ಕುರುಹಿನಶೆಟ್ಟಿ ಬ್ಯಾಂಕ್‌ನಲ್ಲಿ 100 ಕೋಟಿ ಬ್ಯಾಂಕ್ ಹಗರಣ

KSCCOL
Advertisement

ಬೆಂಗಳೂರು: ಠೇವಣಿದಾರರಿಂದ ಸುಮಾರು ₹ 100 ಕೋಟಿ ಸಂಗ್ರಹಿಸಿ ವಂಚಿಸಿರುವ ಆರೋಪದಡಿ ಕುರುಹಿನಶೆಟ್ಟಿ ಸೌಹಾರ್ದ ಕ್ರೆಡಿಟ್ ಕೋ–ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸೇರಿ ಐವರನ್ನು ಕೆಂಪೇಗೌಡನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕ್​ ಮಾಜಿ ಅಧ್ಯಕ್ಷಬಿ.ಎಲ್.ಶ್ರೀನಿವಾಸ್ (64), ಉಪಾಧ್ಯಕ್ಷ ಬಿ.ಈಶ್ವರಪ್ಪ (71), ಬಿ.ಟಿ.ಮೋಹನ್ (75), ಉದ್ಯಮಿ ಪಿ. ಚಂದ್ರಶೇಖರ್ (55), ದಯಾನಂದ ಹೆಗ್ಡೆ (55). ಇವರಲ್ಲಿ ಬಿ.ಟಿ.ಮೋಹನ್ ಎಂಬಾತ ಸುರಭಿ ಚಿಟ್ ಫಂಡ್ ಕಂಪನಿಯ ಅಧ್ಯಕ್ಷನಾಗಿದ್ದು, ಇಲ್ಲಿ ಸಾಲ ಪಡೆದು ವಾಪಸ್​ ನೀಡದೇ ವಂಚಿಸಿದ್ದಾನೆ. ಬ್ಯಾಂಕ್​ ಠೇವಣಿದಾರರು ತಮ್ಮ ಹಣ ಹಿಂಪಡೆಯಲು ಅರ್ಜಿ ಸಲ್ಲಿಸಿದಾಗ ಅದು ಅಪ್ರೂವ್​ ಆಗುತ್ತಿರಲಿಲ್ಲ. ಪದೇ ಪದೇ ಇವರ ಮನವಿ ಅರ್ಜಿ ತಿರಸ್ಕೃತವಾಗುತ್ತಿತ್ತು. ಈ ಘಟನೆ ಪುನಾರ್ವತಿತವಾದಾಗ ಠೇವಣಿದಾರರಿಗೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಬ್ಯಾಂಕ್ ದಿವಾಳಿ ಆಗಿರೋದು ಬೆಳಕಿಗೆ ಬಂದಿದೆ. ಸಾವಿರಾರು ಜನರ ಬ್ಯಾಂಕ್​ನಲ್ಲಿರಿಸುವ ಹಣ ದುರ್ಬಳಕೆ ಆಗಿರೋದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ ಸಂಬಂಧ ಹಣ ಕಳೆದುಕೊಂಡ ಠೇವಣಿದಾರರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.