ಕುರಾನ್ ಪಠಿಸಲು ಹೋಗುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಮೌಲ್ವಿ ಬಂಧನ

Advertisement

ಚಿತ್ರದುರ್ಗ: ಕುರಾನ್ ಪಠಿಸಲು ಹೋಗುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಮಸೀದಿಯ ಮೌಲ್ವಿ ಅಬ್ದುಲ್ ರಹೆಮಾನ್ ವಿರುದ್ಧ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿದ್ದು, ಆರೋಪಿ ಮೌಲ್ವಿಯನ್ನು ಸೇರಿ ಇಬ್ಬರನ್ನು ಬಂಧಿಸಲಾಗಿದೆ.
ಕಳೆದ 3 ವರ್ಷಗಳಿಂದ ಕುರಾನ್ ಪಠಿಸಲು ಬಾಲಕಿ ಮಸೀದಿಗೆ ಹೋಗುತ್ತಿದ್ದಳು. ಬಾಲಕಿಗೆ ದೆವ್ವ ಹಿಡಿದಿದೆ, ಮನೆಯಲ್ಲೇ ಪರಿಹಾರ ಪೂಜೆ ಮಾಡಬೇಕು ಎಂದು ಮೌಲ್ವಿ ಹೇಳಿದ್ದ. ಅದರಂತೆ ಮೌಲ್ವಿ 6-7 ತಿಂಗಳುಗಳ ಕಾಲ ವಾರಕೊಮ್ಮೆ ಮನೆಗೆ ಹೋಗಿದ್ದಾನೆ. ಮನೆಗೆ ಹೋದಾಗಲೆಲ್ಲ ಬಾಲಕಿ ಮತ್ತು ಆಕೆಯ ಸಹೋದರನನ್ನು ಕೋಣೆಯೊಳಗೆ ಕರೆದೊಯ್ಯುತ್ತಿದ್ದ. ಬಾಲಕಿ ತಾಯಿಯನ್ನು ಕೋಣೆಯ ಹೊರಗೆ ಇರುವಂತೆ ಹೇಳುತ್ತಿದ್ದ. ಬಾಲಕಿ ಸಹೋದರನಿಗೆ “ನಿನ್ನ ಸಹೋದರಿಗೆ ದೆವ್ವ ಮೆಟ್ಟಿದೆ” ಅಂತ ನಂಬಿಸಿದ್ದನು. ದೈಹಿಕ ಸುಖ ಕೊಟ್ಟರೆ ಶಾಂತಿ ಸಿಗುತ್ತದೆ ಎಂದು ಹೇಳಿದ್ದ. ಸದ್ಯ ಸಂತ್ರಸ್ತೆಯ ತಾಯಿ ನೀಡಿರುವ ದೂರಿನ ಮೇರೆಗೆ ಆರೋಪಿ ಮೌಲ್ವಿ ಹಾಗೂ ಬಾಲಕಿ ಸಹೋದರನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.