ಕಳಪೆ ಕಾಮಗಾರಿ: ಇಬ್ಬರ ಅಮಾನತು

ಅಮಾನತು
Advertisement

ಕುಷ್ಟಗಿ: ತಾಲೂಕಿನಲ್ಲಿ 2020-2021 ನೇ ಸಾಲಿನಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಲ್ಲಿ ಮಂಜೂರಾಗಿರುವ ಒಟ್ಟು 173 ಕಾಮಾರಿಗಳನ್ನು ನಿಗದಿತ ಕಾಲಮಿತಿಯೊಳಗೆ, ಮುಕ್ತಾಯಗೊಳಿಸುವಂತೆ ಸೂಚಿಸಿದ್ದರು. ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ಅನುಷ್ಠಾನಗೊಳಿಸಲು ವಿಫಲರಾಗಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಪ್ರಭಾರಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿಲಾಸ ಭೋಸ್ಲೆ,ವಿಭಾಗ ಕೊಪ್ಪಳ ವಿಭಾಗದ ಬಸನಗೌಡ ಅವರನ್ನು ತಕ್ಷಣದಿಂದ ಅಂದರೆ ಮಾ.೩೧ ರಂದು ಸೇವೆಯಿಂದ ಅಮನತ್ತುಗೊಳಿಸಿ ಜಿಲ್ಲಾ ಪಂಚಾಯಿತಿ ಕೆಲವು ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆ ಆದೇಶ ಹೊರಡಿಸಿದ್ದಾರೆ.

ಪ್ರಸ್ತಾವನೆಯನ್ನು ಸರ್ಕಾರದ ಹಂತದಲ್ಲಿ ಪರಿಶೀಲನೆ ಮಾಡಿ ಆದೇಶದಲ್ಲಿ ಮೇಲಿನ ಇಬ್ಬರು ಅಧಿಕಾರಿಗಳಿಂದ ವಿರುದ್ಧ ಗಂಭೀರ ಸ್ವರೂಪದ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವದರಿಂದ ವಿರುದ್ಧ ಇಲಾಖೆ ವಿಚಾರಣೆಯನ್ನು ಕೈಗೊಳ್ಳುವುದನ್ನು ಕೈಗೊಳ್ಳುವುದನ್ನು ಬಾಕಿ ಇಟ್ಟು ಸೇವೆಯಿಂದ ಅಮನತ್ತುಗೊಳಿಸಿ ಆದೇಶಿಸಿರುತ್ತಾರೆ. ಕಾರ್ಯನಿರ್ವಾಹಕ ಅಭಿಯಂತರ ಬಸನಗೌಡ ಮೇಟಪಾಟೀಲ್‌, ವಿಲಾಸ ಇವರುಗಳನ್ನು ಪ್ರಸ್ತುತ ನಿರ್ವಹಿಸುತ್ತಿರುವ ಹುದ್ದೆಗಳ ಕರ್ತವ್ಯದಿಂದ ಮಾ. 31 ರಂದು ಪೂರ್ವಾಹ ಅಪರಾಹ್ನ ಬಿಡುಗಡೆಗೊಳಿಸಿ ಆದೇಶಿಸಲಾಗಿದೆ.
ಲೋಪದೋಷ: ಕಾಮಗಾರಿಗಳ ಅನುಷ್ಠಾನದ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಲು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದರ ಮೇರೆಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ 11 ತಂಡಗಳನ್ನು ರಚಿಸಿ ಕಾಮಗಾರಿಗಳ ತಪಾಸಣೆ ನಡೆಸಿ ತನಿಖಾ ವರದಿಯನ್ನು ಸಲ್ಲಿಸಲು ಆದೇಶಿಸಿದ್ದು, ಅದರಂತ ತನಿಖಾಧಿಕಾರಿಗಳು ಸ್ಥಳ ಪರಿಶೀಲನ ಸಲ್ಲಿಸಿರುವ ವರದಿಯಲ್ಲಿ 14 ಕಾಮಗಾರಿಗಳ ಗುಣಮಟ್ಟ ತೃಪ್ತಿಕರವಾಗಿರುವುದಿಲ್ಲ.ಕೆಲವು ಕಾಮಗಾರಿಗಳಲ್ಲಿ ಶೇ.90 ರಷ್ಟು ನಲ್ಲಿಗಳನ್ನು ಅಳವಡಿಸಲಾಗಿದೆ. ಆದರೆ ನೀರು ಸರಬರಾಜು ಸಂಪೂರ್ಣವಾಗಿರುವುದಿಲ್ಲ ಆದೇಶ ಪ್ರತಿಯಿಂದ ತಿಳಿದು ಬಂದಿದೆ. ಕೆಲವು ಗ್ರಾಮಗಳಲ್ಲಿ ಶೇ.50 ರಷ್ಟು ಮನೆಗಳಿಗೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಲಾಗಿದ್ದು ಇನ್ನೂ ಕೆಲವು ಪ್ಲಾಸ್ಟಿಕ್ ಪೈಪ್ ಬಳಸಿದ್ದು ಗುಣಮಟ್ಟದ್ದಾಗಿರುವುದಿಲ್ಲ. ಕಾಮಗಾರಿಗಳ ನೀರು ಸರಬರಾಜು ಪೈಪುಗಳಲ್ಲಿ ಸೋರಿಕೆ ಇದ್ದು, ಸಿ.ಸಿ.ರಸ್ತೆ ರೆಸ್ಟೋರೇಷನ ಸರಿಯಾಗಿರಿವದಿಲ್ಲ. ಬಹಳಷ್ಟು ಕಾಮಗಾರಿಗಳಲ್ಲಿ, ಮೀಟರ್ ಅಳವಡಿಸುವುದು ಬಾಕಿ ಇರುತ್ತದೆ. ಕಾಮಗಾರಿಗಳು ಪೂರ್ಣಗೊಂಡಿದ್ದರೂ ಸಹ ಸೋರಿಕೆಯ ಕಾರಣದಿಂದಾಗಿ ನೀರು ಸರಬರಾಜು ಆಗುತ್ತಿಲ್ಲ.
ಕುಡಿಯುವ ನೀರು ಅಳವಡಿಕೆ, ಪೈಪುಗಳ ಆಳ ಬಹಳನ್ನು ಕಡೆ ಒಂದರಿಂದ ಎರಡು ಅಡಿ ಮಾತ್ರ ಇರುತ್ತದೆ.ಜಲೋತ್ಸವ ಲೋಗೋ ಬಹಳಷ್ಟು ಕಡೆ ಅಳವಡಿಸಿರುವುದಿಲ್ಲ. ಕಾಮಗಾರಿಗಳಗೆ ಸಂಬಂಧಿಸಿದಂತೆ ಹಾಲಿ ಇರುವ ಓವರ್ ಹೆಡ್ ಟ್ಯಾಂಕ್ ಶಿಥಿಲಾವಸ್ತೆಯಲ್ಲಿರುವುದರಿಂದ ಕೆಲವು ಕಡೆ ಕಾಮಗಾರಿಗಳು ಪ್ರಾರಂಭವಾಗಿರುವುದಿಲ್ಲ. ಹಾಗೂ ಬಹಳಷ್ಟು ಕಾಮಗಾರಿಗಳಲ್ಲಿ ನೀರು ಸೋರಿಕೆಯಾಗುತ್ತಿದ್ದು, ಸ್ಯಾಂಡ್ ಪೋಸ್ಟ್ ಗಳು ಮುರಿದು ಹೋಗಿರುತ್ತವೆ ಈ ಎಲ್ಲಾ
ಪ್ರಮುಖ ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ವಿಲಾಸ್ ಮತ್ತು ಬಸನಗೌಡ ಅವರನ್ನು ಅಮಾನತ್ತು ಮಾಡಿದ್ದಾರೆ.