ಕಾಂಗ್ರೆಸ್‌ ವಿಚಾರಗಳನ್ನೇ ಬಿಜೆಪಿ ಫಾಲೋ ಮಾಡುತ್ತಿದೆ

Advertisement

ಬೆಳಗಾವಿ: ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯದಲ್ಲಿ ಯಾರೊಬ್ಬರು ಪುಸ್ತಕ ಬರೆದ್ರೆ ಅದು ಇತಿಹಾಸ ಆಗಲು ಸಾಧ್ಯವಿಲ್ಲ. 200 ವರ್ಷಗಳ ಹಿಂದೆ ನಡೆದ ಘಟನೆಗಳಿವು. ಉರಿಗೌಡ, ನಂಜೇಗೌಡ ಸೃಷ್ಟಿಯಿಂದ ಒಕ್ಕಲಿಗ ಸಮುದಾಯಕ್ಕೆ ಅಪಮಾನ ಆಗಿದೆ. ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡ್ತಿರುವವರ ಮೇಲೆ ಕೇಸ್ ಹಾಕಬೇಕು ಎಂದರು. ಊರಿಗೌಡ, ನಂಜೇಗೌಡ ಸಿನಿಮಾ ಮಾಡುವ ನಿರ್ಧಾರದಿಂದ ಹಿಂದೆ ಸರಿದ ವಿಚಾರಕ್ಕೆ ಸಂಬಂಧಿಸಿ ಸಂಸದ ಡಿಕೆ‌ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ವಾಟ್ಸಪ್ ಯುನಿವರ್ಸಿಟಿ ಮೂಲಕ ಹೊಸ ಇತಿಹಾಸ ಸೃಷ್ಟಿ ಮಾಡುತ್ತಿದ್ದಾರೆ. ವ್ಯಾಪಾರಸ್ಥರು, ಯಾರನ್ನು ಬೇಕಾದರೂ ಇಟ್ಟುಕೊಂಡು ವ್ಯಾಪಾರ ಮಾಡ್ತಾರೆ. ಅಶ್ವಥ್ ನಾರಾಯಣ್ ಅವರು ಅಸ್ವಸ್ಥರಾದಾಗ ಉರಿಗೌಡ, ನಂಜೇಗೌಡ ಭೇಟಿ ಮಾಡಿದ್ರು ಅನಿಸುತ್ತೆ. ಬೇಸಾಯ, ಒಕ್ಕಲುತನ ಮಾಡಿ ಬದುಕು ಜನಾಂಗ ಒಕ್ಕಲಿಗರು. ಯಾರೋ ಹೇಳಿದ್ರು ಅಂತ ಕೈಬಿಟ್ಟಿದ್ದೇನೆ ಎನ್ನುವುದು ಗಿಮಿಕ್. ಅವರು ಗಿಮಿಕ್ ಮಾಡಿಕೊಂಡೆ ರಾಜಕಾರಣಕ್ಕೆ ಬಂದಿದದ್ದು ಎಂದು ಸಚಿವ ಮುನಿರತ್ನ ಹಾಗೂ ಅಶ್ವಥನಾರಾಯಣ್ ವಿರುದ್ಧ ಡಿಕೆ ಸುರೇಶ್ ವಾಗ್ದಾಳಿ ನಡೆಸಿದರು. ಸಿಎಂ ಬೊಮ್ಮಾಯಿ ನಮ್ಮ ಗ್ಯಾರಂಟಿ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ನಮ್ಮ ಗ್ಯಾರಂಟಿ ಬಗ್ಗೆ ಸಿಎಂ ಬೊಮ್ಮಾಯಿ ಟೀಕೆ ಮಾಡಲಿ ಪರವಾಗಿಲ್ಲ. ಬಿಜೆಪಿಯವರು ನಮ್ಮನ್ನು ಫಾಲೋ ಮಾಡುತ್ತಿದ್ದಾರೆ. ನಾವು ಮಹಿಳೆಯರಿಗೆ ಹೊಸ ಯೋಜನೆ ಘೋಷಣೆ ಮಾಡಿದ್ದೆವು. ನಮ್ಮನ್ನು ನೋಡಿ ಅವರು ಮಹಿಳೆಯರಿಗೆ ಯೋಜನೆ ಘೋಷಿಸಿದ್ರು ಎಂದಿದ್ದಾರೆ.

ಬೆಳಗಾವಿಯಲ್ಲಿ ರಾಹುಲ್ ಆಗಮನಕ್ಕೆ ಮುನ್ನ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ ಶಿವಕುಮಾರ ಸುದ್ದಿಗೋಷ್ಠಿ