ಕಾಂಗ್ರೆಸ್ ಸರ್ಕಾರ ರಚಿಸುವುದು ನಿಶ್ಚಿತ

ಸತೀಶ ಜಾರಕಿಹೊಳಿ
Advertisement

ಬೆಳಗಾವಿ: ನಾನು ಮುಂಚೆಯೇ 120 ಸೀಟು ಗೆಲ್ಲುತ್ತೇವೆ ಎಂದು ಹೇಳಿದ್ದೆ, 120ಕ್ಕೂ ಹೆಚ್ಚು ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, ಈ ಭಾರೀ ಕಾಂಗ್ರೆಸ್ ಸರ್ಕಾರ ರಚಿಸುವುದು ನಿಶ್ಚಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಭವಿಷ್ಯ ಹೇಳಿದರು.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಯಾರು ಆಗುತ್ತಾರೆ ಎನ್ನುವುದಕ್ಕಿಂತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದು ಮುಖ್ಯವಿದೆ. ಬಹುಮತ ಸಿಕ್ಕ ನಂತರ ಎಲ್ಲಾ ಶಾಸಕರು ಸೇರಿ ಸಿಎಂ ಆಯ್ಕೆ ಬಗ್ಗೆ ಚರ್ಚೆ ನಡಸಲಿದ್ದಾರೆ ಎಂದರು.
ಮೈತ್ರಿಗೆ ನಾವು ಸಿದ್ಧ ಎಂಬ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಒಳ್ಳೆಯ ಸರ್ಕಾರ ಆಡಳಿತ ಮಾಡಲು ಒಳ್ಳೆಯದಾಗುತ್ತದೆ. ದೇವೇಗೌಡರದ್ದು, ಕುಮಾರಸ್ವಾಮಿ ಸಲಹೆ ಇದ್ದರೆ ಒಳ್ಳೆಯದು. ಬಿಜೆಪಿಯವರು ಆಪರೇಷನ್ ಕಮಲ ಮಾಡುವುದು ಅವರ ಹಗಲುಗನಸಾಗಿದೆ. ಅತಂತ್ರ ಫಲಿತಾಂಶ ನೂರಕ್ಕೆ ನೂರರಷ್ಟು ಬರಲ್ಲ. ಪ್ರತೀ ಸಾರಿ ಆಪರೇಷನ್ ಕಮಲ ವರ್ಕೌಟ್ ಆಗಲ್ಲ ಎಂದರು.
ಬಿಜೆಪಿ ವಿರೋಧಿ ಅಲೆ, ಬೆಲೆ ಏರಿಕೆ, 4 ವರ್ಷದಿಂದ ಯಾವುದೇ ಅಭಿವೃದ್ಧಿ ಯೋಜನೆಗಳಿಲ್ಲ. ವಿಶೇಷವಾಗಿ 40 ಪರ್ಸೆಂಟ್ ಸರ್ಕಾರ ಇಡೀ ವಿಶ್ವದಲ್ಲೇ ಫೇಮಸ್ ಆಯ್ತು. ರಾಷ್ಟ್ರೀಯ ವಾಹಿನಿಗಳಲ್ಲೂ ಸಹ 40 ಪರ್ಸೆಂಟ್ ಸರ್ಕಾರ ಅಂತಾ ಹೇಳುತ್ತಾರೆ. ನಮ್ಮ ನಾಯಕರು ಕಲೆಕ್ಟೀವ್ ಆಗಿ ಪ್ರಚಾರ ಮಾಡಿದರು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಡಿಕೆಶಿ, ಸಿದ್ದರಾಮಯ್ಯ ಎಲ್ಲರೂ ತಮ್ಮ ತಮ್ಮ ಭಾಗದಲ್ಲಿ ಒಳ್ಳೆಯ ಪ್ರಚಾರ ಮಾಡಿದರು ಎಂದರು.