ಕೆಂಪೇಗೌಡ ಅವರನ್ನು ಒಂದು ಜಾತಿಗೆ ಸೀಮಿತ ಮಾಡಬಾರದು

Advertisement

ಬೆಂಗಳೂರು: ಕೆಂಪೇಗೌಡ ಅವರನ್ನು ಒಂದು ಜಾತಿಗೆ ಸೀಮಿತ ಮಾಡಬಾರದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ
ನಾಡಪ್ರಭು ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿ ಕೆಂಪೇಗೌಡ ಅವರನ್ನು ಒಂದು ಜಾತಿಗೆ ಸೀಮಿತ ಮಾಡಬಾರದು. ಅವರು ಒಕ್ಕಲಿಗ ಸಮುದಾಯಕ್ಕೆ‌ ಸೇರಿದವರೂ, ಎಲ್ಲ ಜಾತಿ ವರ್ಗಕ್ಕೆ‌ ಸೀಮಿತರಾದವರು. ಇಂದು ಬೆಂಗಳೂರು ಜಾಗತಿಕ ನಗರವಾಗಿ ಗುರುತಿಸಿಕೊಳ್ಳಲು ಭದ್ರ ಅಡಿಪಾಯ ಹಾಕಿದ ಕೆಂಪೇಗೌಡರಿಗೆ ಬಹುಶಃ ಈ ಊರು ಇಷ್ಟು ದೊಡ್ಡದಾಗಿ ಬೆಳೆಯುತ್ತದೆ ಎನ್ನುವ ಅಂದಾಜಿರಲಿಲ್ಲ. ಗಡಿ ಭಾಗದಲ್ಲಿ ಅವರು ನಿರ್ಮಿಸಿದ ನಾಲ್ಕು ಗೋಪುರಗಳನ್ನು ದಾಟಿ ಹತ್ತು ಪಟ್ಟು ದೊಡ್ಡದಾಗಿ ಬೆಂಗಳೂರು ಇಂದು ಬೆಳೆದಿದ್ದು 1.40 ಕೋಟಿ ಜನರು ಈಗ ವಾಸ ಮಾಡುತ್ತಿದ್ದಾರೆ. ಮಾಗಡಿ ರಸ್ತೆಯಲ್ಲಿರುವ ಸುಮ್ಮನಹಳ್ಳಿ ಬಳಿ 5 ಎಕರೆ ಜಾಗದಲ್ಲಿ ಪ್ರಾಧಿಕಾರದ ಕಚೇರಿ ನಿರ್ಮಾಣ ಮಾಡಲು ನಮ್ಮ ಸರ್ಕಾರ ತೀರ್ಮಾನ ಮಾಡಿದೆ. ಕೆಂಪೇಗೌಡರನ್ನು ಯಾವುದೇ ಕಾರಣಕ್ಕೂ ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರ ಪರಿಶ್ರಮದಿಂದಾಗಿ ಇಂದು ಎಲ್ಲ ಜಾತಿ, ಧರ್ಮದ ಜನರ ಶ್ರೇಯೋಭಿವೃದ್ಧಿಯಾಗಿದೆ ಎಂದರು.

ಸಿಎಂ ಸ್ಥಾನ ಬಿಟ್ಟು ಕೊಡಲಿ: ಸಿದ್ದರಾಮಯ್ಯ ಮುಖ್ಯಮಂತ್ರಿಯ ಅನುಭವ ಹೊಂದಿದವರಾಗಿದ್ದಾರೆ. ನಮ್ಮ ಸಮುದಾಯದ ಡಿ.ಕೆ ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಮುಂದೆ ಡಿ.ಕೆ ಶಿವಕುಮಾರ್ ಅವರಿಗೆ ಅಧಿಕಾರ‌ ಬಿಟ್ಟು ಕೊಡಲಿ. ಸಿಎಂ ಸಿದ್ದರಾಮಯ್ಯ ದೊಡ್ಡ ಮನಸ್ಸು ಮಾಡಿ ಸಿಎಂ ಸ್ಥಾನ ಬಿಟ್ಟು ಕೊಡಲಿ ಎಂದ ಸ್ವಾಮೀಜಿ ಹೇಳಿದ್ದಾರೆ.