ಕುದ್ಮುಲ್ ರಂಗರಾವ್ ಕೊಡುಗೆ ಸ್ಮರಿಸಿದ: ಖರ್ಗೆ

Mallikarjun Karge
Advertisement

ಮಂಗಳೂರು: ಮಂಗಳೂರಿಗೆ ಹೊರವಲಯದ ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ರಾಜ್ಯಮಟ್ಟದ ಬೃಹತ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಗಾಂಧಿವಾದಿ ಕುದ್ಮುಲ್ ರಂಗರಾವ್‌ರವರು ಶೋಷಿತ ವರ್ಗಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದ್ದಾರೆ.
ಅಪ್ಪಟ ಗಾಂಧಿವಾದಿ ಕುದ್ಮುಲ್ ರಂಗರಾವ್ ಡಿಪ್ರೆಸ್ಡ್ ಕ್ಲಾಸ್ ಮಿಷನ್ ಆರಂಭಿಸಿ ಬಡವರಿಗೆ ಹಿಂದುಳಿದ ಅಸ್ಪೃಶ್ಯರಿರ ಜೀವನ ಸುಧಾರಣೆ ಮಾಡಿದ್ದರು. ಇಂದು ಮಂಗಳೂರಿನಲ್ಲಿ ಏನೇನೋ ನೋಡುತ್ತಿದ್ದೇವೆ ಈಗಿನ ಜನತೆ ಕುದ್ಮುಲ್‌ರವರ ನೆನಪಿಟ್ಟಿಲ್ಲ ಎಂದರು.
ಕಾಂಗ್ರೆಸ್ ಜಾರಿಗೆ ತಂದ ಭೂಸುಧಾರಣೆ ಮಸೂದೆಯಿಂದಾಗಿ ಮಂಗಳೂರಿನಲ್ಲಿ ಅತೀ ಹೆಚ್ಚು ಬಡವರು ಮಾಲಕರಾದರು. ಈಗ ಇದನ್ನು ಎಲ್ಲ ಮರೆತಿದ್ದಾರೆ. ಕೆಲವರು ಧರ್ಮದ ಅಜೆಂಡಾ ಹಿಡಿದು ಅಡ್ಡಾಡುತ್ತಿದ್ದಾರೆ. ಲಾಭ ಪಡೆದವರೇ ಮರೆತರೆ ಯಾರಿಗೆ ಹೇಳಬೇಕು. ಒಂದೊಂದು ತಾಲೂಕಿನಲ್ಲಿ ನಾಲ್ಕಾಲ್ಕು ಟ್ರಿಬ್ಯೂನಲ್ ಮಾಡಿ ಲಕ್ಷಾಂತರ ಎಕರೆ ಹಂಚಿದ್ದೇವೆ. ಈಗ ಇದರ ಲಾಭ ಪಡೆದವರು ಪತ್ತೆಯೇ ಇಲ್ಲ ನಮ್ಮನ್ನು ಮರೆತದ್ದು ಯಾವ ನ್ಯಾಯ ಎಂದು ಪ್ರಶ್ನಿಸಿ ಹೊಟ್ಟೆ ತುಂಬಿಸಲು ಆಹಾರ ಭದ್ರತಾ ಕಾಯ್ದೆ., ಕಡ್ಡಾಯ ಶಿಕ್ಷಣ ಕೊಟ್ಟೆವು ಎಲ್ಲವನ್ನೂ ಮರೆರತು ನಮಗೆ ಬೈಯುತ್ತಿದ್ದಾರೆ ಇದು ಯಾವ ನ್ಯಾಯ. ವಊಟ, ಭೂಮಿ, ಶಿಕ್ಷಣ ಎಲ್ಲದರಲ್ಲೂ ಲಾಭ ಮಾಡಿಕೊಟ್ಟೆವು ಆದರೂ ಮರೆತರು ಎಂದರು.
ಈಗ ನಮ್ಮನ್ನು ಒಡೆಸಿ, ಬಡವರನ್ನು ಒಡೆದು ಆಳುವವರು ಮೋದಿ. ಎಲ್ಲೆಡೆ ಮೋದಿ ಜೈಜೈಕಾರ ಕೇ:ಳುತ್ತಿದೆ. ಇದು ದುರ್ದೈವ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವ ತನ್ನ ಪ್ರಣಾಳಿಕೆಯನ್ನೇ ಬಿಜೆಪಿ ಮರೆತು ಜನತೆಯನ್ನು ವಂಚಿಸಿದೆ. ನಾವು ನುಡಿದಂತೆ ಗ್ಯಾರೆಂಟಿ ಈಡೇರಿಸಿ ಇಲ್ಲಿಗೆ ಬಂದಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್, ದೇಶದ ಅಭಿವೃದ್ಧಿ ಮಾಡಿದ್ದು ಕಾಂಗ್ರೆಸ್. ಮಂಗಳೂರಿನಲ್ಲಿ ಎನ್‌ಐಟಿಕೆ, ಎನ್‌ಎಂಪಿಟಿ, ವಿಮಾನ ನಿಲ್ದಾಣ, ಬ್ಯಾಂಕ್, ಸೇತುವೆಗಳು ಕಾಂಗ್ರೆಸ್ ಕೊಡುಗೆ. ಆದರೆ ಬಿಜೆಪಿ ಬ್ಯಾಂಕ್‌ಗಳನ್ನು ವಿಲೀನ ಮಾಡಿ ಆರ್ಥಿಕ ಬೆಳವಣಿಗೆಗೆ ಕಲ್ಲು ಹಾಕಿದೆ.
ಎಂದರು.

ಮೋದಿ ತೊಡೆ ಮೇಲೆ ದೇವೇಗೌಡರು :
ದೇವೇಗೌಡರು ಮೋದಿ ತೊಡೆಯ ಮೇಲೆ ಕೂತಿದ್ದಾರೆ. ಅವರ ಪಕ್ಷಕ್ಕೆ ಸೆಕ್ಯುಲರ್ ಹೆಸರಿದೆ. ಈ ಇಳಿ ವಯಸ್ಸಿನಲ್ಲಿ ಜಾತ್ಯತೀತ ಸಿದ್ಧಾಂತ ಬಿಟ್ಟು ಹೋಗಿದ್ದಾರೆ. ಈ ಮಾತನ್ನು ನಾನು ಮೋದಿಯವರ ಎದುರೇ ದೇವೇಗೌಡರಿಗೆ ಹೇಳಿದ್ದೇನೆ. ಈ ಸಲದ ರಾಜ್ಯ ಬಜೆಟ್ ನೋಡಿದರೆ ಈ ಬಾರಿ ನಾವು ೨೦ ಸೀಟು ಗೆಲ್ಲುತ್ತೇವೆ. ಇದಕ್ಕೆ ಎಲ್ಲರೂ ಕೆಳ ಹಂತದಲ್ಲಿ ಕೆಲಸ ಮಾಡದಿದ್ದರೆ ಏನು ಮಾಡಲಾಗದು. ಪಕ್ಷಕ್ಕೆ ಶಕ್ತಿ ತುಂಬುವವರು ಕಾರ್ಯಕರ್ತರು.

ಸದ್ಯಕ್ಕೆ ಒಂದು ಗ್ಯಾರಂಟಿ :
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಸಿದ್ಧವಾಗುತ್ತಿದೆ. ಛತ್ತೀಸಗಡದಲ್ಲಿ ಈಗಾಗಲೇ ಒಂದು ಗ್ಯಾರಂಟಿ ಘೋಷಿಸಲಾಗಿದೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆಗೆ ಲೀಗಲ್ ಗ್ಯಾರಂಟಿ ಕೊಡುವುದಾಗಿ ಹೇಳಿದ್ದೇವೆ.ಬಡವರು ದಲಿತರು ವೋಟಿನ ಅಧಿಕಾರ ಸಿಕ್ಕಿದ್ದು ಕಾಂಗ್ರೆಸ್ ಕಾಲದಲ್ಲಿ. ಅದನ್ನು ಮರೆಯಬೇಡಿ.ಇಲ್ಲವಾದರೆ ಅವರ ವಿಚಾರದಲ್ಲಿ ಹೋಗಿದ್ದರೆ ಮನುಸ್ಮೃತಿ ಬರುತ್ತಿತ್ತು.