ಕರ್ತವ್ಯ ಲೋಪ: ನಾಲ್ವರು ಅಮಾನತು

ಅಮಾನತು
Advertisement

ಕೊಪ್ಪಳ: ಹುಲಿಹೈದರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಆರೋಪದ ಮೇಲೆ ಪಿಐ, ಎಎಸ್ಐ ಹಾಗೂ ಇಬ್ಬರು ಎಚ್‌ಸಿ ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ಮಾಹಿತಿ ನೀಡಿದ್ದಾರೆ.
ಈ ಗಲಭೆಯೂ ಪೊಲೀಸರ ಮುಂದೆಯೇ ನಡೆದಿದ್ದು, ಎರಡು ಕೊಲೆಗಳಾಗಿದ್ದವು. ಪೊಲೀಸರಿದ್ದರೂ ಕೊಲೆ ನಡೆದಿರುವುದರಿಂದ ಕರ್ತವ್ಯ ಲೋಪದ ಆರೋಪ ದೂರುಗಳು ಪೊಲೀಸರ ವಿರುದ್ಧ ಬಂದಿದ್ದವು. ಹೀಗಾಗಿ‌‌‌ ವಿಚಾರಣೆ ನಡೆಸಲಾಯಿತು.
ಕನಕಗಿರಿ ಪೋಲಿಸ್ ಇನ್ಸ್‌ಪೆಕ್ಟರ್ ಪರಸಪ್ಪ ಭಜಂತ್ರಿ, ಎಎಸ್ಐ ಮಂಜುನಾಥ ಹಾಗೂ ಮುಖ್ಯಪೇದೆಗಳಾದ ಹನುಮಂತಪ್ಪ, ಸಂಗಪ್ಪ ನಿರ್ಲಕ್ಷ್ಯ ವಹಿಸಿದ್ದು, ಈ ಕುರಿತು ದೂರುಗಳು ಬಂದಿದ್ದವು. ಇದರಿಂದಾಗಿ ಗಂಗಾವತಿ ಡಿವೈಎಸ್ಪಿ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿತ್ತು.
ವಿಚಾರಣಾಧಿಕಾರಿಯ ಶಿಫಾರಸ್ಸಿನ ಆಧಾರದಲ್ಲಿ ಪಿಐ ಪರಸಪ್ಪ ಭಜಂತ್ರಿಯನ್ನು ಬಳ್ಳಾರಿ ವಿಭಾಗದ ಐಜಿ ಅಮಾನತು ಮಾಡಿದ್ದಾರೆ‌. ಅಲ್ಲದೇ ಓರ್ವ ಎಎಸ್‌ಐ ಮತ್ತು ಇಬ್ಬರು ಮುಖ್ಯಪೇದೆಗಳನ್ನು ಎಸ್ಪಿ ಅಮಾನತು ಮಾಡಿ, ಆದೇಶ ಹೊರಡಿಸಿದ್ದಾರೆ.

ಅಮಾನತು