ಕಾಸರಗೋಡಿ ನಟಿ ಸನ್ನಿಲಿಯೋನ್ ಮುಗಿಬಿದ್ದ ಜನತೆ

Advertisement

ಕಾಸರಗೋಡು: ಮಾದಕ ನಟಿ ಸನ್ನಿ ಲಿಯೋನ್ ಚಿತ್ರವೊಂದರ ಚಿತ್ರೀಕರಣಕ್ಕಾಗಿ ಕಾಸರಗೋಡಿನಲ್ಲಿ ಬೀಡು ಬಿಟ್ಟಿದ್ದಾರೆ. ನಟಿಯನ್ನು ನೋಡಲು ಜನ ಮುಗಿ ಬಿದ್ದಿದ್ದಾರೆ
ನಟಿ ಕಾಸರಗೋಡಿನ ಶೇಣಿ ಎಂಬಲ್ಲಿ ಒಬ್ಬ ಆಟೋ ಡ್ರೈವರ್ ಬಳಿ ಬಂದು ಸ್ವಲ್ಪ ಹೊತ್ತು ಮಾತನಾಡಿ ಅಲ್ಲಿಂದ ಹೊರಟು ಹೋಗುತ್ತಾರೆ. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ನಟಿ ಈ ಹಿಂದೆ ಹಲವು ಸಲ ಶೂಟಿಂಗ್ ಭಾಗವಾಗಿ ಕೇರಳಕ್ಕೆ ಬಂದಿದ್ದಾರೆ. .
ರಾಷ್ಟ್ರ ಪ್ರಶಸ್ತಿ ವಿಜೇತ ಪಂಪಲ್ಲಿ ನಿರ್ದೇಶನದ ಮಲಯಾಳಂ ಚಿತ್ರದಲ್ಲಿ ಸನ್ನಿ ಲಿಯೋನ್ ನಟಿಸುತ್ತಿದ್ದಾರೆ. ಕಳೆದ ದಿನ ಚಿತ್ರದ ಪೂಜಾ ಕಾರ್ಯಕ್ರಮದ ವಿಡಿಯೋವನ್ನು ಸನ್ನಿ ಶೇರ್ ಮಾಡಿದ್ದರು.
ಈ ಹಿಂದೆ ಸನ್ನಿ ಲಿಯೋನ್ ಮಮ್ಮುಟ್ಟಿ ಅಭಿನಯದ ಮಧುರರಾಜ ಚಿತ್ರದ ಹಾಡಿನ ದೃಶ್ಯದಲ್ಲೂ ಕಾಣಿಸಿಕೊಂಡಿದ್ದರು. ಮಲಯಾಳಂನ ಪ್ಯಾನ್ ಇಂಡಿಯನ್ ಸುಂದರಿ ವೆಬ್ ಸರಣಿಯಲ್ಲಿಯೂ ಸನ್ನಿ ನಟಿಸಿದ್ದಾರೆ.