ಕಾಂಗ್ರೆಸ್ ಮುಖಂಡೆ, ಕಿರುತೆರೆ ನಟಿಯ ಭೀಕರ ಹತ್ಯೆ

Advertisement

ಮೈಸೂರು: ಪೋಷಕ ನಟಿ ಹಾಗೂ ಕಾಂಗ್ರೆಸ್‌ ಮುಖಂಡೆ ವಿದ್ಯಾ ನಂದೀಶ್‌ ಭೀಕರ ಕೊಲೆಯಾಗಿದೆ.
ನಟಿ ವಿದ್ಯಾ ನಂದೀಶ್ ಮೈಸೂರಿನ ಶ್ರೀರಾಮಪುರದಲ್ಲಿ ಪತಿ ಹಾಗೂ ಮಕ್ಕಳ ಜೊತೆ ನೆಲೆಸಿದ್ದರು. ಬನ್ನೂರಿನ ತುರಗನೂರಿನಲ್ಲಿ ಪತಿಯ ಮನೆಗೆ ಆಕೆ ತೆರಳಿದ್ದಾಗ ಗಲಾಟೆ ನಡೆದಿದೆ. ಇದು ವಿಕೋಪಕ್ಕೆ ಹೋಗಿ ವಿದ್ಯಾ ಹತ್ಯೆಯಲ್ಲಿ ಕೊನೆಯಾಗಿದೆ. ಈ ಕೊಲೆಗೆ ಅಸಲಿ ಕಾರಣ ಏನು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪತಿ ನಂದೀಶ್ ಹತ್ಯೆಗೈದು ಪರಾರಿಯಾಗಿದ್ದಾನೆ.
ವಿದ್ಯಾ ಮೈಸೂರಿನ ಶ್ರೀರಾಂಪುರ ನಿವಾಸಿ ವಿದ್ಯಾ ನಂದೀಶ್‌ರನ್ನು ವಿವಾಹವಾಗಿ ಎರಡು ಮಕ್ಕಳ ತಾಯಿ ಆಗಿದ್ದಾರೆ. ಕಾಂಗ್ರೆಸ್ ಪಕ್ಷದ ಮೈಸೂರು ನಗರ ಪ್ರಧಾನ ಕಾರ್ಯದರ್ಶಿಯಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಅಲ್ಲದೆ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಶಿವರಾಜ್‌ಕುಮಾರ್ ನಟನೆಯ ಸೂಪರ್‌ ಹಿಟ್‌ ಚಿತ್ರ ‘ಭಜರಂಗಿ’ಯಲ್ಲಿ ನಟಿಸಿದ್ದ ವಿದ್ಯಾ ನಂದೀಶ್, ಚಿರಂಜೀವಿ ಸರ್ಜಾ ನಟನೆಯ ‘ಅಜಿತ್’ ಚಿತ್ರದಲ್ಲಿ ವಿದ್ಯಾ ನಂದೀಶ್ ನಾಯಕನ ಸ್ನೇಹಿತೆಯ ಪಾತ್ರದಲ್ಲಿ ಮಿಂಚಿದ್ದರು. ಮಾತ್ರವಲ್ಲ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರವನ್ನು ನಿಭಾಯಿಸಿದ್ದರು. ಇದೀಗ ಕೌಟುಂಬಿಕ ಕಲಹದಿಂದಾಗಿ ನಟಿ ಹತ್ಯೆಯಾಗಿದ್ದಾರೆ. ದಂಪತಿ ನಡುವೆ ಸಾಮರಸ್ಯ ಇರಲಿಲ್ಲವೆಂದು ತಿಳಿದುಬಂದಿದೆ. ನಿನ್ನೆ ತಡರಾತ್ರಿಯಲ್ಲಿ ವಿದ್ಯಾ ಬನ್ನೂರಿನ ತುರಗನೂರಿನಲ್ಲಿದ್ದ ಪತಿ ಮನೆಗೆ ವಿದ್ಯಾ ತೆರಳಿದ್ದಾರೆ. ದಂಪತಿ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಪತ್ನಿ ತಲೆಯ ಮೇಲೆ ನಂದೀಶ್ ಹಲ್ಲೆ ನಡೆಸಿ ಹತ್ಯೆಗೈದು ಪರಾರಿಯಾಗಿದ್ದಾನೆ. ನಂದೀಶ್ ಸೆರೆಗೆ ಬನ್ನೂರು ಪೊಲೀಸರು ಬಲೆ ಬೀಸಿದ್ದಾರೆ.