ಕಾಂಗ್ರೆಸ್ ಪ್ರಣಾಳಿಕೆ‌ ಸುಟ್ಟ ಈಶ್ವರಪ್ಪ

Advertisement

ಕಲಬುರಗಿ: ಬಜರಂಗ್ ದಳ ಬ್ಯಾನ್ ಮಾಡ್ತೇವೆ ಎಂಬ ಪ್ರಣಾಳಿಕೆ ಬಿಡುಗಡೆ ಹಿನ್ನಲೆಯಲ್ಲಿ ದೇಶ ದ್ರೋಹಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಎಂದು ಟೀಕಿಸಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಕಾಂಗ್ರೆಸ್ ಪ್ರಣಾಳಿಕೆಗೆ ಬೆಂಕಿ ಇಟ್ಟು ಸುಟ್ಟು ಆಕ್ರೋಶ ವ್ಯಕ್ತ ಪಡಿಸಿದರು.
ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಪ್ರತಿಯನ್ನು ಸುಟ್ಟು ಹಾಕುವ ಮೂಲಕ‌ ಕಾಂಗ್ರೆಸ್ ಧರ್ಮವಿರೋಧಿ ಧೋರಣೆಯನ್ನು ಖಂಡಿಸಿದರು. ಭಜರಂಗದಳ ಬ್ಯಾನ್ ಮಾಡ್ತಿವಿ ಅಂದಿದ್ದಕ್ಕೆ ಹಿಂದೂಗಳಿಗೆ ನೋವಾಗಿದೆ ಎಂದು ಹರಿಹಾಯ್ದ‌ ಅವರು, ಕಾಂಗ್ರೆಸ್‌ನ ಮನಸ್ಥಿತಿ ರಾಜ್ಯದ ಜನರಿಗೆ ಗೋತ್ತಾಗಿದೆ, ಎಲ್ಲ ಮುಸ್ಲಿಂಮರು ಒಂದೆ ಥರ ಅಲ್ಲ. ಕೆಲ ಮುಸ್ಲಿಂರು ಕಾಂಗ್ರೆಸ್‌ನ ವಿರುದ್ಧವಾಗಿದ್ದಾರೆ ಎಂದರು. ಇದು ಮುಸ್ಲಿಂ ಲಿಗ್‌ನ ಪ್ರಣಾಳಿಕೆ, ಮಹ್ಮದ್ ಅಲಿ ಜಿನ್ನಾನ ಪ್ರಣಾಳಿಕೆಯಾಗಿದೆ ಎಂದು‌ ಟೀಕಿಸಿದರು.
ಭಜರಂಗದಳ ಬ್ಯಾನ್ ಮಾಡಿ ಮುಸ್ಲಿಮರ ತುಷ್ಟಿಕರಣ ಮಾಡಲು ಕಾಂಗ್ರೆಸ್‌ ಹೊರಟಿದೆ. ಆದರೆ ಕಾಂಗ್ರೆಸ್ ಪ್ರಯತ್ನ ವಿಫಲವಾಗುತ್ತದೆ ಎಂದು ನುಡಿದರು. ಎಲ್ಲಾ ರಾಷ್ಟ್ರಭಕ್ತ ನಾಗರಿಕರು ರಾಷ್ಟ್ರದ್ರೋಹಿ ಪ್ರಣಾಳಿಕೆ ಬಹಿಷ್ಕರಿಸಲು ಮನವಿ ಮಾಡಿದರು.
ಹನುಮನ ಬಾಲಕ್ಕೆ ಬೆಂಕಿ ಕೊಟ್ಟ ರಾವಣ ನಾಶವಾಗಿದ್ದಾನೆ. ಹನುಮನ ತಂಟೆಗೆ ಬಂದಿರುವ ಕಾಂಗ್ರೆಸ್ ವಿರೋಧ ಪಕ್ಷ ಸ್ಥಾನವು ಕಳೆದುಕೊಳ್ಳುತ್ತದೆ ಎಂದರು.
ಧರ್ಮ ರಕ್ಷಣೆ ಮಾಡುವ ಸಂಘಟನೆ ನಿಷೇಧ ಮಾಡುವ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಬಜರಂಗ ದಳ‌ ನಿಷೇಧ ವಿರೋಧಿಸುವ ರಾಷ್ಟ್ರ ಭಕ್ತ ಮುಸ್ಲಿಂರು ಇದ್ದಾರೆ: ರಾಷ್ಟ್ರದ್ರೋಹ ಸಂಘಟನೆಗೆ ಅವಕಾಶ ನೀಡುತ್ತೇವೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಸ್ಲಿಂರ ಮತ ಪಡೆಯುವ ಹುನ್ನಾರ ಮಾಡುತ್ತಿದೆ. ಪ್ರಜ್ಞಾವಂತ ಮತದಾರರು ಕಾಂಗ್ರಸ್‌ನ ನಾಟಕಕ್ಕೆ ಮೋಸ ಹೋಗುವುದಿಲ್ಲ. ಧರ್ಮ, ದೇಶ ರಕ್ಷಣೆ ಮಾಡುವವರ ಪರವಾಗಿ ಬಿಜೆಪಿ ಕೆಲಸ‌ಮಾಡುತ್ತಿದೆ. ಕಾಂಗ್ರಸ್ ದೇಶದ್ರೋಹಿ‌ ಸಂಘಟನೆಗೆ ಬೆಂಬಲಿಸುವ ಪಕ್ಷವಾಗಿದೆ. ಕಾಂಗ್ರೆಸ್ ನಲ್ಲೂ‌ರಾಷ್ಟ್ರ ಭಕ್ತರು ಇದ್ದಾರೆ.‌ಅವರು ಕೂಡ ಕಾಂಗ್ರೆಸ್ ಪ್ರಣಾಳಿಕೆಯನ್ನು ವಿರೋಧಿಸುತ್ತಿದ್ದಾರೆ. ಹಿಂದುಳಿದ ವರ್ಗ, ದಲಿತರು ಜಾಗೃತರಾಗಬೇಕು ಎಂಬ ಉದ್ದೇಶದಿಂದ‌ ಸಂಗೋಳ್ಳಿ ರಾಯಣ್ಣ ಬಿಗ್ರೇಡ್ ಸ್ಥಾಪನೆ ಮಾಡ ಮಾಡಲಾಗಿತ್ತೇ ಹೊರತು ಬಿಜೆಪಿಗೆ ಮತ ಕೊಡಿ ಎಂದು ಎಲ್ಲೂ ಬಿಗ್ರೇಡ್ ಬಳಸಿಕೊಂಡಿಲ್ಲ ಎಂದರು. ಕೇವಲ ರಾಷ್ಟ್ರದ್ರೋಹಿ ಮುಸ್ಲಿಂರನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ. ಬಿಜೆಪಿ ಪಕ್ಷವು ರಾಷ್ಟ್ರವಾದಿ ಮುಸ್ಲಿಂರ ಪರವಾಗಿದೆ. ಎಐಸಿಸಿ ಅಧ್ಯಕ್ಷರಾಗಿ ಮೋದಿಯನ್ನು ವಿಷ ಸರ್ಪ ಎಂದು ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿ ನಾನು ನಿರ್ಧಾರಕೈಗೊಂಡಿರುವೆ. ಶೆಟ್ಟರು ಪಕ್ಷದ ತೀರ್ಮಾನ‌ ದಿಕ್ಕರಿಸಿದ್ದಾರೆ ಅವರು ಅನುಭವಿಸುತ್ತಾರೆ ಎಂದು‌ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಯಿಸಿದರು.