ಕೊಡಲಿಯಿಂದ ಕೊಚ್ಚಿ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

Advertisement

ಕಲಾದಗಿ: ಗಂಡನೇ ಹೆಂಡತಿಯನ್ನು ಕೊಡಲಿಯಿಂದ ಕೊಚ್ಚಿ‌ಕೊಲೆ ಮಾಡಿರುವ ದುರ್ಘಟನೆ ಸಮೀಪದ ಹಿರೇಸಂಶಿಯಲ್ಲಿ ನಡೆದಿದೆ, ಇಂದು ಮುಂಜಾನೆ ೫ ಗಂಟೆ ಸುಮಾರಿಗೆ ಆಕೆಯ ತೋಟದ ಮನೆಯಲ್ಲಿ ಸಂಭವಿಸಿದೆ.
ಮಾಯವ್ವ ಉಡ್ಡಣ್ಣವರ(೪೩) ಎಂಬಾಕೆಯೆ ತನ್ನ ಪತಿ ಶಿವಪ್ಪ ಉಡ್ಡಣ್ಣವರ ಎಂಬಾತನಿಂದ ಹತ್ಯೆಯಾದ ಮಹಿಳೆಯಾಗಿದ್ದು. ಕೊಡಲಿಯಿಂದ ಪತ್ನಿಯ ಕತ್ತಿನ ಭಾಗಕ್ಕೆ ಹೊಡೆದು ಹತ್ಯೆ ಮಾಡಿರುವ ಈತ, ಆ ಕ್ಷಣ ಅಲ್ಲಿಂದ ಪರಾರಿಯಾಗಿದ್ದಾನೆ.
ಈತ ಸಾಲ ಮಾಡಿದ್ದು ಸಾಲ ತೀರಿಸಲು ಹೆಂಡತಿಯನ್ನು ಹಾಗೂ ಮಾವನನ್ನು ಪೀಡಿಸುತ್ತಿದ್ದ ಎನ್ನಲಾಗಿದೆ.
ಸ್ಥಳಕ್ಕೆ ಹಿರಿಯ ಪೊಲಿಸ್ ಅಧಿಕಾರಿಗಳು ಭೆಟಿ ನೀಡಿದ್ದು ಕ್ರಮ ಕ್ಯೆಗೊಂಡಿದ್ದಾರೆ