ಕೊಕೊ ಗೌಫ್‌ಗೆ ಚೊಚ್ಚಲ ಗ್ರ್ಯಾಂಡ್‌ ಸ್ಲ್ಯಾಮ್‌ ಪ್ರಶಸ್ತಿ

Advertisement

ನ್ಯೂಯಾರ್ಕ್: ಯುಎಸ್ ಓಪನ್ ೨೦೨೩ರ ಫೈನಲ್‌ನಲ್ಲಿ ೧೯ವರ್ಷ ವಯಸ್ಸಿನ ಅಮೆರಿಕದ ಕೊಕೊ ಗೌಫ್ ವಿಶ್ವದ ನಂ.೧ ಆಟಗಾರ್ತಿ ಆರ್ನಾ ಸಬಲೆಂಕಾ ಅವರನ್ನು ಸೋಲಿಸಿ ಚೊಚ್ಚಲ ಗ್ರ್ಯಾಂಡ್‌ ಸ್ಲ್ಯಾಮ್‌ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸಿದರು.
ಇಲ್ಲಿನ ಆರ್ಥರ್ ಆಶೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬೆಲಾರಸ್ಸಿನ ಸೆಬಲಂಕಾ ವಿರುದ್ಧ ಕೊಕೊ ಗೌಫ್ ೨-೬, ೬-೩, ೬-೨ ಸೆಟ್‌ಗಳಿಂದ ಗೆದ್ದು ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಗೌಫ್ ಮೊದಲ ಸೆಟ್ ಸೋತರೂ, ನಂತರದ ಎರಡೂ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಇದು ಗೌಫ್‌ಗೆ ಮೊದಲ ಗ್ರ್ಯಾಂಡ್‌ ಸ್ಲ್ಯಾಮ್‌ ಪ್ರಶಸ್ತಿಯಾಗಿದೆ.
ಸೆರೆನಾ ವಿಲಿಯಮ್ಸ್ ಬಳಿಕ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಗೌಫ್ ಪಾತ್ರರಾದರು. ೧೯೯೯ರಲ್ಲಿ ಸೆರೆನಾ ೧೮ ವರ್ಷದವಳಿದ್ದಾಗ ಫೈನಲ್‌ನಲ್ಲಿ ಮಾರ್ಟಿನಾ ಹಿಂಗಿಸ್ ಅವರನ್ನು ೬-೩, ೭-೬ (೭-೪) ಸೆಟ್‌ಗಳಿಂದ ಸೋಲಿಸಿದ್ದರು.