ಕಾಶ್ಮೀರ ಕಣಿವೆಯಲ್ಲಿ ಮತ್ತೆ ಬರ್ಬರ ಕೃತ್ಯ

ಸಂಪಾದಕೀಯ
Advertisement

ಕಾಶ್ಮೀರದ ಕಣಿವೆಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಡಿಜಿಪಿ ಕಗ್ಗೊಲೆ ಸಾಕ್ಷಿಯಾಗಿದೆ. ಅವರನ್ನು ಮನೆಯಲ್ಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದರ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಸೂಕ್ತ. ಕಾಶ್ಮೀರದ ಸಮಸ್ಯೆ ಇಂದು ನಿನ್ನೆಯದಲ್ಲ. ಸಾತಂತಪೂರ್ವದಿಂದಲೂ ಕಾಶ್ಮೀರ ಕಣಿವೆ ನೆಮ್ಮದಿಯ ಬದುಕನ್ನು ಕಂಡಿಲ್ಲ. ಇದಕ್ಕೆ ಪ್ರಮುಖ ಕಾರಣ ಹೊರ ದೇಶಗಳ ಕೈವಾಡ. ಅಲ್ಲದೆ ಸ್ಥಳೀಯರಲ್ಲಿ ಕೆಲವರು ವಿದ್ರೋಹಿ ಶಕ್ತಿಗಳೊಂದಿಗೆ ಕೈಜೋಡಿಸಿರುವುದೇ ಕಾರಣ. ಇದನ್ನು ತಪ್ಪಿಸಬೇಕು ಎಂದರೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸಬೇಕು. ಇದಕ್ಕೆ ಎಲ್ಲರಿಗೂ ಶಿಕ್ಷಣ ವ್ಯವಸ್ಥೆ ಆಗಬೇಕು. ಬಂದೂಕು ಹಿಡಿಯುವ ಯುವ ಪೀಳಿಗೆ ಕಂಪ್ಯೂಟರ ಹಿಡಿಯುವಂತಾಗಬೇಕು. ರಕ್ತದ ಹೊಳೆ ಹರಿಸಿದರೆ ಅದರಿಂದ ಪ್ರಯೋಜನ ಏನೂ ಆಗುವುದಿಲ್ಲ. ಹಿಂಸಾಚಾರದಿಂದ ಸಾಯುವುದು ಕಾಶ್ಮೀರಿಯೇ ಹೊರತು ಬೇರಾರೂ ಅಲ್ಲ. ಹಿಂಸೆಗೆ ಬಲಿಯಾಗುವುದು ಕಾಶ್ಮೀರಿ ಪೊಲೀಸ್, ಉಗ್ರವಾದಿ ಅಥವ ಅಮಾಯಕ ನಾಯಕರು. ಇದರಿಂದ ನಷ್ಟವಾಗುವುದು ಕಾಶ್ಮೀರಕ್ಕೆ. ಈಗ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ಮೇಲೆ ಕಾಶ್ಮೀರಿಗಳು ದೇಶದ ಮುಖ್ಯವಾಹಿನಿಯಲ್ಲಿ ಸೇರ್ಪಡೆಗೊಳ್ಳಲು ಮುಕ್ತ ಅವಕಾಶವಿದೆ. ಆರ್ಥಿಕವಾಗಿ ಸಾಮಾಜಿಕವಾಗಿ ಪ್ರಗತಿಯನ್ನು ಕಾಣಬಹುದು. ಕೇಂದ್ರ ಸರ್ಕಾರ ಸಾಕಷ್ಟು ಸವಲತ್ತು ಕಲ್ಪಿಸಿಕೊಟ್ಟಿದೆ. ಅದನ್ನು ಬಳಸಿಕೊಂಡು ಅಲ್ಲಿಯ ಯುವ ಪೀಳಿಗೆ ಹೊಸ ಬದುಕನ್ನು ಕಟ್ಟಿಕೊಳ್ಳಬಹುದು. ಇದರ ಬಗ್ಗೆ ಹೊಸ ಚಿಂತನೆ ನಡೆಯಬೇಕು. ಅಲ್ಲಿಯ ರಾಜಕಾರಣಿಗಳು ಹಳೆ ವೈಷಮ್ಯವನ್ನು ಮರೆತು ಸರ್ಕಾರದೊಂದಿಗೆ ಸಹಕರಿಸಿದರೆ ಮುಂದಿನ ಪೀಳಿಗೆಯ ಭವಿಷ್ಯವನ್ನು ಕಾಪಾಡಬಹುದು. ಹಿಂದೆ ಕಾಶ್ಮೀರಿ ಪಂಡಿತ ಮಾರಣಹೋಮ ನಡೆಯಿತು. ಆಗ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಕಾಶ್ಮೀರಿ ಪಂಡಿತರ ಕುಟುಂಬಗಳು ಬಂದು ನೆಲೆಸಿದವು. ಈಗ ಆ ಕುಟುಂಬಗಳು ಸ್ಥಳೀಯರೊಂದಿಗೆ ಬೆರೆತು ಹೋಗಿದ್ದಾರೆ. ಈ ರೀತಿ ಇತರರೂ ಭಾರತದ ಇದರ ಜನರೊಂದಿಗೆ ಬೆರೆಯಲು ಈಗ ಉತ್ತಮ ಅವಕಾಶ ವಿದೆ. ಬೇರೆ ದೇಶದವರೊಂದಿಗೆ ಸೇರಿದಂತೆ ಸಮಾಜ ಘಾತುಕಶಕ್ತಿಗಳೊಂದಿಗೆ ಕೈಜೋಡಿಸಿದರೆ ಪೊಲೀಸರು ಅಥವ ಸೇನೆಯವರ ಗುಂಡಿಗೆ ಬಲಿಯಾಗುವುದು ಖಂಡಿತ. ಆಗ ನಿಮ್ಮ ತಂದೆತಾಯಿ ಹೊರತುಪಡಿಸಿ ಯಾರೂ ಕಣ್ಣೀರು ಸುರಿಸುವುದಿಲ್ಲ. ಅದೇರೀತಿ ಉಗ್ರರೊಂದಿಗೆ ಹೋರಾಟ ಸಾವನ್ನಪ್ಪಿದ ಯೋಧನಿಗೆ ಆತನ ಗ್ರಾಮದಲ್ಲಿ ವಿರೋಚಿತ ಅಂತ್ಯಕ್ರಿಯೆ ನಡೆಯುತ್ತದೆ. ಆತನ ಕುಟುಂಬಗಳಿಗೆ ಸರ್ಕಾರದ ಆಶ್ರಯ ನಿರಂತರ ದೊರೆಯುತ್ತದೆ. ಇದೆಲ್ಲದರ ಬಗ್ಗೆ ಚಿಂತಿಸುವ ಶಕ್ತಿ ಬರಬೇಕು ಎಂದರೆ ನಮ್ಮ ಯುವಕರಿಗೆ ಸೂಕ್ತ ಶಿಕ್ಷಣ ನೀಡಬೇಕು. ದೇಶದ ಎಲ್ಲ ಜನರೊಂದಿಗೆ ಬೆರೆತು ಬದುಕಿದರೆ ಉತ್ತಮ ಸತಂತ ಜೀವನವನ್ನು ಕಾಣಬಹುದು. ಆದರೆ ಭಯೋತ್ಪಾದಕರೊಂದಿಗೆ ಸೇರಿದರೆ ಇಡೀ ಬದುಕು ಕತ್ತಲಲ್ಲೇ ಇರುತ್ತದೆ. ಕಾಶ್ಮೀರದಲ್ಲಿ ನಿಸರ್ಗ ಎಲ್ಲ ಕೊಡುಗೆಯನ್ನು ಉದಾರವಾಗಿ ನೀಡಿದೆ. ಅದನ್ನು ಬಳಸಿಕೊಂಡಲ್ಲಿ ಕಾಶ್ಮೀರದ ಪ್ರತಿಪ್ರಜೆ ನೆಮ್ಮದಿಯ ಬದುಕನ್ನು ಕಾಣಬಹುದು. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಬೇರೆ ದೇಶದವರಿಗೆ ಕಾಶ್ಮೀರದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಬಾರದು. ಅದಕ್ಕಾಗಿ ಅವರು ಕೋಟ್ಯಂತರ ರೂ. ವೆಚ್ಚ ಮಾಡಲು ಸಿದ್ಧರಾಗಿದ್ದಾರೆ. ಇದೆಲ್ಲ ಕುತಂತ್ರಗಳು ನಿಷ್ಫಲಗೊಳ್ಳಬೇಕು ಎಂದು ಸ್ಥಳೀಯ ಜನ ದೃಢ ಸಂಕಲ್ಪ ಮಾಡಬೇಕು. ಆಗ ಸರ್ಕಾರ ಭಯೋತ್ಪಾದಕರನ್ನು ಬಗ್ಗು ಬಡಿಯಲು ಸಾಧ್ಯವಾಗುತ್ತದೆ. ನಮ್ಮವರೇ ನಮ್ಮ ಪೊಲೀಸರು ಮತ್ತು ಸೇನೆಯ ವಿರುದ್ಧ ತಿರುಗಿ ಬಿಲ್ಲಿ ನಮ್ಮ ಮಕ್ಕಳ ಮೇಲೆ ನಮ್ಮವರು ಗುಂಡು ಹಾರಿಸಬೇಕಾದ ದಾರುಣ ಸ್ಥಿತಿ ಬರುತ್ತದೆ. ಇದನ್ನು ಕೂಡಲೇ ನಿಲ್ಲಿಸಬೇಕು. ಕಾಶ್ಮೀರ ಕಣಿವೆ ಹಿಂದೆ ಪ್ರೇಮಿಗಳ ಸರ್ಗವಾಗಿತ್ತು. ಆ ವೈಭವ ಮತ್ತೆ ಮರುಕಳಿಸಬೇಕು. ಹಿಂದೆ ದೇಶದ ಎಲ್ಲ ಭಾಗದ ಜನ ಕಾಶ್ಮೀರದ ಕಣಿವೆಯನ್ನು ಸರ್ಗ ಎಂದು ಪರಿಗಣಿಸಿರು. ಅಲ್ಲದೆ ಜೀವನದಲ್ಲಿ ಒಮ್ಮೆಯಾದರೂ ಅಲ್ಲಿಗೆ ಹೋಗಿ ಬರಬೇಕೆಂದು ನವ ದಂಪತಿ ಬಯಸುತ್ತಿದ್ದರು. ಈಗ ಅಲ್ಲಿಗೆ ಹೋಗಲು ಜನ ಹೆದರುವಂತಾಗಿದೆ. ಈ ಭಯದ ವಾತಾವರಣ ಹೋಗಿ ಸ್ನೇಹಪರ ಬದುಕು ಚಿಗುರೊಡೆಯಬೇಕು. ಆಗ ಕಾಶ್ಮೀರದ ಕಡೆ ಯಾವ ಸಮಾಜಘಾತುಕ ಶಕ್ತಿಗಳು ತಲೆ ಹಾಕುವುದಿಲ್ಲ. ಈ ವಿಷಯದಲ್ಲಿ ಎಲ್ಲ ಭಾರತೀಯರು ಒಕ್ಕೊರಲಿನಿಂದ ಏಕೀಕೃತ ಭಾರತದ ಬಗ್ಗೆ ಧನಿ ಎತ್ತುವುದು ಅಗತ್ಯ. ಇದರಲ್ಲಿ ರಾಜಕೀಯ ತರಬಾರದು. ದೇಶದ ಸಮಗ್ರತೆ ಮತ್ತು ಏಕತೆಯನ್ನು ಕಾಪಾಡುವ ಪ್ರಶ್ನೆ ಬಂದಾಗ ನಮ್ಮ ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಮರೆಯಬೇಕು. ಈ ವಿಷಯದಲ್ಲಿ ಹಿಂದೆ ನಮ್ಮ ನಾಯಕರು ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಎಂಬ ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡುತ್ತಿರು. ಇತ್ತೀಚೆಗೆ ಆಡಳಿತ- ಪ್ರತಿಪಕ್ಷಗಳು ವಿಭಿನ್ನ ರಾಗ ಹೊಂದುತ್ತಿರುವುದು ಸರಿಯಾದ ಕ್ರಮವಲ್ಲ. ವಿರೋಧಕ್ಕಾಗಿ ವಿರೋಧ ಎಂಬ ಭಾವನೆ ಸರಿಯಲ್ಲ. ಆಡಳಿತ ಪಕ್ಷ ಕೂಡ ಪ್ರತಿಪಕ್ಷಗಳನ್ನು ವಿಶಾಸಕ್ಕೆ ತೆಗೆದುಕೊಳ್ಳುವ ಕ್ರಮ ಕೈಗೊಳ್ಳಬೇಕು. ತಾನು ಮಾಡಿದ್ದೆ ಸರಿ ಎಂಬ ಒಣ ಪ್ರತಿಷ್ಠೆ ಸರಿಯಲ್ಲ. ಅದೇರೀತಿ ಪ್ರತಿಪಕ್ಷಗಳು ಕೂಡ ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು ಸರ್ಕಾರದೊಂದಿಗೆ ಕೈಜೋಡಿಸುವುದು ಅಗತ್ಯ. ಈ ವಿಷಯದಲ್ಲಿ ರಾಜಕೀಯಕ್ಕೆ ಕಾಲಿಡುತ್ತಿರುವ ಯುವ ಪೀಳಿಗೆ ಹೊಸ ಚಿಂತನೆಗಳಿಗೆ ತೆರೆದುಕೊಳ್ಳುವುದು ಅಗತ್ಯ. ಅದರಲ್ಲೂ ಕಾಶ್ಮೀರದ ಜನಪ್ರತಿನಿಧಿಗಳ ಮೇಲೆ ಗುರುತರ ಜವಾಬ್ದಾರಿ ಇದೆ. ಜನಸಾಮಾನ್ಯರ ರಕ್ಷಣೆಗೆ ಆದ್ಯತೆ ನೀಡಬೇಕು ಎಂದರೆ ಜನವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸುವುದನ್ನು ಬಿಡಬೇಕು. ಪ್ರಜಾಪ್ರಭುತದ ಹೆಸರಿನಲ್ಲಿ ಜನ ವಿರೋಧಿ ಕೃತ್ಯಗಳಿಗೆ ಉತ್ತೇಜನ ನೀಡಬಾರದು.