ್ಲ ನನ್ನ ಜೀವನದಲ್ಲಿ ಮರೆಯಲಾರದ ಘಟನೆ ಎಂದು ಹೇಳಿದರು.
ಕಂದಾಯ ಸಚಿವನಾಗಿ ಇಲಾಖೆಯಲ್ಲಿ ಅನೇಕ ಬದಲಾವಣೆ ತಂದಿದ್ದೆನೆ. 79/Ab ತೆಗೆದು ಎಲ್ಲರೂ ಅನ್ನದಾತರಾಗಲು ಅವಕಾಶಮಾಡಿಕೊಟ್ಟಿದ್ದೆನೆ, ಅನೇಕ ಕಂದಾಯ ದಾಖಲೆಗಳನ್ನು 60 ಲಕ್ಷ ಜನರ ಮನೆ ಬಾಗಿಲಿಗೆ ತಲುಪಿಸಿದ್ದೆನೆ ಇಂಥಹ ಅನೇಕ ಆತ್ಮತ್ರಪ್ತಿಯ ಕೆಲಸಗಳನ್ನ ಮಾಡಿದ್ದೆನೆ ಎಂದರು.