ಕಾಂಗ್ರೆಸ್ ಸರ್ಕಾರ ಮಾಡಿದ ಪಾಪಕ್ಕೆ ಅಧಿಕೃತ ಮುದ್ರೆಗಾಗಿ ಸರ್ವ ಪಕ್ಷ ಸಭೆ

Advertisement

ಮಂಡ್ಯ : ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನೀರು ಹರಿಸಿ ಮಾಡಿರುವ ಪಾಪಕ್ಕೆ ಅಧಿಕೃತ ಮುದ್ರೆ ಒತ್ತಿಸಿಕೊಳ್ಳಲು ಸರ್ವ ಪಕ್ಷ ಸಭೆ ಕರೆದಿದೆ ಎಂದು ಬಿಜೆಪಿ ಪಕ್ಷದ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಈಗಾಗಲೇ ತಮಿಳುನಾಡಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿರುವ ಸರ್ಕಾರ ಯಾವ ಉದ್ದೇಶಕ್ಕಾಗಿ ಸಭೆ ಕರೆದಿದೆ, ನೀರು ಬಿಡುವ ಮುನ್ನ ಸರ್ವ ಪಕ್ಷದವರನ್ನ ಕೇಳಿದ್ದೀರಾ, ಸರ್ಕಾರದ ಏಕಪಕ್ಷಿಯ ನಿರ್ಧಾರವನ್ನು ಖಂಡಿಸಲಿದ್ದು, ಸರ್ಕಾರ ರೈತರಿಗೆ ಮಾಡಿದ ದ್ರೋಹ ಮತ್ತು ತಪ್ಪನ್ನು ಎತ್ತಿ ತೋರಿಸಲು ಬಿಜೆಪಿ ಪಕ್ಷ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಲು ತೀರ್ಮಾನಿಸಿದ ಎಂದು ಹೇಳಿದರು.
ಚುನಾವಣೆಗೂ ಮುನ್ನ ನಮ್ಮ ನೀರು ನಮ್ಮ ಹಕ್ಕು ಎಂದು ಮೇಕೆದಾಟು ಪಾದಯಾತ್ರೆ ನಡೆಸಿದ ಕಾಂಗ್ರೆಸ್ ನಾಯಕರು ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರೂಪಿಸಲಾಗಿರುವ ಸಂಕಷ್ಟ ಸೂತ್ರವನ್ನು ಮರೆತು ತಮಿಳುನಾಡಿಗೆ ನೀರು ಹರಿಸಿದೆ ಎಂದ ಅವರು ಕಾಂಗ್ರೆಸ್ ಸರ್ಕಾರ ಮಂಡ್ಯ ಜಿಲ್ಲಾ ರೈತರಿಗೆ ಶಾಪ ವಾಗಿದ್ದರೆ, ತಮಿಳುನಾಡಿಗೆ ವರವಾಗಿದೆ ಎಂದು ಹೇಳಿದರು.
ಕಾವೇರಿ ನದಿ ನೀರಿನ ಹಕ್ಕನ್ನು ತಮಿಳುನಾಡಿಗೆ ಬಿಟ್ಟುಕೊಟ್ಟಿರುವ ಕಾಂಗ್ರೆಸ್ ಸರ್ಕಾರ ಇಂಡಿಯಾ ಒಕ್ಕೂಟದ ರಾಜಕೀಯ ಲಾಭಕ್ಕಾಗಿ ಮುಖ್ಯಮಂತ್ರಿ ಸ್ಟಾಲಿನ್ ರನ್ನು ಓಲೈಸಲು ನೀರು ಬಿಡುಗಡೆ ಮಾಡಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷದ ಕಾಲ್ಗುಣ ನಾಡಿಗೆ ಬರಗಾಲ ತಂದಿದೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಬರಗಾಲ ಪರಿಸ್ಥಿತಿ ಎದುರಾಗುತ್ತಿದೆ. ದೇವರ ಮೇಲೆ ನಂಬಿಕೆ ಇಲ್ಲ,ಹಾಗಾಗಿ ದೇವರ ಕೃಪೆ ತೋರುತ್ತಿಲ್ಲ, ಇದರಿಂದ ರಾಜ್ಯದ ಜನತೆ ಹೈರಾಣು ಆಗುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಶಾಸಕರು ಪಕ್ಷ ತೊರೆಯುವ ಬಗ್ಗೆ ಯಾವ ಭಯ ಕಾಡುತ್ತಿದ್ದೀಯೊ ಗೊತ್ತಿಲ್ಲ,ಮರ್ಯಾದೆ ನೀಡಿ. ಪ್ರೀತಿಯಿಂದ ಕೂಗಿಲ್ಲ.ಅವರೇ ಹೇಳಿದಂತೆ ಅಲ್ಲಿಗೆ ಹೋದವರು ಲಾಸ್ಟ್ ಬೆಂಚ್ ನಲ್ಲಿರಬೇಕು. ಇಂತಹ ಸ್ಥಿತಿಯಲ್ಲಿ ಅಲ್ಲಿಗೆ ಹೋಗುತ್ತಿದ್ದಾರೆ ಎಂದರೆ ಯಾವ ಭಯ ಇರಬಹುದು ಎಂದರು.
ಬಿಜೆಪಿ ಪಕ್ಷ ಆಪರೇಷನ್ ಕಮಲ ಮಾಡಿದಾಗ ಭಿನ್ನ ಪರಿಸ್ಥಿತಿ ಇತ್ತು. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇರಲಿಲ್ಲ, ಅಲ್ಲದೆ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅದ್ವಾನದಿಂದ ಆ ಪಕ್ಷಗಳ ಶಾಸಕರು ಬಿಜೆಪಿ ಪಕ್ಷದತ್ತ ಮುಖ ಮಾಡಿದ್ದರೂ ಎಂದು ಆಪರೇಷನ್ ಕಮಲದ ಬಗ್ಗೆ ಸಮರ್ಥಿಸಿಕೊಂಡರು.
ಯಾವೊಬ್ಬ ಶಾಸಕರು ಬಿಜೆಪಿ ಪಕ್ಷ ತೊರೆಯುವುದಿಲ್ಲ.ಎಲ್ಲರನ್ನೂ ಸಂಪರ್ಕ ಸಿದ್ದು ಅದೆಲ್ಲಾ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ, ಎಂತಹಪರಿಸ್ಥಿತಿ ಬಂದರೂ ಬಿಜೆಪಿ ಹೆದರುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲಿ ಅದರ ಭ್ರಷ್ಟಾಚಾರ ಬಯಲಿಗೆ ಬಂದಿದೆ. ಸಚಿವರ ವಿರುದ್ಧ ಶಾಸಕರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು,ಇದರ ಬೆನ್ನೆಲ್ಲೆ ಶಾಸಕಾಂಗ ಸಭೆ ಕರೆಯಲಾಗಿತ್ತು,ಇದರ ಗಂಭೀರತೆ ಅಲ್ಲೇ ತೋರ್ಪಡಿಸಿತ್ತು, ಇದೀಗ ಪರಿಷತ್ತಿಗೆ ನಾಮನಿರ್ದೇಶನ ವಿಚಾರದಲ್ಲಿ ನಾಲ್ವರು ಸಚಿವರು ಕಾಂಗ್ರೆಸ್ ಹೈಕ ಮ್ಯಾಂಡ್ ಗೆ ಪತ್ರ ಬರೆದಿದ್ದಾರೆ. ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಇಂತಹ ಬೆಳವಣಿಗೆ ತಿಳಿಸುತ್ತಿದ್ದೇನೆ ಎಂದರು.
ಸರ್ಕಾರದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸುವ ಅವಶ್ಯಕತೆ ಕಂಡು ಬರುತ್ತಿಲ್ಲ,ಬದಲಾಗಿ ವಾಸ್ತವ ಚಿತ್ರಣ ಬಯಲಿಗೆ ಬರುತ್ತಿದ್ದು. ಹಲವು ಇಲಾಖೆಗಳಲ್ಲಿ ನೌಕರರಿಗೆ ಸಂಬಳ ಆಗಿಲ್ಲ. ಗೃಹ ಜ್ಯೋತಿ ಯೋಜನೆಯಿಂದ ಎಷ್ಟು ಜನಕ್ಕೆ ತೊಂದರೆಯಾಗಿದೆ. ಉದ್ದಿಮೆದಾರರ ಸಂಕಷ್ಟ ಏನು, ಸಣ್ಣ ಕೈಗಾರಿಕೆಗಳು ಏನಾಗುತ್ತಿವೆ ಅಷ್ಟೇ ಅಲ್ಲದೆ ಮಧ್ಯಮ ವರ್ಗದ ಜನತೆ ಯಾವ ರೀತಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದಲ್ಲ ಹೊರ ಜಗತ್ತಿಗೆ ಬಂದಿದೆ. ನೂತನ ಸರ್ಕಾರದ ಆರ್ಥಿಕ ಪರಿಸ್ಥಿತಿ ಮೂರು ತಿಂಗಳಲ್ಲೇ ಹೀನಾಯ ಮಾನವಾಗಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳಿಗೆ ಹಣ ಸರಿದೂಗಿಸಲು ಎಲ್ಲಾ ಇಲಾಖೆಗಳಲ್ಲಿ ಅನುದಾನ ಕಡಿತ ಮಾಡುತ್ತಿದ್ದು. ಮಧ್ಯ ಮಾರಾಟದಲ್ಲಿ ಶೇ 15 ರಷ್ಟು ಕುಸಿತ ಗೊಂಡಿದ್ದು. ಸರ್ಕಾರದ ಆದಾಯಕ್ಕೆ ಖೋತಾ ಬಿದ್ದಿದೆ ಕಾಂಗ್ರೆಸ್ ಸರ್ಕಾರದಲ್ಲಿ ಜನತೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಹೇಳಿದರು