ಕೆಪಿಸಿಸಿಗೆ ಮೇಜರ್ ಸರ್ಜರಿ: ಯು.ಬಿ. ವೆಂಕಟೇಶ್ ಸೇರಿ ೨೧ ಮುಖ್ಯ ವಕ್ತಾರರ ನೇಮಕ

ಶ್ರೀ ಯು.ಬಿ ವೆಂಕಟೇಶ

ಅಧ್ಯಕ್ಷರು
Advertisement

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಕಾರ್ಯಾಧ್ಯಕ್ಷರು ಸೇರಿದಂತೆ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಿದ್ದ ಕಾಂಗ್ರೆಸ್ ಪಕ್ಷ ಇದೀಗ ಮಾಧ್ಯಮ ಮತ್ತು ಸಂವಹನ ವಿಭಾಗಕ್ಕೆ ಮೇಜರ್ ಸರ್ಜರಿ ಮಾಡಿದೆ. ಮೇಲ್ಮನೆ ಸದಸ್ಯರಾದ ಯು.ಬಿ.ವೆಂಕಟೇಶ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಸಹಿತ ೨೧ ಮುಖಂಡರನ್ನು ಕೆಪಿಸಿಸಿಯ ರಾಜ್ಯ ಮುಖ್ಯ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ.
ನೂತನ ನೇಮಕಾತಿ ಕುರಿತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದು, ಡಾ.ಶಂಕರ್ ಗುಹಾ, ಮಾಜಿ ಸಂಸದೆ ತೇಜಸ್ವಿನಿಗೌಡ, ಶಾಸಕರಾದ ಹೆಚ್.ಸಿ.ಬಾಲಕೃಷ್ಣ, ರಿಜ್ವಾನ್ ಅರ್ಷದ್, ಬೇಳೂರು ಗೋಪಾಲಕೃಷ್ಣ, ಕೋನರೆಡ್ಡಿ, ಶಿವಾನಂದ ಕೌಜಲಗಿ, ಪಿ.ಎಂ.ನರೇಂದ್ರಸ್ವಾಮಿ, ಮೇಲ್ಮನೆ ಸದಸ್ಯರಾದ ಪ್ರಕಾಶ್ ರಾಥೋಡ್, ನಾಗರಾಜ್ ಯಾದವ್, ಮಾಜಿ ಸಚಿವ ಹೆಚ್.ಎಂ.ರೇವಣ್ಣ ಸೇರಿದಂತೆ ೨೧ ಮಂದಿ ನೇಮಕವಾಗಿದ್ದಾರೆ.
ಮಂಜುನಾಥ ಅದ್ದೆ, ಬಿ,ಆರ್.ನಾಯ್ಡು, ಸ್ವಾತಿ ಚಂದ್ರಶೇಖರ್ ಸೇರಿದಂತೆ ೩೬ ಮಂದಿ ರಾಜ್ಯ ವಕ್ತಾರರಾಗಿ ನೇಮಕಗೊಂಡಿದ್ದಾರೆ. ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ಸಮನ್ವಯಾಧಿಕಾರಿಯಾಗಿ ಜಿ.ಸಿ.ರಾಜುಗೌಡ, ಸಹ ಸಮನ್ವಯಕಾರರಾಗಿ ರವಿಗೌಡ, ಅಬ್ದುಲ್ ಮುನೀರ್, ಇಫ್ರಾನ್ ಹಾಗೂ ಹೆಚ್.ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.