ಕರ್ಣಾಟಕ ಬ್ಯಾಂಕ್ ಮಹಾಪ್ರಬಂಧಕ ವಾದಿರಾಜ ಆತ್ಮಹತ್ಯೆಗೆ ಶರಣು

Advertisement

ಮಂಗಳೂರು: ಕರ್ಣಾಟಕ ಬ್ಯಾಂಕ್‌ನ ಮಹಾಪ್ರಬಂಧಕ, ಸಿಸಿಒ ವಾದಿರಾಜ ಕೆ.ಎ.(೫೧) ಮಂಗಳೂರಿನ ಬೊಂದೇಲ್ ಚರ್ಚ್ ಬಳಿಯ ತನ್ನ ವಸತಿ ಸಮುಚ್ಛಯದಲ್ಲಿ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇಂದು ಬೆಳಿಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಾಕುವಿನಿಂದ ಹೊಟ್ಟೆ ಮತ್ತು ಕೊರಳಿಗೆ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊರಗಡೆ ಹೋಗಿದ್ದ ಮನೆಮಂದಿ ಮರಳಿ ಬಂದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಾದಿರಾಜ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ. ಮಕ್ಕಳು ಕಾಲೇಜಿಗೆ ತೆರಳಿದ್ದು ಪತ್ನಿ ಮನೆಯಲ್ಲಿಲ್ಲದ ವೇಳೆ ಆತ್ಮಹತ್ಯೆಗೈದಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಅವರು ಪತ್ನಿ, ಇಬ್ಬರು ಪುತ್ರರನ್ನು ಆಗಲಿದ್ದಾರೆ.
ಕಾರ್ಕಳ ಮೂಲದವರಾಗಿರುವ ವಾದಿರಾಜ್‌ರವರು ಕರ್ಣಾಟಕ ಬ್ಯಾಂಕ್‌ಗೆ ಗುಮಾಸ್ತನಾಗಿ ಸೇರಿಕೊಂಡು ಸುಮಾರು ೩೩ ವರ್ಷಗಳ ಸುದೀರ್ಘ ಅವಧಿಗೆ ಕರ್ತವ್ಯ ಸಲ್ಲಿಸಿದ್ದಾರೆ. ವಿವಿಧ ಹುದ್ದೆಗಳನ್ನು ನಿರ್ವಹಿಸಿ ಮಹಾಪ್ರಬಂಧಕ, ಚೀಫ್ ಕಾಂಪ್ಲೆಯೆನ್ಸ್ ಆಫಿಸರ್ (ಸಿಸಿಒ) ಆಗಿದ್ದರು. ಅವರ ನಿಧನಕ್ಕೆ ಕರ್ಣಾಟಕ ಬ್ಯಾಂಕ್ ಬಳಗ ಕಂಬನಿ ಮಿಡಿದಿದೆ.